10 ವರ್ಷ ಅವದಿ ಮುಗಿದ ಆಧಾರ್ ಕಾರ್ಡ್ಗಳ ದಾಖಲಾತಿಯನ್ನು ಅಪ್ಲೊಡ್ ಮಾಡಿ ಆಧಾರ್ ಕಾರ್ಡ್ ನವೀಕರಿಸಲು ಡಿಸೆಂಬರ್ 14 ಕೊನೆಯ ದಿನವಾಗಿದೆ ಎಂದು ಆಧಾರ್ ಪ್ರಾಧಿಕಾರ ತಿಳಿಸಿದೆ. ತಪ್ಪಿದಲ್ಲಿ ಆಧಾರ್ ಕಾರ್ಡ ನಿಷ್ಕ್ರೀಯಗೊಳ್ಳಲಿದೆ. ಎಂದು ಉಲ್ಲೇಖಿಸಲಾಗಿದೆ. ಆಧಾರ್ ಕಾರ್ಡ್ ಹೊಂದಿರುವ ನಾಗರಿಕರು. ರಾಜ್ಯ ಮತ್ತು ಕೇಂದ್ರ ಸರಕಾರದಿಂದ ವಿವಿಧ ಯೋಜನೆಯಡಿ ಸೌಲಭ್ಯ ಪಡೆಯಲು 10
ವರ್ಷಕ್ಕೆ ಒಮ್ಮೆ ತಮ್ಮ ಆಧಾರ್ ಕಾರ್ಡ್ ನಲ್ಲಿ ದಾಖಲಾಗಿರುವ ಗುರುತಿನ ವಿವರ ಮತ್ತು ವಿಳಾಸದ ಮಾಹಿತಿಯನ್ನು ನವೀಕರಿಸುವುದು
ಕಡ್ಡಾಯವಾಗಿರುತ್ತದೆ ಎಂದು ತಿಳಿಸಲಾಗಿದೆ.
ಇದರ ಪ್ರಕಾರ 10 ವರ್ಷ ಮುಗಿದಿರುವ ಆಧಾರ್ ಹೊಂದಿರುವ ಪ್ರತಿಯೊಬ್ಬರು ತಮ್ಮ ಆಧಾರ್ ಕಾರ್ಡ್ಗಳನ್ನು 14 ಡಿಸೆಂಬರ್ 2023ರ
ಮುಂಚಿತವಾಗಿ ಉಚಿತವಾಗಿ ಆಧಾರ್ ವೆಬ್ಸೈಟ್ https://uidai.gov.in/ ಗೆ ಲಾಗಿನ್ ಅಗಿ ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ಮಾಡಿ ನವೀಕರಿಸಬಹುದು ಎಂದು ಆಧಾರ್ ಪ್ರಾಧಿಕಾರ ಜಾಲತಾಣದಲ್ಲಿ uidai ಪ್ರಕಟಣೆ ಹೊರಡಿಸಿದೆ.
ಒಂದು ವೇಳೆ ನವೀಕರಿಸದಿದ್ದರೆ ಮುಂದಿನ ದಿನಗಳಲ್ಲಿ ಭಾರೀ ದಂಡ ಕಟ್ಟಬೇಕಾಗಿ ಬರಬಹುದು. ಪಾನ್ ಕಾರ್ಡ್, ಬ್ಯಾಂಕ್ ಲಿಂಕ್ಗೆ,
ಸಮಯಾವಕಾಶ ಕೋರಿ. ಆನಂತರ ಭಾರೀ ದಂಡ ಘೋಷಿಸಿತ್ತು. ಆಧಾರ್ ನವೀಕರಣಕ್ಕೂ ಇದೇ ಮಾನದಂಡ ಪ್ರಯೋಗಿಸುವ ಸಾಧ್ಯತೆ.
ಇದೆ.
ಒಮ್ಮೆ ನಿಮ್ಮ ಆಧಾರ್ ಕಾರ್ಡ್ ನವೀಕರಿಸಿದ ದಿನಾಂಕವನ್ನು ಪರೀಕ್ಷಿಸಿಸಿ, 10 ವರ್ಷಗಳು ಮುಗಿದಿದೆಯಾ ಎಂದು ತಿಳಿದುಕೊಳ್ಳಿ, ಮುಗಿದರೆ ನವೀಕರಿಸಿಕೊಳ್ಳಬೇಕು