ಶ್ರೀನಿವಾಸಪುರ : ಹೆಣ್ಣು ಮಕ್ಕಳು ವಿದ್ಯಾವಂತರಾದರೆ ಒಳ್ಳೇಯ ಅಧಿಕಾರಿಗಳಾಗಬಹುದು ಹಾಗೂ ಕುಟುಂಬದ ಸದಸ್ಯರನ್ನು ವಿದ್ಯಾವಂತರಾಗಿ ಪ್ರರೇಪಣೆ ಮಾಡುತ್ತಾರೆ ಎಂದು ಮಂಗಸಂದ್ರದ ಬೆಂಗಳೂರು ಉತ್ತರ ವಿವಿ ಉಪನ್ಯಾಸಕ ಡಾ| ಜಿ.ಸತೀಶ್ ಸಲಹೆ ನೀಡಿದರು.
ಕೋಲಾರ ತಾಲೂಕಿನ ಕೊಂಡೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಂಗಸಂದ್ರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದವತಿಯಿಂದ ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಮಕ್ಕಳ ಕಾನೂನುಗಳ ಬಗ್ಗೆ ಪಾಲಕರು ಮತ್ತು ಶಿಕ್ಷಕರು ಅರಿತುಕೊಂಡು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು. ಅಂಕಿ ಅಂಶಗಳ ಪ್ರಕಾರ ದೇಶದ 2ಕೋಟಿಗೂ ಹೆಚ್ಚು ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹವಾಗಿದೆ ಎಂದು ಮಾಹಿತಿ ನೀಡಿ , ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಸಂನ್ಮೂಲ ವ್ಯಕ್ತಿಗಳಾದ ಆರ್.ಶಿರೀಷ ಮಾತನಾಡಿ ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯ ತಡೆಯಲು ಪೋಕ್ಸೋ ಕಾಯ್ದೆ ಜಾರಿಗೆ ತಂದಿದ್ದು ಮಕ್ಕಳ ಪೋಷಕರು ತಿಳಿದಿಕೊಳ್ಳಬೇಕು ಎಂದು ತಿಳಿಸಿದರು.
ಎಸ್.ಎ.ಚಿತ್ರ, ಕೆ.ಎಸ್.ಭೂಮಿಕಾ, ಎನ್.ಅಭಿಲಾಷ್, ಜಿ.ವಿನೋಧ್ಕುಮಾರ್, ಮುಖ್ಯ ಶಿಕ್ಷಕ ಟಿ.ಮಂಜುನಾಥಚಾರಿ ಇದ್ದರು.