ಕ್ಷಯ ರೋಗದ ಲಕ್ಷಣ ಕಂಡುಬಂದಲ್ಲಿ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಕಿತ್ಸೆ ಪಡೆಯಬೇಕು:ಡಾ| ಜಿ.ಎಸ್.ವಂದನಾ

ಶ್ರೀನಿವಾಸಪುರ: ಕ್ಷಯ ರೋಗದ ಲಕ್ಷಣ ಕಂಡುಬಂದಲ್ಲಿ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಕಿತ್ಸೆ ಪಡೆಯಬೇಕು ಎಂದು ಹೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ, ಜಿ.ಎಸ್.ವಂದನಾ ಹೇಳಿದರು.
ಹೋಳೂರು ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಗುರುವಾರ ಏರ್ಪಡಿಸಿದ್ದ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಸಾಂಕ್ರಾಮಿಕ ರೋಗ ತಡೆಯಲು ವಿಶೇಷ ಕಾರ್ಯಕ್ರಮ ಹಾಕಿಕೊಂಡಿದೆ ಎಂದು ಹೇಳಿದರು.
ಕ್ಷಯ ರೋಗಿಗಳೊಂದಿಗೆ ಸಮುದಾಯದ ಸಹ ಭಾಗಿತ್ವ ಅಗತ್ಯ. ಕ್ಷಯ ವಾಸಿಯಾಗಬಲ್ಲ ರೋಗವಾಗಿದ್ದು, ಜನರು ಆತಂಕ ಪಡಬೇಕಾದ ಅಗತ್ಯವಿಲ್ಲ. ರೋಗಿಗಳನ್ನು ಜನರಿಂದ ದೂರವಿಡದೆ ಮಾನವೀಯತೆಯಿಂದ ಕಾಣಬೇಕು. ರೋಗ ನಿವಾರಣೆಗೆ ಸಹಕರಿಸಬೇಕು. ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು. ಚಿಕಿತ್ಸೆ ಉಚಿವ ಎಂಬ ವಿಷಯ ಮನದಟ್ಟು ಮಾಡಬೇಕು. ರೋಗ ವಾಸಿಯಾಗುವವರೆಗೆ ತಿಂಗಳಿಗೆ ರೂ.500 ನೀಡುವ ಬಗ್ಗೆಯೂ ತಿಳಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೆಂಕಟರಾಮಪ್ಪ, ಪಿಡಿಒ ನಾಗರಾಜ್, ಆರೋಗ್ಯ ನಿರೀಕ್ಷಣಾಧಿಕಾರಿ ಪೃಥ್ವಿರಾಜ್, ಅಯ್ಯಣ್ಣ, ವಿ.ರೂಪ ಇದ್ದರು.