ಶ್ರೀನಿವಾಸಪುರ : ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರವು ಜಾತಿ ಜಾತಿಗಳ ಮಧ್ಯೆ ವಿಷ ಬಿತ್ತುತ್ತಿದ್ದಾರೆ. ಒಂದು ಸಮಾಜವನ್ನು ಒಲೈಕೆ ಮಾಡುವ ಉದ್ದೇಶದಿಂದ 100 ಕೋಟಿ ಅನುದಾನದ ಮೂಲಕ ವಕ್ಟ್ ಬೋರ್ಡ್ನ ಹಜರತ್ ಗಳಿಗೆ ತರಬೇತಿಗೆ ನೀಡುತ್ತಿದ್ದಾರೆ. ಅಲ್ಲದೆ ಕ್ರಿಶ್ಚಿನ್ ಸಮುದಾಯಕ್ಕೆ 200 ಕೋಟಿ ಅನುದಾನವನ್ನು ಕೊಡುತ್ತಿದೆ . ರಾಜ್ಯದಲ್ಲಿ ಬೇರೆ ಸಮುದಾಯಗಳು ಇಲ್ಲವೆ ಕೇವಲ ಒಂದು ಸಮಾಜವನ್ನು ಒಲೈಕೆ ಮಾಡುತ್ತಿರುವುದು ಎಷ್ಟು ಸರಿ. ಸಿದ್ದರಾಮಯ್ಯನವರು ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ರೀತಿಯಲ್ಲಿ ವ್ಯವಹರಿಸುತ್ತಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಸರ್ಕಾರಕ್ಕೆ ಟಾಂಗ್ ನೀಡಿದರು.
ತಾಲೂಕಿನ ಕೂಲಗುರ್ಕಿ ಗ್ರಾಮದಲ್ಲಿ ಶುಕ್ರವಾರ ನಡೆದ ಗಂಗಮಾಂಭ ದೇವಿ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ ರಾಜ್ಯಕ್ಕೆ ಕೇವಲ 62 ಸಾವಿರ ಕೋಟಿ ಯಿಂದ 81 ಸಾವಿರ ಕೋಟಿ ಮಾತ್ರ ಕೊಡುತ್ತಿದ್ದು, ಆದರೆ ನರೇಂದ್ರ ಮೋದಿ ರವರು ರಾಜ್ಯ 2.82 ಸಾವಿರ ಕೋಟಿ ಅನುದಾನವನ್ನು ಕೊಡುತ್ತಿದೆ . ಕೋಲಾರ ಲೋಕಾಸಭಾ ಕ್ಷೇತ್ರಕ್ಕೆ ಸಂಬಂದಸಿದಂತೆ 5 ವರ್ಷಗಳಲ್ಲಿ 15 ಸಾವಿರ ಕೋಟಿ ಅನುದಾನ ಮೂಲಕ ಚನೈಎಕ್ಸ್ ಪ್ರೆಸ್ ರಸ್ತೆ ಕಾಮಗಾರ ಚಾಲನೆಯಲ್ಲಿದೆ. ಶ್ರೀನಿವಾಸಪುರ ಬೈಪಾಸ್ಗೆ 205 ಕೋಟಿ, ಜಲಜೀವನ್ ಮಿಷನ್ಗೆ 1880 ಕೋಟಿ, ರೈಲ್ವೆ ಇಲಾಖೆ ಅಭಿವೃದ್ಧಿಗೆ 500 ಕೋಟಿ ಹೀಗೆ ಅನೇಕ ಕೇಂದ್ರ ಸರ್ಕಾರದ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಇನ್ನು ರಾಜ್ಯ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನೆಸಿದರು.
ರಾಜ್ಯ ಸರ್ಕಾರದ ಖಾಜನೆ ಖಾಲಿಯಾಗಿದ್ದು, ಖಾಲಿ . ಖಾಲಿ ಇರುವ ಡಬ್ಬದಲ್ಲಿ ಕಲ್ಲುಗಳನ್ನು ಹಾಕುವುದರ ಮೂಲಕ ಶದ್ಧ ಮಾಡುತ್ತಿದ್ದು , ಇದೆಲ್ಲಾ ಚುನಾವಣೆ ಗಿಮಿಕ್ ಎಂದರು.
ರಾಜ್ಯದಲ್ಲಿ ಎನ್ಡಿಎ ಮೈತ್ರಿಯಲ್ಲ 28 ಕ್ಕೆ 28 ಸ್ಥಾನಗಳು ಬರಲಿದೆ ಎಂದು ಭರವಸೆ ನೀಡಿ, 3ನೇ ಬಾರಿ ನರೇಂದ್ರ ಮೋದಿರವರು ಪ್ರಧಾನ ಮಂತ್ರಿಗಳು ಆಗುವುದು ಖಚಿತ . ವಿಶ್ವದಲ್ಲಿ ಭಾರತವು ಅಭಿವೃದ್ಧಿಯಲ್ಲಿ ಪ್ರಥಮ ಸ್ಥಾನ ಪಡೆಯುವುದು ಖಚಿತ ಎಂದರು. ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ರಾಜ್ಯವನ್ನು ಮಾಡುತ್ತೇವೆ ಎಂದು ಭರವಸೆ ಇತ್ತರು. ರಾಜ್ಯದಲ್ಲಿ 5 ಗ್ಯಾರಂಟಿಗಳು ಟಸ್ ಪಟಾಕಿಯಂತೆ ಇದೆ ಎಂದರು
ರಥೋತ್ಸವವು ಜಾನಪದ ತಂಡಗಳು ಹಾಗೂ ಇತರೆ ಸಾಂಸ್ಕøತಿಕ ತಂಡಗಳ ನೇತೃತ್ವದಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ರಥೋತ್ಸದಲ್ಲಿ ಕಬ್ಬಡಿ ಪಂದ್ಯಾವಳಿಯಲ್ಲಿ ವಿಜೇತರಾದ ಡಿಎಸ್ಆರ್ ತಂಡ ಪ್ರಥಮ ಬಹಮಾನ ಪಡೆದು, ಎರಡನೇ ಬಹುಮಾನ ಮುತ್ತಕಪಲ್ಲಿಯ ಪ್ಲಾನೆಟ್ ಪ್ಯಾóಷನ್ ತಂಡಕ್ಕೆ ಪಾರಿತೋಷಕವನ್ನು ಸಂಸದ ಎಸ್.ಮುನಿಸ್ವಾಮಿ ವಿತರಿಸಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲ್, ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಆರ್.ಎನ್.ರೋಣೂರು ಚಂದ್ರಶೇಖರ್, ಜಿ.ಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಆರ್ಐ ವಿನೋಧ್, ಮುಖಂಡರಾದ ಬುಲೆಟ್ ವೆಂಕಟರೆಡ್ಡಿ, ಬಜಾಜ್ನಾರಾಯಣಸ್ವಾಮಿ, ಅಡವಿಚಂಬಕೂರು ಸದಾಶಿವ ಇದ್ದರು.