

ಕುಂದಾಪುರ; ಎಪ್ರಿಲ್ 21 ರಂದು ನಿಧನರಾದ ಕಥೊಲಿಕ ಕ್ರೈಸ್ತ ಸಮುದಾಯದ ಪರಮ ಪವಿತ್ರ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಸ್ಮರಣಾರ್ಥವಾಗಿ ಎಪ್ರಿಲ್ 2೪ ರಂದು ಬೆಳಿಗ್ಗೆ ಉಡುಪಿ ಜಿಲ್ಲೆಯ ಅತ್ಯಂತ ಹಿರಿಯ ಚರ್ಚ್ ಆಗಿರುವ ಹೋಲಿ ರೋಜರಿ ಮಾತಾ ಚರ್ಚಿನಲ್ಲಿ ಅವರ ಆತ್ಮಕ್ಕೆ ಶಾಂತಿ ಲಭಿಸಲು ಶೃದ್ಧಾಂಜಲಿಯ ಪವಿತ್ರ ಬಲಿದಾನವನ್ನು ಆಚರಿಸಲಾಯಿತು.
ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಅವರು ನಿಧನರಾದ ಪರಮ ಪವಿತ್ರ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಆತ್ಮಕ್ಕೆ ಶಾಂತಿ ಲಭಿಸಲು ಚರ್ಚಿನ ಭಕ್ತರೊಂದಿಗೆ ಪವಿತ್ರ ಬಲಿದಾನವನ್ನು ಅರ್ಪಿಸಿ “ನಮ್ಮ ನಿಧನ ಹೊಂದಿದ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ೨೬೬ ನೇ ಜಗದ್ಗುರುಗಳಾಗಿದ್ದ ಅವರು ವಿನಮ್ರ ಅಘಾದ ಮಮತೆ ತುಂಬಿದವರಾಗಿದ್ದರು. ಬೈಬಲಿನ ಸತ್ಯಗಳನ್ನು ಲೋಕಕ್ಕೆ ಪರಿಚಯಿದವರಾಗಿದ್ದರು, ನೀಜವಾದ ಕ್ರಿಸ್ತನ ಪ್ರತೀಕರಾಗಿದ್ದ ಅವರು, ಕ್ರೈಸ್ತರ ನೀಜವಾದ ಜಗದ್ ನಾಯಕ, ಬಡವರ ತಂದೆ, ಭರವಶೆಯ ಪ್ರವಾದಿ, ರಾಷ್ಠ್ರ –ರಾಷ್ಠ್ರಗಳ ಮಧ್ಯೆ ಶಾಂತಿಗೋಸ್ಕರ ಶ್ರಮಿಸಿದ ಮಾನತ್ವದ ನಾಯಕ, ಸಹೋದರತೆ ಭಾಂಧವ್ಯ ಶಾಂತಿಯ ಬುನಾದಿ ಎಂದು ಲೋಕಕ್ಕೆ ಸಂದೇಶ ನೀಡಿದವರು, ಗಾಜಾ ಪಟ್ಟಿ ಯುಕ್ರೇನ್ ರಷ್ಯಾ ಯುದ್ದಗಳನ್ನು ತಡೆಯಲು ಪ್ರಯತ್ನಿಸಿದ ಶಾಂತಿ ದೂತರಾಗಿದ್ದವರು ಅವರು, ಕಥೊಲಿಕ ಪವಿತ್ರ ಸಭೆಯಲ್ಲಿ ಹಲವಾರು ಸುಧಾರಣೆ ಮಾಡಿದ ಹರಿಕಾರ, ಜಗದ್ಗುರುಗಳಾಗಿದ್ದರೂ, ಯೇಸು ಕ್ರಿಸ್ತರು ಹೇಳಿದಂತೆ ತಾನು ಸಣ್ಣವಾನಾಗಲು ಪ್ರಯತ್ನಿಸಿದ ಶ್ರೇಷ್ಟ ಧರ್ಮಗುರು. ಧರ್ಮ ಧರ್ಮಳ ಮಧ್ಯೆ ಉತ್ತಮ ಭಾಂಧವ್ಯ ಹೊಂದಲು ಶ್ರಮಿಸಿ, ಆರ್ಥಿಕ ಸಮಾಮಾನತೆ, ಮಾನವ ಗೌರವಕ್ಕಾಗಿ ದುಡಿದು, ಪವಿತ್ರ ಸಭೆಗೆ ಹೊಸ ಕಿರಣವಾಗಿದ್ದ ಅವರು ಗಾಯದಲ್ಲಿದ್ದ ಪ್ರಪಂಪಚಕ್ಕೆ ಶಾಂತಿಯನ್ನು ಲಭಿಸಲು ಶ್ರಮಿಸಿದ ನೀಜವಾಗಿ ಕ್ರಿಸ್ತನ ಅನುಯಾಯಿಗಿದ್ದರು. ಮಾತಿನಲ್ಲಿ ಕ್ರತಿಯಲ್ಲಿ ನೆಡದ ಪೋಪ್ ಫ್ರಾನ್ಸಿಸ್ ಅವರ ಆತ್ಮಕ್ಕೆ ಶಾಂತಿ ಲಭಿಸಲಿ, ಮತ್ತು ಅವರಿಗೆ ಸ್ವರ್ಗದಲ್ಲಿ ದೇವರನ್ನು ಕಾಣುವ ಭಾಗ್ಯ ಲಭಿಸಲಿ” ಎಂದು ಹೇಳುತ್ತಾ ಕುಂದಾಪುರ ಚರ್ಚಿನ ಭಕ್ತಾಧಿಗಳ ಪರವಾಗಿ ಅವರ ಆತ್ಮಕ್ಕೆ ಶಾಂತಿ ಕೋರಿದರು.
ಈ ಸಂದರ್ಭದಲ್ಲಿ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ವಂ।ಸಿಸ್ಟರ್ ಚರ್ಚಿನ ಪಾಲನಮಂಡಳಿ ಉಪಾಧ್ಯಕ್ಷರಾದ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಸರ್ವ ಆಯೋಗದ ಸಂಯೋಜಕಿ ಪ್ರೇಮಾ ಡಿಕುನ್ಹಾ ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಹಾಜರಿದ್ದರು.



































