ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಸಮರ್ಪಕ ವಿದ್ಯತ್ ನೀಡದೆ ಬೆಸ್ಕಾ ಅಧಿಕಾರಿಗಳ ರೈತ ವಿರೋದಿ ದೋರಣೆ ಖಂಡಿಸಿ ಮುತ್ತಿಗೆ ಹಾಕಲು-ರೈತ ಸಂಘ ತಿರ್ಮಾನ

ಶ್ರೀನಿವಾಸಪುರ, ಆ.20: ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಸಮರ್ಪಕ ವಿದ್ಯತ್ ನೀಡದೆ ಬೆಸ್ಕಾ ಅಧಿಕಾರಿಗಳ ರೈತ ವಿರೋದಿ ದೋರಣೆ ಖಂಡಿಸಿ ಗುಣಮಟ್ಟದ 10 ತಾಸು ವಿದ್ಯತ್‍ಗಾಗಿ ಆಗಸ್ಟ್ 23 ರ ಬುಧವಾರ ನಷ್ಟ ಬೆಳೆ ಸಮೇತ ಬೆಸ್ಕಾಂ ಇಲಾಖೆ ಮುತ್ತಿಗೆ ಹಾಕಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ರೈತ ಸಂಘಧ ಸಭೆಯಲ್ಲಿ ತಿರ್ಮಾನಿಸಲಾಯಿತು.
ಬರದಿಂದ ಬಸವಳಿದಿರುವ ರೈತರ ಕೃಷಿ ಪಂಪ್‍ಸೆಟ್‍ಗಳಿಗೆ 7 ತಾಸು ವಿದ್ಯುತ್ ಪೂರೈಕೆ ಮಾಡದೆ ರೈತರನ್ನು ಕಂಗೆಡಿಸುತ್ತಿರುವ ಲೋಡ್ ಶೆಡ್ಡಿಂಗ್ ಸೃಷ್ಠಿಸಿರುವ ಬೆಸ್ಕಾಂ ಅಧಿಕಾರಿಗಳ ವಿರುದ್ದ ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‍ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಒಂದು ಎಕರೆ ತೋಟಕ್ಕೆ ನೀರು ಹಾಯಿಸಬೇಕಾದರೆ ದಿನದ 24 ಗಂಟೆ ಸಂಸಾರವನ್ನು ಬಿಟ್ಟು ಕೊಳವೆ ಪಂಪ್‍ಸೆಟ್‍ಗಳ ಬಳಿ ವಾಸ ಮಾಡಬೇಕಾದ ಪರಿಸ್ಥಿತಿಯನ್ನು ಬೆಸ್ಕಾಂ ಅದಿಕಾರಿಗಳು ಉಚಿತವಾಗಿ ನೀಡುವ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಪೂರ್ವಜರ ಕಾಲದ ಬುಡ್ಡಿ ದೀಪಗಳ ಕತ್ತಲ ಭಾಗ್ಯವನ್ನು ಕರುಣಿಸುವುದಕ್ಕೆ ಸಭೆಯಲ್ಲಿ ಬೆಸ್ಕಾಂ ಅಧಿಕಾರಿಗಳಿಗೆ ದನ್ಯವಾದ ತಿಳಿಸಿದರು.
ಸರ್ಕಾರ ಕೂಡಲೇ ಇಂತಹ ಅಧಿಕಾರಿಗಳನ್ನು ಗುರುತಿಸಿ ಚಿನ್ನದ ಪದಕ ನೀಡಿ ಸನ್ಮಾನಿಸುವ ಮುಖಾಂತರ ರೈತ ವಿರೋದಿ ದೋರಣೆ ಅನುಸರಿಸಿ ರೈತರ ಬೆಳೆ ನಾಶಕ್ಕೆ ಕಾರಣ ಆಗಿರುವ ಇವರನ್ನು ಪ್ರತಿ ರೈತ ಕುಟುಂಬಗಳ ಮನೆ ಮುಂದೆ ಪೋಟೋ ಅಳವಡಿಸಬೇಕೆಂದು ಸಭೆಯಲ್ಲಿ ಇಂಧನ ಸಚಿವರನ್ನು ಆಗ್ರಹಿಸಿದರು.
ತಾಲ್ಲೂಕಾದ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ಬಹುತೇಕ ರೈತರು ತೋಟದ ಮನೆಗಳಲ್ಲಿ ವಾಸವಾಗಿರುವುದರಿಂದ ನಿರಂತರ ಜ್ಯೋತಿ ಆ ಮನೆಗಳಿಗೂ ವಿದ್ಯುತ್ ಕೋಡಬೇಕೆಂಬ ಬೇಡಿಕೆ ಇದೆ. ಆದರೆ ರಾತ್ರಿ ವೇಳೆ ವಿದ್ಯುತ್ ಕಡಿತ ಮಾಡುವುದರಿಂದ ಕಾಡುಪ್ರಾಣಿಗಳ ಹಾವಳಿ ಜೊತೆಗೆ ಕಳ್ಳಕಾಕರ ಭಯದಲ್ಲಿ ರೈತರು ಜೀವನ ನಡೆಸುವ ಮಟ್ಟಕ್ಕೆ ಬೆಸ್ಕಾಂ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆಂದು ಕಿಡಿ ಕಾರಿದರು.
ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಣಿಗಳ ಕಾರ್ಯಕ್ರಮಗಳಿಗೆ ಕೈಗಾರಿಕಾ ಪ್ರದೇಶಗಳಿಗೆ ವಿದ್ಯುತ್ ನೀಡಲು ಲೋಡ್ ಶೆಡ್ಡಿಂಗ್ ಇಲ್ಲ, ಆದರೆ ರೈತರು ಬೆಳೆದ ಅನ್ನ ತಿಂದು ರೈತರ ಬೆಳೆಗಳಿಗೆ ಗುಣಮಟ್ಟದ ವಿದ್ಯುತ್ ನೀಡುವಲ್ಲಿ ಅಧಿಕಾರಿಗಳ ತಾರತಮ್ಯವೇಕೆ ಎಂದು ಪ್ರಶ್ನೆ ಮಾಡುವ ಜೊತೆಗೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆ ವಿದ್ಯುತ್ ಇಲ್ಲದೆ ನಾಶ ಆದರೆ ಆಯಾ ವ್ಯಾಪ್ತಿಯ ಬೆಸ್ಕಾಂ ಅಧಿಕಾರಿಗಳ ಜನಪ್ರತಿನಿದಿಗಳ ಆಸ್ತಿ ಹರಾಜು ಹಾಕಿ ರೈತರಿಗೆ ಪರಿಹಾರ ನೀಡುವ ಕಾನೂನು ಜಾರಿ ಹಾಗೂ ಸಮರ್ಪಕ ವಿದ್ಯುತ್ ಗಾಗಿ ಆ.23 ರ ಬುಧವಾರದಂದ ಬೆಸ್ಕಾಂ ಇಲಾಖೆ ಮುಂದೆ ನಷ್ಟ ಬೆಳೆ ಸಮೇತ ಹೋರಾಟ ಮಾಡುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತೆಂದರು
ಹೋರಾಟದಲ್ಲಿ ಶೇಕ್‍ಶಪಿಹುಲ್ಲಾ, ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಆಲವಟ್ಟಿ ಶಿವ, ವೆಂಕಟ್, ಸಹದೇವಣ್ಣ, ಶೆಕ್‍ಶಪಿವುಲ್ಲಾ , ಸಂತೋಷ್, ಸುಪ್ರೀಂ ಚಲ, ಕೇಶವ, ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ಯಲ್ಲಪ್ಪ, ನರಸಿಂಹಯ್ಯ, ಪಾರಾಂಡಹಳ್ಳಿ ಮಂಜುನಾಥ್, ಹೆಬ್ಬಣಿ ಅನಂದ್‍ರೆಡ್ಡಿ, ಮಂಜುಳಾಮ್ಮ, ಶೈಲಜ, ರಾಧ, ಬೈರಮ್ಮ, ನಾಗರತ್ನ ಮುಂತಾದವರಿದ್ದರು.