

ಶ್ರೀನಿವಾಸಪುರ : ಸರ್ಕಾರವು ಗ್ರಾಮ ಆಡಳಿತ ಅಧಿಕಾರಿಗಳಿಗೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡುತ್ತಾ, ಅವರ ಬಳಿ ಕೆಲಸ ಮಾಡಿಕೊಂಡರೆ ನಮಗೆ ಯಾವುದೇ ತೊಂದರೆ ಇಲ್ಲ , ಆದರೆ ಯಾವುದೇ ರೀತಿಯಾದ ಮೂಲಭೂತ ಸೌಲಭ್ಯಗಳನ್ನು ನೀಡಿದಾಗ ಅವರು ನಿರಂತರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಇಲ್ಲವಾದರೆ ಕಷ್ಟ ಸಾಧ್ಯ ರಾಜ್ಯ ರೈತ ಸಂಘದ ಹಸಿರು ಸೇನೆಯ ತಾಲೂಕು ಅಧ್ಯಕ್ಷ ನಂಬಿಹಳ್ಳಿ ಶ್ರೀರಾಮರೆಡ್ಡಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಗ್ರಾಮ ಆಡಳಿತ ಅಧಿಕಾರಿಗಳಿಂದ ಮಂಗಳವಾರ ಅನಿರ್ಧಷ್ಟಾವಧಿಯ 9 ನೇ ದಿನದ ಮುಷ್ಕರ ಸ್ಥಳಕ್ಕೆ ರಾಜ್ಯ ರೈತ ಸಂಘದ ಹಸಿರು ಸೇನೆ ವತಿಯಿಂದ ಬೆಂಬಲ ನೀಡಿ ಮಾತನಾಡಿದರು.
ಗ್ರಾಮ ಆಡಳಿತ ಅಧಿಕಾರಿಗಳ 21 ಬೇಡಿಕೆಗಳನ್ನು ಸರ್ಕಾರ 3 ದಿನಗಳ ಒಳಗಾಗಿ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬೈರಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಮಾಸ್ತೇನಹಳ್ಳಿ ನಾರಾಯಣಸ್ವಾಮಿ , ತಾಲೂಕು ಗೌರವಾಧ್ಯಕ್ಷ ಈರಪ್ಪರೆಡ್ಡಿ, ಕಾರ್ಯದರ್ಶಿ ಹೆಬ್ಬಟ ರಮೇಶ್, ಸದಸ್ಯರಾದ ಅಸ್ಲಂಬಾಷ , ಶ್ರೀಧರ್, ಟಿ.ವಿ.ಮೋಹನ್ಗೌಡ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಎನ್.ಶಂಕರ್ ಹಾಗು ಮುಷ್ಕರ ನಿರತರು ಇದ್ದರು.