ಶ್ರೀನಿವಾಸಪುರ : ರೈತರು ನೆಮ್ಮದಿ ಜೀವನ ನಡೆಸಿದರೆ ದೇಶ ಸಂವೃದ್ಧಿಯಾಗಲು ಸಾಧ್ಯ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್ ಅಭಿಪ್ರಾಯಪಟ್ಟರು
ತಾಲೂಕಿನ ಕಲ್ಲೂರು ಹಾಗು ಪಾಳ್ಯ ಗ್ರಾಮದ ಅರ್ಹ ಫಲಾನುಭವಿಗಳಿಗೆ ಕೃಷಿ ಇಲಾಖೆಯಿಂದ ಅಟಲ್ ಭೂಜಲ್ ಯೋಜನೆಯಡಿಯಲ್ಲಿ ಲಘು ನೀರಾವರಿ ಘಟಕಗಳನ್ನು ಯಶಸ್ವಿಯಾದ ರೈತರ ಕೃಷಿ ಭೂಮಿಗೆ ಬುಧವಾರ ಬೇಟಿ ನೀಡಿ ಪರಿಶೀಲಿಸಿದರು.
2023-24 ನೇ ಸಾಲಿನಲ್ಲಿ ತಾಲೂಕಿನಲ್ಲಿ ಅಟಲ್ ಭೂಜಲ್ ಯೋಜನೆಯಡಿಯಲ್ಲಿ 239 ಸಾಮಾನ್ಯ ವರ್ಗ, 41 ಪರಿಶಿಷ್ಟ ವರ್ಗ ಮತ್ತು 26 ಪರಿಶಿಷ್ಟ ಪಂಗಡ ವರ್ಗ ಒಟ್ಟು 306 ರೈತರು 311 ಹೆಕ್ಟೇರ್ ಪ್ರದೇಶದಲ್ಲಿ ಶೇ 90 ರಷ್ಟು ಹಾಯಧನದಡಿ ಒಟ್ಟು 249.28 ಲಕ್ಷಗಳನ್ನು ಪಡೆದು ತಾಲೂಕಿನ ರೈತರು ವಿವಿಧ ಕೃಷಿ ಬೆಳೆಗಳಾದ ರಾಗಿ, ಮುಸುಕಿನ ಜೋಳ, ಅವರೆ ಮತ್ತು ತೊಗರಿ ಬೆಳೆಗಳನ್ನು ಅನಿರ್ಧಿಷ್ಟ ಮಳೆಯಲ್ಲಿ ಬೆಳೆದು ಅಧಿಕ ಇಳುವರಿಯನ್ನು ಪಡೆದು ರೈತರ ಮುಖದಲ್ಲಿ ನಗೆ ಬೀರುವಂತಾಗಿದೆ ಎಂದರು.
ಇದೇ ರೀತಿ ಪ್ರತಿ ವರ್ಷ ಇನ್ನೂ ಹೆಚ್ಚಿನ ಸಂಖ್ಯೆ ರೈತರಿಗೆ ರಿಯಾಯಿತಿ ಧರದಲ್ಲಿ ಲಘು ನೀರಾವರಿ ಘಟಗಳನ್ನು ಕಾಲ ಕಾಲಕ್ಕೆ ಪಡೆದುಕೊಂಡಲ್ಲಿ ಉತ್ತಮವಾಗಿ ಬೆಳಗಳನ್ನು ಬೆಳೆದು ಆರ್ಥಿಕವಾಗಿ ಸಭಲರಾಗಬಹುದು ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ .
ಮುಳಬಾಗಿಲು ತಾಲೂಕಿನ ಕೃಷಿ ಇಲಾಖೆ ಉಪನಿರ್ದೇಶಕ ಎಸ್.ನಾಗರಾಜ್, ರೈತರಾದ ಪಾಳ್ಯ ಮಂಜುನಾಥ್, ಕಲ್ಲೂರು ಬೈರೆಡ್ಡಿ, ನಾರಾಯಣಸ್ವಾಮಿ ಇದ್ದರು.