ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ: ಕ್ರೈಸ್ತ ಶಿಕ್ಷಣ ಆರಂಭೋತ್ಸವ

JANANUDI.COM NETWORK


ಕುಂದಾಪುರ, ಜೂ.5: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ಆರಂಭತ್ಸೋವವ ಕಾರ್ಯಕ್ರಮ ಜೂನ್ 5 ರಂದು ಇಗರ್ಜಿಯಲ್ಲಿ ನೆಡೆಯಿತು. ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ| ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ಆಶ್ವಿನ್ ಆರಾನ್ಹಾ, ಪಾಲನ ಮಂಡಳಿ ಉಪಾಧ್ಯಕ್ಷ ಲುವಿಸ್ ಜೆ.ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಳ ಸಂಯೋಜಕಿ ಹಲವಾರು ಶಿಕ್ಷಕಿಯರಲ್ಲಿ ಆರಿಸಲ್ಪಟ್ಟ ಕ್ರೈಸ್ತ ಶಿಕ್ಷಣ ನೀಡುವ ಒರ್ವ ಶಿಕ್ಷಕಿ, ಮಕ್ಕಳ ಸಮೇತ ಒಂದು ಕುಟುಂಬ, ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕಿಯರ ಸಂಯೋಜಕಿ ವೀಣಾ ಡಿಸೋಜಾ ಇವರುಗಳು ದೀಪ ಬೆಳಗಿಸಿ ಕ್ರೈಸ್ತ ಶಿಕ್ಷಣದ ಶಿಕ್ಷಣಕ್ಕೆ ಚಾಲನೆಯನ್ನು ನೀಡಿದರು.
‘ಯಾರು ಕ್ರೈಸ್ತ ಶಿಕ್ಷಣ (ನೀತಿ ಶಿಕ್ಷಣ) ದೊರಕುತ್ತದೋ, ಅವರು ಸಮಾಜದಲ್ಲಿ ಉತ್ತಮ ನಡತೆಯ ಮಾನವನಾಗುತ್ತಾನೆ, ಆತ ಅಧರ್ಮಕ್ಕೆ ಎಡೆ ಮಾಡುವುದಿಲ್ಲ, ಅನ್ಯಾಯ ಮಾರ್ಗ ಅನುಸರಿಸುವದಿಲ್ಲ. ಶಿಕ್ಷಕರಿಗೆ ಉದ್ದೇಶಿಸಿ ”ಏಸುವಿನ ಶಿಸ್ಯರ ಮೇಲೆ ಪವಿತ್ರ ಆತ್ಮನ ಶಕ್ತಿ ಇಳಿದು ಅವರೆಲ್ಲಾ, ಕ್ರಿಸ್ತನ ಶುಭ ಸಂದೇಶವನ್ನು ಸಾರಲು ಪ್ರೇರಿತರಾಗುತ್ತಾರೆ, ಹಾಗೆಯೆ ನೀವು ಮಕ್ಕಳಿಗೆ ಕ್ರೈಸ್ತ ಶಿಕ್ಷಣ ನೀಡುವಾಗ ಅದೇ ಪವಿತ್ರ ಆತ್ಮವು ನಿಮ್ಮನ್ನು ಶಕ್ತಿಯಿಂದ ಭರಿಸಲಿ, ಹಾಗೆ ನೀವು ಮಕ್ಕಳಿಗೆ ಏಸುವಿನ ಉತ್ತಮ ತತ್ವ ಮೌಲ್ಯಗಳನ್ನು ಭೋದಿಸಿರಿ’ ಎಂದು ಅವರು ಸಂದೇಶ ನೀಡಿದರು.
ಈ ವೇಳೆ ಧರ್ಮಗುರುಗಳು ನೀತಿ ಪಾಠದ ಪುಸ್ತಕಗಳನ್ನು ಶಿಕ್ಷಕರಿಗೆ ಹಸ್ತಾಂತರಿಸಿದರು, ಮತ್ತು ನೀತಿ ಪಾಠದ ಸಲುವಾಗಿ ಒಂದು ಗಂಡು ಮಗು ಮತ್ತೊಂದು ಹೆಣ್ಣು ಮಗುವನ್ನು ಸಾಂಕೇತಿಕವಾಗಿ ಶಿಕ್ಷಕಿಯ ಕೈಗೆ ಒಪ್ಪಿಸಲಾಯಿತು. ನೀತಿ ಶಿಕ್ಷಣ ನೀಡುವ ಇಗರ್ಜಿಯ ಎಲ್ಲಾ ಶಿಕ್ಷಕಿಯರು ಧರ್ಮಗುರು ಹಾಗೂ ಭಕ್ತಾಧಿಗಳ ಜೊತೆ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ಬಲಿದಾನದ ತರುವಾಯ ಶಿಕ್ಷಕಿಯರು ಪ್ರತ್ನಿಜ್ನಾ ಸ್ವೀಕಾರ ಮಾಡಿದರು. ಶಿಕ್ಷಕಿ ಶಾಂತಿ ಬಾರೆಟ್ಟೊ ಕಾರ್ಯಕ್ರಮ ನಿರ್ವಹಿಸಿದರು.