ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ; ದೇಶಕ್ಕೆ ಆರೋಗ್ಯವಂತರೆ ದೇಶದ ಬೆನ್ನೆಲುಬು , ಆರೋಗ್ಯವೇ ಬಾಗ್ಯ, ಆರೋಗ್ಯವನ್ನು ಸರಿಯಾದ ರೀತಿಯಲ್ಲಿ ಕಾಪಡಿಕೊಳ್ಳಬೇಕು. ಆರೋಗ್ಯದ ಬಗ್ಗೆ ನೀರಲಕ್ಷ್ಯ ವಹಿಸುವುದು ಬೇಡ, ನಿಯಮಿತವಾದ ತಪಾಸಣೆ ಕಾಲಕಾಲಕ್ಕೆ ಅಗತ್ಯ ಎಂದು ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಹೇಳಿದರು.
ಜಿಲ್ಲಾಡಳಿತ,ಜಿಲ್ಲಾಪಂಚಾತ್ ಹಾಗೂ ರಾಷ್ಟಿಯ ಆರೋಗ್ಯ ಅಭಿಯಾನ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಕೋಲಾರ,ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ ಕೋಲಾರ ಮತ್ತು ತಾಲೂಕು ಆರೋಗ್ಯಧಿಕಾರಿಗಳು ಶ್ರೀನಿವಾಸಪುರ ತಾಲೂಕು ಇವರ ಸಹಯೋಗದಲ್ಲಿ ಸೋಮವಾರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರವು ದೇಶದಲ್ಲಿ ಪ್ರತಿಯೊಬ್ಬರ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಕೋವಿಡ್ ಸಮಯದಲ್ಲಿ ಕೋವಿಡ್‌ನ್ನು ತಡೆಗಟ್ಟಲು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆಗಳನ್ನು ಹಾಕಲಾಗಿತ್ತು , ಬಹತೇಕರು ಲಸಿಕೆಗಳನ್ನು ಪಡೆದಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಕೋವಿಡ್‌ನ ಮೂರುನೇ ಅಲೆ ಹೆಚ್ಚು ಪರಿಣಾಮಕಾರಿಯಾಗಲಿಲ್ಲವೆಂದರು.ಸಾರ್ವಜನಿಕರು ಕೋವಿಡ್‌ನಂತಹ ಮಹಾಮಾರಿಯನ್ನು ತಡೆಗಟ್ಟಲು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದರು.
ತಮ್ಮ ಆರೋಗ್ಯವನ್ನೂ ಲೆಕ್ಕಸಿದೆ , ಸಾರ್ವಜನಿಕರ ಸೇವೆಗಾಗಿ ಸದಾ ಮುಂದೆ ಎನ್ನುವಂತೆ ಯೋದರಂತೆ ದುಡಿದ್ದಾರೆ . ಆರೋಗ್ಯ ಇಲಾಖೆಯ ಸಿಬ್ಬಂದಿ ಕೋವಿಡ್ ಸಮಯದಲ್ಲಿ ಸಾರ್ವಜನಿಕರಿಗೆ ನೀಡಿದ ಸೇವೆ ಅಜರಾಮರ ಎಂದು ಬಣ್ಣಿಸಿದರು.
ಶಾಸಕರಾದ ಕೆ.ಆರ್.ರಮೇಶ್‌ಕುಮಾರ್‌ರವರು ಆರೋಗ್ಯ ಮೇಳದ ಕಾರ್ಯಕ್ರಮವು ಪ್ರಾರಂಭಕ್ಕೂ ಮುನ್ನ ಸ್ಥಳಕ್ಕೆ ಬೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿ ಆರೋಗ್ಯ ಮೇಳವು ಯಶ್ವಸಿಯಾಗಿ ನಡೆಯಲಿ ಎಂದು ಆರೋಗ್ಯ ಮೇಳದ ಉಸ್ತವಾರಿ ಅಧಿಕಾರಿಗಳಿಗೆ ಶುಭಹಾರೈಸಿ , ಕೋಲಾರದ ಜಿಲ್ಲಾ ಪಂಚಾಯಿತಿಯಲ್ಲಿ ನಡೆಯಲಿರುವ ಸಭೆಯಲ್ಲಿ ಹಾಜರಾಗಬೇಕಿದೆ ಪಾಲ್ಗುಳ್ಳಬೇಕಿದೆ ಎಂದರು.
ನೋಡಲ್ ಅಧಿಕಾರಿ ಡಾ|| ಎಸ್. ಚಂದನ್‌ಕುಮಾರ್ , ಡಾ|| ಕಮಲ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ಚಾರಣಿ,ಡಾ||ಎನ್.ಸಿ.ನಾರಾಯಣಸ್ವಾಮಿ,ಆರ್‌ಸಿಎಚ್ ವೈದ್ಯರಾದ ವಿಜಯಕಮಾರಿ,ತಾಲೂಕು ವೈದ್ಯಾಧಿಕಾರಿ ಎಂ.ಸಿ.ವಿಜಯ, ಆಡಳಿತ ವೈದ್ಯಾದಿಕಾರಿ ಡಾ|| ಜಿ.ಶ್ರೀನಿವಾಸ್,ತಹಸೀಲ್ದಾರ್ ಶಿರಿನ್‌ತಾಜ್,ವಲಯ ವೃತ್ತ ನಿರೀಕ್ಷಕರು ರವಿಕುಮಾರ್,ಬಿಇಒ ಉಮಾದೇವಿ ,ತಾಲೂಕಿನ ಬಿಜೆಪಿ ಘಟಕ ಅಧ್ಯಕ್ಷ ಅವ
ಶೋಕ್ ರೆಡ್ಡಿ, ಮುಖಂಡ ರಾದ ಲಷ್ಮಣ್ಣಗೌಡ,ರಾಮಾಂಜಿ,ಜಯಣ್ಣ, ಷಫ್ತಿಉಲ್ಲ, ಶ್ರೀನಾಥ್ ಬಾಬು, ಇತರರು ಇದ್ದರು.