ಶ್ರೀನಿವಾಸಪುರ : ಶಿಕ್ಷಣದಲ್ಲಿ ಕೇವಲ ಪಠ್ಯಾಧಾರಿತ ಬೋಧನೆಯಷ್ಟೇ ವಿದ್ಯಾರ್ಥಿಯ ಮನಸ್ಸು ಮುಟ್ಟಲು ಸಾಧ್ಯವಿಲ್ಲ . ಪ್ರಾಯೋಗಿಕ ಶಿಕ್ಷಣವೂ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಂದು ಬಿಆರ್ಸಿ ಕೆ.ಸಿ.ವಸಂತ ಕರೆ ನೀಡಿದರು.
ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದ ಸರ್ಕಾರಿ ಉರ್ದು ಮತ್ತು ಆಂಗ್ಲ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಗುರುವಾರ ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ಹಾಗು ಇಕೋ ಕ್ಲಬ್ ಸಹಯೋಗದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಾಯೋಗಿಕವಾಗಿ ವಿವರಿಸಿದಲ್ಲಿ ವಿದ್ಯಾರ್ಥಿಗಳ ಮನಸ್ಸಿಗೆ ಬೇಗನೇ ನಾಟುತ್ತದೆ ಜೊತೆಗೆ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಟಿ.ಸುಲೋಚನ ಮಾತನಾಡಿ ನೋಡಿ ಕಲಿ, ಮಾಡಿ ಕಲಿ ಎಂಬAತೆ ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಕರ ಸಹಾಯದಿಂದ ತಾವು ಮಾಡಿರುವ ಕಲಿಕಾ ಸಾಮಾಗ್ರಿಗಳಿಂದ ಒಂದಿಷ್ಟು ಜ್ಞಾನವನ್ನ ಪಡೆಯಬಹುದು ಎಂದರು.
ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ಖಾಜಾಂಚಿ ಎ.ಟಿ.ಎಸ್ ರಿಜ್ವಾನ್ ಮಾತನಾಡಿ ಶಾಲೆಗೆ ಕೊಠಡಿಗಳ ಕೊರತೆ ಇದ್ದು ಶಿಕ್ಷಣ ಸಚಿವರಿಗೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಿಲಾಗಿದೆ ಇಲಾಖೆಯು ಇದನ್ನು ಗಮನಿಸಿ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕೊಠಡಿ ಕೊರತೆಯನ್ನು ನೀಗಿಸಬೇಕು ಎಂದು ಮನವಿ ಮಾಡಿದರು.
ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ಉಪಾಧ್ಯಕ್ಷ ಇಳಿಯಾಜ್ ಬಾಷ ಮಾತನಾಡಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ, ನಮ್ಮ ಟ್ರಸ್ಟ್ ನಿಮ್ಮೊಂದಿಗೆ ಇರುತ್ತದೆ ಎಂದು ಶಿಕ್ಷಕರಿಗೆ ಸಲಹೆ ನೀಡಿದರು .
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯಿಂದ ಪ್ಲಾಸ್ಟಿಕ್ ಮುಕ್ತ ಪಟ್ಟಣ ಮಾಡಲು ವೇಷಭೂಷಣವು ನೋಡುಗರ ಆಕರ್ಷಿತರಾವಾಗಿತ್ತು. ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್, ಇಸಿಒಗಳಾದ ಕೆ.ಸಿ.ಶ್ರೀನಿವಾಸ್, ಆರ್.ಸುಬ್ರಮಣಿ, ಬಿಆರ್ಪಿಗಳಾದ ನಾಗೇಂದ್ರಪ್ರಕಾಶ್, ಚಲಪತಿ, ಬಿಐಆರ್ಟಿಐ ಜಿ.ವಿ.ಚಂದ್ರಪ್ಪ, ಸಿಆರ್ಪಿ ನಾತೀಮಾ ಬೇಗಂ, ಎಸ್ಡಿಎಂಸಿ ಅಧ್ಯಕ್ಷ ಇದಾಯಿತುಲ್ಲಾ ಖಾನ್, ಮುಖ್ಯ ಶಿಕ್ಷಕ ಮಹ್ಮದ್ ಸಾಧಿಕ್ , ಶಿಕ್ಷಕರಾದ ರೀಯಾನಾ ಖಾನಂ, ಭಾರತಮ್ಮ, ನೂರ್ ಉನ್ನೀಸಾ, ಆಸ್ಮ ಸಲ್ತನಾ, ಅಮ್ಮಜಾನ್, ಗುಲ್ಲಾಬಾಜ, ಕುಬ್ರಐಮಾನ್, ಎಸ್ಡಿಎಂಸಿ ಸಂಘನಾ ಕಾರ್ಯದರ್ಶಿ ಇಂತಿಯಾಜ್, ಉಪಾಧ್ಯಕ್ಷ ತಬೀನಾ, ಸದಸ್ಯರಾದ ಸಯ್ಯದ್, ಎಪಿಜಿ ಅಬ್ದುಲ್ ಕಲಾಂ ಟ್ರಸ್ಟ್ ಕಾರ್ಯದರ್ಶಿ ಅಕ್ರಂ ಪಾಷ, ಜಖಾವುದ್ದೀನ್, ಅಲ್ಲಾ ಬಕಾಷ್, ತೀರ್ಪುಗಾರ ಶಿಕ್ಷಕ ಹನುಮೇಗೌಡ, ಮಹಮ್ಮದ್ ಶಫಿ, ನವ ಕರ್ನಾಟಕ ಸ್ವಾಭಿಮಾನಿ ವೇದಿಕೆ ರಾಜ್ಯ ಪ್ರದಾನ ಕಾರ್ಯದರ್ಶಿ ಸಾಧಿಕ್ ಅಹಮ್ಮದ್ ಇದ್ದರು.