ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಮೇ 13 : ಮಾನವ ಸೇವೆಯೇ ಮಾದವ ಸೇವೆ, ಪ್ರತಿಯೊಬ್ಬರು ಇದರ ಪರಮಾರ್ಥ ಅರಿತರೆ ಲೋಕ ಕಲ್ಯಾಣವಾಗುತ್ತದೆ. ನೊಂದ ಜೀವಿಗಳಿಗೆ ಆಸರೆ, ಸಹಾಯ, ಸೇವೆ ಮಾಡಿದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಥಿಯಾಸಾಫಿಲ್ ಸೊಸೈಟಿಯ ಅಧ್ಯಕ್ಷ ಬಿ.ಮುನಿಯಪ್ಪ ಅಭಿಪ್ರಾಯಪಟ್ಟರು.
ರೋಟರಿ ಸಂಸ್ಥೆ, ವಾಸವಿ ಕ್ಲಬ್, ಥಿಯಾಸಾಫಿಲ್ ಸೊಸೈಟಿ ಸೇವಾ ವಿಭಾಗ, ಮಹಾವೀರ್ ಜೈನ್ ಆಸ್ಪತ್ರೆ ಬೆಂಗಳೂರು ಇವರುಗಳು ಕೋಲಾರ ನಗರದ ರೋಟರಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಸೀಳುತುಟಿ ಮತ್ತು ಸೀಳು ಅಂಗಳ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಕರ್ಮಫಲದಿಂದ ಅಲ್ಲದೆ ಸಮಾಜ ಮುಖಿಯಾಗಿ ಸೇವೆ ಮಾಡಬೇಕೆಂದರು. ಮಹಾವೀರ್ ಜೈನ್ ಆಸ್ಪತ್ರೆಯ ಮನೋಹರ್ ರವರು ಪ್ರಾಸ್ತಾವಿಕ ಭಾಷಣ ಮಾಡಿದರು.
ವಾಸವಿ ಕ್ಲಬ್ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ ಆಧ್ಯಾತ್ಮಿಕತೆ ಸೇವೆ, ಸಹಾಯಗಳಲ್ಲದೆ ಸ್ವತಃ ಭಗವಂತನ ಚಿಂತನೆ ಅಗತ್ಯ ಎಂದರು.
ಅಧ್ಯಕ್ಷತೆ ವಹಿತಿ ಮಾತನಾಡಿದ ರೋಟರಿ ಅಧ್ಯಕ್ಷ ರಾಮನಾಥ್ ಮಾತನಾಡಿ ರೋಟರಿ ವತಿಯಿಂದ ಆರೋಗ್ಯ ಕಾರ್ಯಕ್ರಮಗಳು ಸ್ಪೂರ್ತಿ ನೀಡುವುದಲ್ಲದೆ ಸಹಾಯಕ ಹಸ್ತ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ 20 ಕ್ಕೂ ಹೆಚ್ಚು ಸೀಳು ತುಟಿ ಫಲಾನುಭವಿಗಳು ಭಾಗವಹಿಸಿ ಉಚಿತ ಶಸ್ತ್ರಚಿಕಿತ್ಸೆಗೆ ಜೈನ್ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಯಿತು.
ಜೈನ್ ಆಸ್ಪತ್ರೆಯ ಡಾ.ಸುಷ್ಮ, ವಾಸವಿ ಕ್ಲಬ್‍ನ ಓಂ ಪ್ರಕಾಶ್, ಬಷೀರ್ ಅಹಮ್ಮದ್, ಆರ್.ಸಿ.ರೆಡ್ಡಿ ಮುಂತಾದವರು ಉಪಸ್ಥಿತರಿದ್ದು, ಪಿ.ಶಾರದಮ್ಮ ರವರಿಂದ ಪ್ರಾರ್ಥನೆ, ವಿ.ಪಿ.ಸೋಮಶೇಖರ್ ನಿರೂಪಿಸಿ ವಂದಿಸಿದರು.