ಶ್ರೀನಿವಾಸಪುರ 1 : ನೆಲ, ಜಲ, ಬಾಷೆ ಉಳಿಯ ಬೇಕಾದರೆ ಎಲ್ಲರೂ ಕೈಜೋಡಿಸಬೇಕು ಹಾಗು ಕನ್ನಡ ಭಾಷೆಯನ್ನು ಉಳಿಸಲು ಸೈನಿಕರಂತೆ ಶ್ರಮಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಗುರುವಾರ ಚೈತನ್ಯ ಜನ ಜಾಗೃತಿ ವೇದಿಕೆವತಿಯಿಂದ ಹಮ್ಮಿಕೊಳ್ಳಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ರಾತ್ರಿ ರಸಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ .ಈ ಒಂದು ದೃಷ್ಟಿಯಲ್ಲಿ ಪಟ್ಟಣದ ಅಭಿವೃದ್ಧಿಗೆ 25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಗುವುದು. ಗ್ರಾಮೀಣ ಭಾಗದಲ್ಲಿ ರಸ್ತೆ, ಚರಂಡಿಗಳನ್ನು ಅಭಿವೃದ್ಧಿಪಡಿಸಲಾಗುವುದು. ಸರ್ಕಾರಿ ಶಾಲೆಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳಿಗೆ ಬೇಕಾದ ವ್ಯವಸ್ಥೆಗಳನ್ನು ಗ್ರಾಮಪಂಚಾಯಿತಿ ವತಿಯಿಂದ ಮಾಡಿಸಲು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದೇನೆ ಎಂದರು.
40 ಕೋಟಿ ವೆಚ್ಚದಲ್ಲಿ ಶ್ರೀನಿವಾಸಪುರ-ಕೋಲಾರ ರಸ್ತೆ ಅಗಲೀಕರಣದ ಮೂಲಕ ರಸ್ತೆ ಅಭಿವೃದ್ಧಿಪಡಿಸಲಾಗುವುದು. 4 ಸಾವಿರ ಎಕರೆಯಲ್ಲಿ ಕೈಗಾರಿಕಾ ಪ್ರಾಂಗಣವನ್ನು ಸ್ಥಾಪಿಸಿ , ನಿರುದ್ಯೋಗ ಯುವಕರಿಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಮಾಡಲಾಗುದು ಎಂದು ಭರವಸೆ ನೀಡಿದರು. ಶ್ರೀನಿವಾಸಪುರದಲ್ಲಿ ಕೈಗಾರಿಕಾ ಪ್ರಾಂಗಣವನ್ನು ಸ್ಥಾಪಿಸಲು ಕೋಲಾರದಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿ ಚರ್ಚೆ ಮಾಡಿ ಅನುಮೋದನೆಯನ್ನ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು. ಒಟ್ಟಿನಲ್ಲಿ ಕ್ಷೇತ್ರವನ್ನ ಎಲ್ಲಾ ಕ್ಷೇತ್ರದಲ್ಲಿ ಸರ್ವತೋಮುಖ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಆರ್ಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ವೆಂಕಟಸ್ವಾಮಿ ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ರವರು ರಾಜ್ಯದಲ್ಲಿ ಕನ್ನಡರಾಜ್ಯೋತ್ಸವ ಆಚರಣೆ ಮಾಡಲು ಪ್ರಮುಖ ಪಾತ್ರ ವಹಿಸಿದ್ದರವರಲ್ಲಿ ಪ್ರಮುಖರು. ಪಾಪನಪಲ್ಲಿ ಗ್ರಾಮಕ್ಕೆ ಶ್ರೀನಿವಾಸಪುರ ಹೆಸರನ್ನು ನಾಮಕರಣ ಮಾಡಿ, ಕನ್ನಡಭಾಷಾಭಿಮಾನವನ್ನು ಮೆರೆದರು.
ಈ ಕಾರ್ಯಕ್ರಮ ಕನ್ನಡ ಭಾಷೆ ಉಳಿಯಲು ಸಾಕ್ಷಿಯಾಗಿದೆ ಎಂದರು. ಅಲ್ಲದೆ ಈ ಭಾಗದಲ್ಲಿ ಐಎಎಸ್ ಹಾಗು ಐಪಿಎಸ್ ಓದುವ ವಿದ್ಯಾರ್ಥಿಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸರಿಗಮಪ ಕಲಾವಿದರಾದ ಮೆಹಬೂಬು ಸಾಬ್, ಜ್ಞಾನ ಗುರುರಾಜ್, ಖುಷಿಕ್ ರವರು ಹಾಡುಗಳನ್ನು ಹಾಡುವುದರ ಮೂಲಕ ಜನರನ್ನು ರಂಜಿಸಿದರು. ಸಾಯಿ ಮೆಲೊಡೀಸ್ ಮತ್ತು ಸಾಯಿ ಈವೆಂಟ್ ರವರು ರಸಸಂಜೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು
ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪೊಲೀಸ್ ವೃತ್ತ ನಿರೀಕ್ಷಕರಾದ ಜಯಾನಂದ್, ಮೆಹಬೂಬ್ ಗೊರವನಕೊಳ್ಳ, ತಾ.ಪಂ. ಮಾಜಿ ಸದಸ್ಯ ಹಳೇಪೇಟೆ ಮಂಜುನಾಥ್, ಚಲ್ದಿಗಾನಹಳ್ಳಿ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ್, ಜೆ.ತಿಮ್ಮಸಂದ್ರ ಗ್ರಾ.ಪಂ. ಉಪಾಧ್ಯಕ್ಷ ಶಂಕರರಡ್ಡಿ, ಮುಖಂಡರಾದ ಪೂಲ್ಶಿವಾರೆಡ್ಡಿ, ಮಧುಸೂದನ್ರಡ್ಡಿ, ಕಾರ್ಬಾಬು, ಸಿ.ಮುನಿಯಪ್ಪ, ಸಿ.ರವಿ , ಮನಿಗಾನಹಳ್ಳಿ ವೆಂಕಟೇಗೌಡ ಇದ್ದರು.