

ಉದ್ಯಾವರ : ಉದ್ಯಾವರ ಗ್ರಾಮದ ಅತ್ಯಂತ ಹಿರಿಯ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತೀಯ ಕಥೋಲಿಕ್ ಯುವ ಸಂಚಲನ (ಐಸಿವೈಎಂ) ಉದ್ಯಾವರ ಘಟಕದ 55ನೇ ವರ್ಷದ ಅಧ್ಯಕ್ಷರಾಗಿ ಪ್ರಿಲ್ಸನ್ ಮಾರ್ಟಿಸ್ ಆಯ್ಕೆಯಾಗಿದ್ದಾರೆ.
ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮ ಗುರುಗಳೂ, ಸಂಸ್ಥೆಯ ನಿರ್ದೇಶಕರು ಆಗಿರುವ ವo. ಫಾ. ಅನಿಲ್ ಡಿಸೋಜಾ ರವರ ಉಪಸ್ಥಿತಿಯಲ್ಲಿ 2025ನೇ ಸಾಲಿನ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರತಿಕ್ರಿಯೆಯು ನಡೆಯಿತು.
ಕಾರ್ಯದರ್ಶಿಯಾಗಿ ಸ್ಟೆನಲ್ ಡಿಸಿಲ್ವಾ, ಉಪಾಧ್ಯಕ್ಷರಾಗಿ ರೋಲ್ವಿನ್ ಅಲ್ಮೆಡ, ಸಹ ಕಾರ್ಯದರ್ಶಿ ಸ್ಮಿತಾ ಒಲಿವೇರಾ, ಕೋಶಾಧಿಕಾರಿ ಗ್ಲ್ಯಾನಿಶ್ ಪಿಂಟೊ, ಪಿ ಆರ್ ಓ ಫರ್ಡಿನಂಡ್ ಡಿಸೋಜಾ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮರ್ವಿನ್ ಅಲ್ಮೆಡ, ಪ್ರಾರ್ಥನಾ ಕಾರ್ಯದರ್ಶಿಯಾಗಿ ಶರನ್ ಕ್ರಾಸ್ಟೊ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ 2024 ಸಾಲಿನ ಅಧ್ಯಕ್ಷ ಗ್ಲ್ಯಾನಿಶ್ ಪಿಂಟೊ, ಕಾರ್ಯದರ್ಶಿ ಸಾಷಾ ಮೊoತೆರೊ, ಸಲಹೆಗಾರರಾದ ಜೂಲಿಯಾ ಡಿಸೋಜ ಉಪಸ್ಥಿತರಿದ್ದರು.


