JANANUDI.COM NETWORK

ಕುಂದಾಪುರದ ಸಂಗೀತ ಭಾರತಿ ಟ್ರಸ್ಟ್ (ರಿ.) ವತಿಯಿಂದ ಕರ್ನಾಟಕ ಶಾಸ್ತ್ರೀಯ ಡೋಲಿನ್ ವಾದನ ಕಾರ್ಯಕ್ರಮ ಜುಲೈ 3 ರಂದು ಆದಿತ್ಯವಾರ ಸಂಜೆ ಗಂಟೆ 6 ಕ್ಕೆ ನಡೆಯಲಿದೆ. ಕುಂದಾಪುರದ ಹೋಟೆಲ್ ಪಾರಿಜಾತದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಖ್ಯಾತ ಮೆಂಡೋಲಿನ್ ಕಲಾವಿದರಾದ ಪದ್ಮಶ್ರೀ ಉಪ್ಪಾಳಪು ಶ್ರೀನಿವಾಸು ಸಂಗೀತ ವಾದನದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಇವರಿಗೆ ಮೃದಂಗದಲ್ಲಿ ಪುತ್ತೂರು ನಿಕ್ಷೀತ್ ಹಾಗೂ ವಾಯಲಿನ್‍ನಲ್ಲಿ ಕೃತಿಕ್ ಕೌಶಿಕ್ ಎಂ. ಪಿ. ಸಹಕರಿಸಲಿದ್ದಾರೆ.
ಬಹಳ ಸಮಯದ ನಂತರ ಕುಂದಾಪುರದಲ್ಲಿ ಶಾಸ್ತ್ರೀಯ ಸಂಗೀತ ವಾದನದ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಸಂಗೀತಾಭಿಮಾನಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಸಂಘಟಕರು ಆಹ್ವಾನಿಸಿದ್ದಾರೆ.