ಅಲ್ಪಸಂಖ್ಯಾತರ ವಾರ್ಡ್‍ಗಳಲ್ಲಿ ಅನಕ್ಷರಸ್ಥರಿಗೆ ಅಕ್ಷರಸ್ಥರು ಕೋವಿಡ್ ಅರಿವು ಮೂಡಿಸಿ – ಗೋಪಾಲಕೃಷ್ಣಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ ಆಗಸ್ಟ್ 10 : ಅಲ್ಪಸಂಖ್ಯಾತರ ವಾರ್ಡ್‍ಗಳಲ್ಲಿ ಇರುವ ಅನಕ್ಷರಸ್ಥರಿಗೆ ಅಲ್ಲಿನ ಅಕ್ಷರಸ್ಥರು ಕೋವಿಡ್ 19 ರ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿ ಇದೆ ಎಂದು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಗೌಡ ತಿಳಿಸಿದರು
ಕೋಲಾರ ನಗರದ ರಹಮತ್ ನಗರದಲ್ಲಿ ರೆಡ್ ಕ್ರಾಸ್ ಸಂಸ್ಥೆಯಿಂದ ಸಾರ್ವಜನಿಕರಿಗಾಗಿ ಶಕ್ತಿಯುತವಾದ ಪಾನಿಯ ಮಾಸ್ಕ್ ಸ್ಯಾನಿಟೈಸರ್ ವಿತರಿಸಿ ಮಾತನಾಡಿದರು.
ಸಾರ್ವಜನಿಕರು ತಮ್ಮ ಸುತ್ತಮುತ್ತಲು ಇರುವ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಅರ್ಧ ಕಾಯಿಲೆಗಳನ್ನು ತಡೆಗಟ್ಟಬಹುದು ಆದ್ದರಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ತಿಳಿಸಿದರು ಸಮಾಜದಲ್ಲಿ ನಾವು ಆರೋಗ್ಯವಾಗಿ ಇದ್ದಾಗ ಮಾತ್ರ ನಮ್ಮಂತೆಯೇ ಇರುವ ಮತ್ತೊಬ್ಬರು ಆರೋಗ್ಯವಾಗಿರಲು ಸಾಧ್ಯ ಎಂದರು ಅನಾರೋಗ್ಯಕ್ಕೆ ತುತ್ತಾಗಿ ನಾವು ಸಮಾಜದಲ್ಲಿ ಎಲ್ಲೆಂದರಲ್ಲಿ ಓಡಾಡುವುದು ಮಾತನಾಡುವುದು ಇತರರಿಗೆ ತೊಂದರೆ ನೀಡಿದಂತೆ ಆದ್ದರಿಂದ ಜನರು ಯಾವುದೇ ನಿರ್ಲಕ್ಷತೆಗೆ ಒಳಗಾಗದೆ ಲಸಿಕೆ ಹಾಕಿಸಿಕೊಳ್ಳುವುದು ಬಹಳ ಮುಖ್ಯ ಎಂದರು
ಸರ್ಕಾರವು ಉಚಿತವಾಗಿ ಲಸಿಕೆ ನೀಡುತ್ತಿರುತ್ತದೆ ಯಾರು ಲಸಿಕೆಯ ಬಗ್ಗೆ ನಿರ್ಲಕ್ಷ್ಯ ತೋರದೆ ಲಸಿಕೆ ಹಾಕಿಸಿಕೊಳ್ಳಬೇಕು ಆರೋಗ್ಯ ಕಾಪಾಡಿಕೊಳ್ಳಬೇಕು. ಪಾನ್‍ಪರಾಗ್, ಗುಟ್ಕಾ, ಮದ್ಯಪಾನಗಳಿಂದ ದೂರ ಇರಬೇಕೆಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ನಂದೀಶ್ ಕುಮಾರ್ ಮಾತನಾಡುತ್ತಾ ಈಗಾಗಲೇ ಒಂದನೇ ಎರಡನೇ ಕೋವಿಡ್ ಅಲೆ ಮುಗಿದಿದ್ದು ಮೂರನೆಯ ಕೋವಿಡ್ ಅಲೆಯು ಮಕ್ಕಳ ಮೇಲೆ ಮತ್ತು ವಯಸ್ಸಾದವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಕಡಿಮೆ ವಯಸ್ಸಿನ ಯುವಕರನ್ನು ಈಗಾಗಲೇ ಕಳೆದುಕೊಂಡಿದ್ದೇವೆ ಈ ಕಾಯಿಲೆಯು ಮಕ್ಕಳನ್ನು ಗುರಿಯಾಗಿಸಿಕೊಂಡು ಇರುವುದರಿಂದ ಬೀದಿಗಳಲ್ಲಿ ಮಾರುವ ತಿಂಡಿ ತಿನಿಸುಗಳನ್ನು ಮಕ್ಕಳು ತಿನ್ನಬಾರದೆಂದು ಸಲಹೆ ನೀಡಿದರಲ್ಲದೆ ಮಕ್ಕಳ ಆರೋಗ್ಯದ ಕಡೆ ತಾಯಂದಿರು ಹೆಚ್ಚು ಗಮನ ಇರಬೇಕೆಂದು ತಿಳಿಸಿದರು
ಸಂಸ್ಥೆಯ ವೈಸ್ ಚೇರ್ಮೆನ್ ಆರ್ ಶ್ರೀನಿವಾಸನ್ ಮಾತನಾಡುತ್ತಾ ಆರೋಗ್ಯ ಶಿಕ್ಷಣ ಎರಡು ನಾಣ್ಯದ ಮುಖಗಳಿದ್ದಂತೆ ಆರೋಗ್ಯದ ಜೊತೆಗೆ ಶಿಕ್ಷಣವು ಹೆಚ್ಚು ಪ್ರಾಮುಖ್ಯ ವಾಗಿರುವುದರಿಂದ ಶಾಲೆಗಳಲ್ಲಿ ಇಲಾಖೆ ನೀಡುವ ಮಾಹಿತಿಯನ್ನು ಮಕ್ಕಳು ಮತ್ತು ಪೆÇೀಷಕರು ಪಾಲನೆ ಮಾಡಬೇಕು ಈಗಾಗಲೇ ಶಿಕ್ಷಕರು ಮಕ್ಕಳಿಗೆ ಅಭ್ಯಾಸ ಹಾಳೆಗಳನ್ನು ನೀಡುತ್ತಿದ್ದು ಪೆÇೀಷಕರು ಮಕ್ಕಳ ಕಲಿಕೆಗೆ ಮನೆಗಳಲ್ಲಿ ಹೆಚ್ಚು ಆದ್ಯತೆ ನೀಡಬೇಕೆಂದು ತಿಳಿಸಿದರಲ್ಲದೆ ಆರೋಗ್ಯ ಇಲಾಖೆ ನೀಡುವ ಲಸಿಕೆ ಹಾಕಿಸಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ರಾಜ್ಯ ಪರಿಷತ್ ಸದಸ್ಯರಾದ ವೆಂಕಟ ಕೃಷ್ಣ ವಿಜಯಲಕ್ಷ್ಮಿ ಹೇಮಾ ಭಾಸ್ಕರ್ ಸಾದತ್ ನವೀದ ಪರ್ವೇಜ್ ಮುಂತಾದವರು ಹಾಜರಿದ್ದರು