

ಕುಂದಾಪುರ: ಭಾರತೀಯ ಕಥೋಲಿಕ್ ಯುವ ಸಂಚಲನ ಕುಂದಾಪುರ ವಲಯದ ವತಿಯಿಂದ ಆಯೋಜಿಸಲಾದ “ಯುವ ಸ್ಪೋರ್ಟ್ಸ್ ಫಿಯೇಸ್ಟಾ – 2023” ನಡೆದ ಕ್ರೀಡೋತ್ಸವದ ಸಮಾರೋಪ ಮತ್ತು ಟ್ರೋಫಿ ವಿತರಣೆ ಸಮಾರಂಭವು ನವೆಂಬರ್ 05 ರಂದು ಸಂಜೆ ನಡೆಯಿತು.
ಈ ಕ್ರೀಡಾ ಫಿಯೆಸ್ಟಾ ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಐದು ವಲಯಗಳಿಂದ ಸುಮಾರು 200 ಯುವ ಯುವತಿಯರು ಭಾಗವಹಿಸಿದ್ದು ಕ್ರೀಡೋತ್ಸವ ಬಹಳ ಯಶಸ್ವಿಯಾಗಿ ಮುಕ್ತಾಯವಾಯಿತು.
ಇದರ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರದ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ| ವಂ| ಸ್ಟ್ಯಾನಿ ತಾವ್ರೊ ವಹಿಸಿದ್ದರು. ಉಡುಪಿ ಧರ್ಮಪ್ರಾಂತ್ಯದ
ಉಡುಪಿ ಡಯಾಸಿಸ್ ಐ ಸಿ ವೈ ಎಮ್ ಸಂಘಟನೇಯ ನಿರ್ದೇಶಕರಾದ ಧರ್ಮಗುರು ವಂ| ಸ್ಟೀವನ್ ಫೆರ್ನಾಂಡಿಸ್, ಉಡುಪಿ ವಲಯ ಐ ಸಿ ವೈ ಎಮ್ ಸಂಘಟನೇಯ ನಿರ್ದೇಶಕರಾದ ಧರ್ಮಗುರು ವಂ| ರಾನ್ಸನ್ ಡಿಸೋಜ, ಕ್ರೀಡಕೂಟದ ಆತಿಥ್ಯ ವಹಿಸಿದ ಕುಂದಾಪುರ ವಲಯದ ನಿರ್ದೇಶಕರಾದ ಧರ್ಮಗುರು ವಂ| ಅಶ್ವಿನ್ ಅರನ್ನಾ, ಗಂಗೊಳ್ಳಿ ಚರ್ಚಿನ ಧರ್ಮಗುರು ವಂ|ಥಾಮಸ್ ರೋಶನ್ ಡಿಸೋಜ, ಪಡುಬಿದ್ರಿ ಅಬಕಾರಿ ಪೊಲೀಸ್ ನಿರೀಕ್ಷರಾದ ಮಿಲ್ಲರ್ ಡಿಸೋಜ,ಕುಂದಾಪುರ ಚರ್ಚಿನ ಪಾಲನಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ. ವಲಯ ಯುವ ಆಯೋಗದ ಸಂಚಾಲಕ ಓವಿನ್ ರೆಬೆಲ್ಲೊ, ಉಡುಪಿ ಧರ್ಮಪ್ರಾಂತ್ಯದ ಐಸಿವೈಎಮ್ ಅಧ್ಯಕ್ಷ, ಕಾರ್ಯದರ್ಶಿ, ಧರ್ಮಪ್ರಾಂತ್ಯ ಪರಿಷತ್ತಿನ ಸದಸ್ಯರು,ವಲಯ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.

ಕ್ರೀಡಾ ಕೂಟದಲ್ಲಿ ಒಟ್ಟಾರೆಯಾಗಿ ಕಲ್ಯಾಣಪುರ ವಲಯವು ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನ ಪಡೆದು ಚಾಂಪಿಯನ್‌ಶಿಪ್ ಟ್ರೋಫಿ ಪಡೆಯಿತು ಶಿರ್ವ ವಲಯವು ರನ್ನರ್ಸ್ ಟ್ರೋಫಿ ಪಡೆಯಿತು


