ಶ್ರೀನಿವಾಸಪುರ : ಗ್ರಾಮೀಣ ಭಾಗದ ಹಳ್ಳಿಗಳಲ್ಲಿನ ಸಾರ್ವಜನಿಕರು ನಕಲಿ ಕಂಪನಿಗಳಿಂದ ಮೋಸಹೋಗುತ್ತಿದ್ದಾರೆ. ಇದನ್ನ ತಡೆಗಟ್ಟುವ ಉದ್ದೇಶದಿಂದ ನಕಲಿ ಕಂಪನಿಗಳು ಮಾಡುತ್ತಿರುವ ಮೋಸಗಳ ಬಗ್ಗೆ ಅರಿವು ಮೂಡಿಸಿಬೇಕು. ನಂತರ ಎಲ್ಐಸಿಯ ಉದ್ದೇಶದ ಬಗ್ಗೆ ಅರಿವು ಮೂಡಿಸಿ, ಎಲ್ಐಸಿ ಕಂಪನಿಯಿಂದ ಹೊಸ ಪಾಲಿಸಿಗಳ ಬಗ್ಗೆ ಪರಿಚಯ ಮಾಡಿಸಿ, ಅರಿವು ಮೂಡಿಸಿ ಪಾಲಿಸಿದಾರರನ್ನಾಗಿ ಮಾಡಿಸಿಲು ಮುಂದಾಗಬೇಕು ಎಂದು ಜಿಲ್ಲಾ ಎಲ್ಐಸಿ ಶಾಖಾ ವ್ಯವಸ್ಥಾಪಕ ಎನ್.ಆರ್.ಸಿದ್ದೇಶ್ ಸಲಹೆ ನೀಡಿದರು.
ಪಟ್ಟಣದ ಎಲ್ಐಸಿ ಉಪಶಾಖೆ ಕಛೇರಿಯಲ್ಲಿ ಮಂಗಳವಾರ ತಾಲೂಕಿನ ಎಲ್ಐಸಿ ಪ್ರತಿನಿದಿಗಳ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಪಟ್ಟಣದ ಉಪಶಾಖೆ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಆರ್.ಕುಲಕರ್ಣಿ ಮಾತನಾಡಿ ಎಲ್ಐಸಿ ಕಂಪನಿಯು ದೇಶದಲ್ಲಿ ದೊಡ್ಡಕಂಪನಿಯಾಗಿದ್ದು, ಕಂಪನಿಯು ದೇಶದಲ್ಲಿ ಆಗುವಂತಹ ಅತಿವೃಷ್ಟಿ, ಅನಾವೃಷ್ಟಿ ಸಮಯದಲ್ಲಿ ಕೇಂದ್ರ ಸರ್ಕಾರಕ್ಕೆ ಬೆನ್ನುಲಬಾಗಿ ನಿಂತು ಅತಿವೃಷ್ಟಿ, ಅನಾವೃಷ್ಟಿ ಸಹಕಾರ ನೀಡುತ್ತಿದೆ. ಎಲ್ಐಸಿ ಕಂಪನಿಯು ನಂಬಿಕೆಯ ಕಂಪನಿಯಾಗಿರುವ ಬಗ್ಗೆ ಪಾಲಿಸಿದಾರರಾಗಿ ಮನಮಟ್ಟುವಂತೆ ಅರಿವು ಮೂಡಿಸಿ ಎಲ್ಐಸಿ ಪಾಲಿಸಿದಾರರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಶಾಖೆಯ ಉಪ ವ್ಯವಸ್ಥಾಪಕ ವಿಜಯಕುಮಾರಿ, ಸ್ಥಳೀಯ ಉಪಶಾಖೆ ವ್ಯವಸ್ಥಾಪಕ ಎಚ್.ಸಿ.ಪ್ರಸಾದ್, ಹಿರಿಯ ಅಧಿಕಾರಿ ರವಿಶಂಕರ್ ಇದ್ದರು.