ಮಿಜೋರಾಂ ನಲ್ಲಿ ಹೊಸ ವೈರಸ್ ಗೆ ಸುಮಾರು 5 ಸಾವಿರ ಹಂದಿ ಬಲಿ

JANANUDI.COM NETWORK

ಮಿಜೋರಾಂ, ಪ್ರಸ್ತುತ ಇಡೀ ದೇಶ ದೊರೊನಾ ವೈರಸ್ ನಿಂದ ತೊಳಲಾಡುತ್ತಿರುವಾಗ, ರಾಜ್ಯ ಮಿಜೋರಾಂನಲ್ಲಿ ಹೊಸ ಹೊಸ ವೈರಸ್ ಯಾಗಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತಿವೆ. ಈಶಾನ್ಯ ರಾಜ್ಯ ಮಿಜೋರಾಂ ನಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್ಎಫ್) ವೈರಸ್ ಕಾಣಿಸಿಕೊಂಡು ದಿನೇ ದಿನೇ ಹೆಚ್ಚಾಗುತ್ತಿರುವುದು ಇದೀಗ ಹೊಸ ಆತಂಕ ಸೃಷ್ಟಿಸಿದೆ.

     ಎರಡು ತಿಂಗಳಲ್ಲೇ ಈ ವೈರಸ್ ನಿಂದ ಸುಮಾರು 5 ಸಾವಿರ ಹಂದಿಗಳು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ.  ಇದರಿಂದಾಗಿ ಸುಮಾರು ರೂ.19 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದಾರೆ.

      ಮಾರ್ಚ್ 21 ರಂದು ಲುಂಗ್ಲೆ ಜಿಲ್ಲೆಯ ಗ್ರಾಮವೊಂದರಲ್ಲಿ ಮೊದಲು ಈ ರೋಗ ಪತ್ತೆಯಾಗಿದ್ದು, ಈಗ 9 ಜಿಲ್ಲೆಗಳಿಗೆ ಇದು ವ್ಯಾಪಿಸಿದೆ. ಹೀಗಾಗಿ 91 ಗ್ರಾಮಗಳನ್ನು ಹಂದಿ ಜ್ವರ (ಸ್ವೈನ್ ಫೀವರ್) ಪೀಡಿತ ಪ್ರದೇಶ ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಹಂದಿ ಜ್ವರ ಪೀಡಿತ ಪ್ರದೇಶಗಳಲ್ಲಿ ಸುಮಾರು 32 ಸಾವಿರಕ್ಕೂ ಹೆಚ್ಚು ಹಂದಿಗಳಿದ್ದು, ಅವುಗಳನ್ನು ರಕ್ಷಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

      ಇದೇ ಮೊದಲ ಬಾರಿ ಮಿಜೋರಾಂ ನಲ್ಲಿ ಇಂತಹದ್ದೊಂದು ಕಾಯಿಲೆ ಕಾಣಿಸಿಕೊಂಡಿದ್ದು, ನೆರೆಯ ರಾಜ್ಯಗಳು ಮತ್ತು ದೇಶದಿಂದ ಹಂದಿಗಳನ್ನು ಅಕ್ರಮವಾಗಿ ಆಮದು ಮಾಡಿಕೊಂಡ್ಡ ಪರಿಣಾಮವಾಗಿ ಈ ರೋಗ  ಕಾಣಿಸಿಕೊಳ್ಳಲು ಕಾರಣ ಇರಬೇಕೆಂದು ಹೇಳಲಾಗುತ್ತಿದೆ. ಮಿಜೋರಾಂ ನ ಜನರು ಹಂದಿ, ಕೋಳಿ ಮತ್ತು ಗೋ ಮಾಂಸ ಹೆಚ್ಚು ಸೇವನೆ ತಿನ್ನುತ್ತಾರೆ.ಇಂತಹ ಪಾಕಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ.