ಆಧುನಿಕ ಯುಗದಲ್ಲಿ ದೈಹಿಕ ಶ್ರಮ ಇಲ್ಲದೆ ಕಾಯಿಲೆಗಳನ್ನು ಹಣ ಕೊಟ್ಟು ಸ್ವಾಗತಿಸುತ್ತಿದ್ದೇವೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಆಧುನಿಕ ಯುಗದಲ್ಲಿ ಜನರು ದೈಹಿಕ ಶ್ರಮ ಇಲ್ಲದೆ ಕಾಯಿಲೆಗಳನ್ನು ಹಣ ಕೊಟ್ಟು ಸ್ವಾಗತಿಸುತ್ತಿದ್ದಾರೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗಾಭ್ಯಾಸ ಎಲ್ಲರು ಕಲಿಯಬೇಕೆಂದು ಪ್ರಾಥಮಿಕ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಆರ್.ರವಿಕುಮಾರ್ ಹೇಳಿದರು.
ಪಟ್ಟಣದ ತ್ಯಾಗರಾಜ ಬಡಾವಣೆಯಲ್ಲಿನ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಶ್ರೀನಿವಾಸಪುರ ಶಾಖೆಯಿಂದ ಯೋಗ ಮಂದಿರದಲ್ಲಿ ಏರ್ಪಡಿಸಿದ್ದ 86 ನೇ ಯೋಗಾಭ್ಯಾಸ ಮತ್ತು ಪ್ರಾಣಾಯಾಮ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪೌಷ್ಟಿಕ ಆಹಾರದ ಕೊರತೆಯಿಂದ ಮಾನುಷ್ಯನಿಗೆ ನಾನಾ ಕಾಯಿಲೆಗಳು ಬರುತ್ತಿವೆ. ದೇಹಕ್ಕೆ ರೋಗ ನಿರೋದಕ ಶಕ್ತಿ ತುಂಬಲು ನಿತ್ಯ ಯೋಗಾಬ್ಯಾಸ ಮಾಡಿ ದೇಹ ದಂಡಿಸುವುದರಿಂದ ಉಸಿರಾಟದ ತೊಂದರೆ ಕೀಳು ನೋವು, ಹೃದಯಾಘಾತದಂತಹ ಅನೇಕ ಸಮಸ್ಯೆಗಳು ದೂರಗವಾಗುತ್ತವೆ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ, ಎನ್ನುವಂತೆ ಯೋಗ ಬಲ್ಲವರಿಗೆ ಕಾಯಿಲೆಗಳಿಲ್ಲ. ಇಂದು ಶಿಕ್ಷಣ ಮತ್ತು ಆಸ್ಪತ್ರೆಗೆಳಿಗೆ ಹೆಚ್ಚು ಹಣ ವ್ಯಯ ಮಾಡುತ್ತಿದ್ದೇವೆಂದರು.
ಆರೋಗ್ಯ ಇಲಾಖೆ ಉಷಾ ಪ್ರೇಮಕುಮಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಶ್ವದ ಪಶ್ಚಿಮಾತ್ಯರು ನಮ್ಮ ಸಂಸ್ಕøತಿ ಪರಂಪರೆ ಯೋಗಾಭ್ಯಾಸ ಬೇಕೆಂದು ಆತೊರೆಯುತ್ತಿದ್ದಾರೆ. ನಾವ್ಯಾಕೆ ನಿಷ್ಕ್ರಿಯಾಗಿದೇವೆ ? ಅವರು ಯೋಗ್ಯ ಜೀವನ ಮಾಡಲು ಪ್ರಪಂಚದ 198 ರಾಷ್ಟ್ರಗಳಲ್ಲಿ ಯೋಗಾಭ್ಯಾಸ ಕಲಿಯಲು ಆದ್ಯತೆ ನೀಡಿ ವಿಶ್ವ ಯೋಗಕ್ಕೆ ಆದ್ಯತೆ ಕೊಟ್ಟಿದ್ದಾರೆ. ನಾವು ಜೀವನದಲ್ಲಿ ನಿತ್ಯ ನಿರಂತರ ಯೋಗಾಭ್ಯಾಸ ಮಾಡಬೇಕೆಂದರು.
ಸಮಿತಿ ಕಾರ್ಯದರ್ಶಿ ಮತ್ತು ಮುಖ್ಯ ಶಿಕ್ಷಕ ಕೆ.ಎಂ.ಚೌಡಪ್ಪ ಪ್ರಾಸ್ತಾವಿಕವಾಗಿ ಮಾತನಾಡ ಹುಟ್ಟುತ್ತಾ ಹೋಗ್ತಾ ಬರಿಗೈಲಿ ಹೋಗುತ್ತೇವೆ ಎನ್ನುವುದು ಮರೆತು, ಹಣ ಆಸ್ತಿ ಗಳಿಸುವುದರಲ್ಲೇ ಆಯಸು ಆರೋಗ್ಯ ಕ್ಷೀಣಿಸಿದಾಗ ನಾವು ಗಳಿಸಿದ್ದ ಸಂಪತು ನಮ್ಮೊಂದಿಗೆ ಬರುವುದಿಲ್ಲ. ಹಿಂದಿನ ಕಾಲದಲ್ಲಿ ನಲ್ಕೈದು ಮಕ್ಕಳಿದ್ದರು ಆರೋಗ್ಯವಾಗಿದ್ದರು. ಇಂದು ನಾವಿಬ್ಬರು ನಮಗೊಂದು ಮಗು ಎನ್ನುವ ಜನ ಆರೋಗ್ಯ ಕಾಪಾಡಿಕೊಳ್ಳಲು ಪ್ರಥಮ ಆದ್ಯತೆ ಕೊಟ್ಟು ಉಚಿತವಾಗಿ ಕಲಿಸುವ ಯೋಗಾಬ್ಯಾಸ ಶಿಬಿರ ಸದ್ಬಗಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ಲೀಲಾವತಿ-ರಮ್ಯ ಪ್ರಾರ್ಥಿಸಿ, ವರಲಕ್ಷ್ಮಮ್ಮ ನಿರೂಪಿಸಿ, ವೆಂಕಟರತ್ನಮ್ಮ ವಂದಿಸಿದರು.
26 ಶ್ರೀನಿವಾಸಪುರ2 ; ಯೋಗ ಮಂದಿರದಲ್ಲಿ ನಡೆದ ಯೋಗಾಬ್ಯಾಸ ಮತ್ತು ಪ್ರಾಣಾಯಾಮ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು.