ಕುಂದಾಪುರ ಜು 4: ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಕಾಲೇಜು ಮೂಡ್ಲಕಟ್ಟೆ, ಕುಂದಾಪುರ ಇಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವು ಅತ್ಯುತ್ತಮವಾಗಿ ನೆರವೇರಿತು.
“ಕಲಿಕೆಯು ಕೇವಲ ಪರೀಕ್ಷೆಗೆ ಮಾತ್ರ ಸೀಮಿತವಲ್ಲ, ಕಲಿತದ್ದು ಬದುಕಿನುದ್ದಕ್ಕೂ ಇರಬೇಕಾಗಿದೆ. ಆದ್ದರಿಂದ ಆಳವಾದ ಅಧ್ಯಯನ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಏನೇ ಗುರಿ ಕಂಡರೂ ಅದನ್ನು ಸಾಧಿಸುವ ಗರಿಷ್ಠ ಪ್ರಯತ್ನವನ್ನು ಮಾಡಬೇಕು” ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರಾದ ಶ್ರೀಮತಿ ರಶ್ಮಿ ಎಸ್ಆರ್ ಹೇಳಿದರು.
ಅತಿಥಿಯವರಾಗಿ ಆಗಮಿಸಿದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ರಾಗಿಣಿಯವರು “ಕಲಿಕೆ ಮುಗಿದ ಮೇಲೆ ನಾವು ಬೇರೆಯವರಿಗೆ ಆಯ್ಕೆಯಾಗಿ ಇರಬೇಕೆ ಹೊರತು, ಯಾವುದೇ ಆಯ್ಕೆ ಇಲ್ಲದೆ ನಿಮ್ಮ ಆಯ್ಕೆ ಎನ್ನುವ ರೀತಿ ಇರಬಾರದು. ನಿಮ್ಮ ಜೀವನದುದ್ದಕ್ಕೂ ನಿಮ್ಮ ಹೆತ್ತವರು ಇರುತ್ತಾರೆ ಹೊರತು ಗೆಳೆಯರು ಅಲ್ಲ. ನಿಮ್ಮ ಕಲಿಕೆಗೆ ಅಡಿಪಾಯವನ್ನು ಹಾಕಿ ಕೊಟ್ಟಂತಹ ಗುರುಗಳಿಗೆ ಗೌರವ ನೀಡಿ” ಎಂದು ತಿಳಿಸಿದರು.
ಪ್ರಾಂಶುಪಾಲೆ ಡಾ| ಪ್ರತಿಭಾ ಎಂ ಪಟೇಲ್ ರವರು ಶೈಕ್ಷಣಿಕ ವರದಿಯನ್ನು ಮಂಡಿಸಿದರು. ಹಾಗೂ ತಮ್ಮ ಮಾತುಗಳಲ್ಲಿ, “ಇಂದಿನ ವಾರ್ಷಿಕೋತ್ಸವವು ಮುಂದಿನ ಕಾರ್ಯಕ್ರಮಕ್ಕೆ ಮುನ್ನುಡಿಯಾಗಲಿ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಪ್ರೊ| ಜಯಶೀಲ್ ಕುಮಾರ್, ಆಡಳಿತ ಮಂಡಳಿ ಸದಸ್ಯರಾದ ಶ್ರೀಯುತ ರಾಕೇಶ್ ಸೋನ್ಸ್, ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಪ್ರೊ| ಪಾವನರವರು ಸ್ವಾಗತಿಸಿದರು. ಬಿಸಿಎ ವಿಭಾಗದ ಮುಖ್ಯಸ್ಥರಾದ ಪ್ರೊ| ಅಹಮದ್ ಖಲೀಲ್ ರವರು ವಿಜೇತರ ಪಟ್ಟಿಯನ್ನು ವಾಚಿಸಿದರು. ಪ್ರೊ| ಸುಮನ ಕಾರ್ಯಕ್ರಮವನ್ನು ನಿರೂಪಿಸಿದರು. ಉಪ ಪ್ರಾಂಶುಪಾಲರಾದ ಪ್ರೊಫೆಸರ್ ಜಯಶೀಲ ಕುಮಾರ್ ರವರು ವಂದಿಸಿದರು. ಹಾಗೂ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅತ್ಯುತ್ತಮ ಪ್ರದರ್ಶನವನ್ನು ನೀಡಿದರು.