ಉಡುಪಿ : ಉಡುಪಿ ಧರ್ಮಪ್ರಾಂತ್ಯದ ಐಸಿವೈಎಮ್ ನ ಸಮಾವೇಶವು ಸಪ್ಟೆಂಬರ್ 24 ರಂದು ಕಲ್ಯಾಣ್ಪುರ ಮೌಂಟ್ ರೋಜರಿ ಚರ್ಚಿನ ಸಭಾಂಗಣದಲ್ಲಿ ಅಯೋಜಿಸಲಾಗಿತ್ತು. ಬೆಳಿಗ್ಗೆ 9.15 ಗಂಟೆಗೆ ಸಮಾವೇಶದ ಉದ್ಗಾಟನಾ ಸಮಾರಂಭವು ನೇರವೆರಿ ಸಂಪನ್ನಗೊಂಡಿತು.
ಉದ್ಗಾಟನಾ ಸಮಾರಂಭದ ಅಧ್ಯಕ್ಷತೆಯನ್ನುಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಟ ಗುರುಗಳಾದ ವಂದನೀಯ ಫರ್ಡಿನಾಂಡ್ ಗೊನ್ಸಾಲ್ವೆಸ್ಆವರು ವಹಿಸಿದ್ದರು.ಮುಖ್ಯಆಥಿತಿಯಾಗಿ ಸಂತೆಕಟ್ಟೆ ಮೌಂಟ್ ರೋಜರಿಚರ್ಚಿನ ಧರ್ಮಗುರುಗಳಾದ ವಂದನೀಯ ಗುರು ಡಾ| ರೋಕ್ ಡಿ’ಸೋಜಾ ಮತ್ತು ದಾಯ್ಜಿವಲ್ಡ್ ನ ಮ್ಯಾನೇಜಿಂಗ್ಡೈರೆಕ್ಟರ್ ಶ್ರೀ ವಾಲ್ಟರ್ ನಂದಳಿಕೆಯವರು ವಹಿಸಿದ್ದರು. ಕರ್ನಾಟಕ ಪ್ರಾಂತೀಯ ಐಸಿವೈಎಮ್ ಅಧ್ಯಕ್ಷ ನೇವಿನ್ ಆಂಟ್ಯನಿ, ವೈಸಿಎಸ್/ ವೈಎಸ್ಎಮ್ ರಾಷ್ಟೀಯ ಅಧ್ಯಕ್ಷ ಅ್ಯನ್ಸನ್ ನಜರೆತ್, ಸಂತೆಕಟ್ಟೆ ಮೌಂಟ್ ರೋಜರಿ ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷರು ಶ್ರೀ ಲೂಕ್ ಡಿ’ಸೋಜಾ, ಉಡುಪಿ ಧರ್ಮಪ್ರಾಂತ್ಯದ ಐಸಿವೈಎಮ್ ನಿರ್ದೇಶರಾದ ವಂದನೀಯಗುರು ಸ್ಟೀವನ್ ಪೆರ್ನಾಂಡಿಸ್, ಉಡುಪಿ ವಲಯದ ಐಸಿವೈಯಮ್ ನಿರ್ದೇಶಕರಾದ ವಂದನೀಯ ಗುರು ರೋನ್ಸನ್ ಡಿ’ಸೋಜಾ, ಉಡುಪಿ ಧರ್ಮಕೇಂದ್ರದ ಐಸಿವೈಯಮ್ ಅಧ್ಯಕ್ಷೆ ಅ್ಯಶ್ಲಿ ಡಿ’ಸೋಜಾ, ಕಾರ್ಯದರ್ಶಿ ಶೈನಿ ಅಲ್ವಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಆಥಿತಿ ವಂದನೀಯ ಗುರು ರೋಕ್ ಡಿ’ಸೋಜಾರವರು ತಮ್ಮ ಸಂದೇಶದಲ್ಲಿ ಯುವಜನರು ಆವಕಾಶ ಸಿಕ್ಕಾಗ ಆದರ ಸಧುಪಯೋಗ ಮಾಡಬೇಕೆಂದು ಹೇಳಿದರು.ನಂತರಉಡುಪಿ ಧರ್ಮಪ್ರಾಂತ್ಯದ ನೂತನ ಶ್ರೇಷ್ಟ ಗುರುಗಳಾಗಿ ಎಪ್ರಿಲ್ನಲ್ಲಿ ಹುದ್ದೆ ಸ್ವೀಕಾರಿಸಿದ ಅತೀ ವಂದನೀಯ ಫರ್ಡಿನಾಂಡ್ ಗೊನ್ಸಾಲ್ವೆಸ್ ಅವರನ್ನು ಸನ್ಮಾನಿಸಲಾಯಿತು. ಅವರು ತಮ್ಮಅದ್ಯಕ್ಷೀಯ ಭಾಷಣದಲ್ಲಿ ಇಲ್ಲಿ ನೆರೆದಿರುವ ಎಲ್ಲಾ ಯುವಜನರು ನಮ್ಮಉಡುಪಿ ಧರ್ಮಕ್ರೇಂದ್ರದ ಮುಂದಿನ ಭವಿಷ್ಯವಾಗಿರುವರು.ನಾವು ಕಲಿಯುವಾಗ ಸಣ್ಣ ಪುಟ್ಟ ಕೆಲಸ ಮಾಡಲು ಆವಕಾಶ ಸಿಕ್ಕಾಗ ಆದರ ಸದುಪಯೋಗ ಪಡಿಸಬೇಕೆಂದರು.ಈ ಯುವ ಸಮಾವೇಶ ಮೌಂಟ್ ರೋಜರಿ ಚರ್ಚ್ ಕಲ್ಯಾಣ್ಪುದಲ್ಲಿ ಅಯೋಜಿಸಲು ಸಹಕಾರ ನಿಡಿದ ಮೌಂಟ್ ರೋಜರಿ ಚರ್ಚಿನ ಧರ್ಮಗುರುಗಳಾದ ವಂದನೀಯ ಗುರು ಡಾ| ರೋಕ್ ಡಿ’ಸೋಜಾ ಅವರನ್ನು ಸನ್ಮಾನಿಸಲಾಯಿತು. ಮುಖ್ಯಆಥಿತಿ ದಾಯ್ಜಿವಲ್ಡ್ನ ಮ್ಯಾನೇಜಿಂಗ್ ಡೈರೆಕ್ಟರ್ ವಾಲ್ಟರ್ ನಂದಳಿಕೆ ಯುವಜನತೆ ಮತ್ತು ಸಂಪರ್ಕ ಮಾಧ್ಯಮಗಳ ಉಪಯೋಗ, ಆದರಿಂದಾಗುವ ಸಮಸ್ಯೆಗಳ ಬಗ್ಗೆ ಯುವಜನರಿಗೆ ಸವಿಸ್ತಾರ ಮಾಹಿತಿ ನೀಡಿದರು.ಅವರನ್ನು ಸನ್ಮಾನಿಸಲಾಯಿತು. ವಂದನೀಯ ಗುರು ಜೋಕಿಮ್ ಡಿ’ಸೋಜರವರು ಭಾರತದಲ್ಲಿ ಭಾರತಿಯಾನಾಗಿ ಯುವಜನರ ಪಾತ್ರ ಈ ಬಗ್ಗೆ ಯುವಜನರಿಗೆ ಸವಿಸ್ತಾರ ಮಾಹಿತಿ ನೀಡಿದರು. ಪ್ರೀತೆಶ್ ಪಿಂಟೊ ವಂದಿಸಿ, ಆಶೀಷ್ ಮಿನೇಜಸ್ ಕಾರ್ಯ ನಿರೂಪಣೆ ಮಾಡಿದರು.
ದಿವ್ಯ ಬಲಿಪೂಜೆಯನ್ನುಉಡುಪಿ ವಲಯದ ಐಸಿವೈಎಮ್ ನಿರ್ದೇಶರಾದ ವಂದನೀಯ ಗುರು ರೋನ್ಸನ್ ಡಿ’ಸೋಜಾ ನೇರವೇರಿಸಿದರು. ಮದ್ಯಾನ 2.15 ಕ್ಕೆ 5 ವಲಯಗಳ ನಡುವೆ ಪದ್ಯ, ನ್ರತ್ಯ ಹಾಗೂ ಪ್ಯಾಶನ್ ಶೊ ಸ್ಪರ್ಧೆ ನಡೆಯಿತು. ವಂ.ಗುರು ರೊಬಿನ್ ಸಾಂತುಮಾಯೊರ್, ಶ್ರೀಮತಿ ಸ್ವಪ್ನಾ ಡಿ’ಸಿಲ್ವಾ ಮತ್ತು ಶ್ರೀ ಆಶ್ವಿನ್ ಡಿ’ಕೊಸ್ಟಾರವರು ಸ್ಪರ್ಧೆಯತಿರ್ಪುದರಾರಗಿದ್ದರು.
4.30 ಗೆ ಸಮಾರೋಪ ಸಮಾರಂಭವನ್ನು ಆರಂಭಗೊಂಡು, ಇದರ ಆಧ್ಯಕ್ಷತೆಯನ್ನು ಕಲ್ಯಾಣ್ಪುರ ಮಿಲಾಗ್ರಿಸ್ ಕಾಥೆದ್ರಲಿನ ಧರ್ಮಗುರುಗಳಾದ ಅತೀ ವಂದನೀಯ ಗುರು ವಲೇರಿಯನ್ ಮೆಂಡೋನ್ಸಾ ವಹಿಸಿದ್ದರು. ಸಮಾರೋಪ ಸಮಾರಂಭದ ಮುಖ್ಯಅತಿಥಿ ಸ್ಥಾನವನ್ನು ಡಾ| ಶ್ವೇತಾ ರಸ್ಕಿನಾ, ವಹಿಸಿದ್ದರು. ವೆದಿಕೆಯಲ್ಲಿ ವಂ.ಗುರು ರೊಬಿನ್ ಸಾಂತುಮಾಯೊರ್, HOD department of social work, St. Aloysius College M’Lore- ಸ್ವಪ್ನಾ ಡಿ’ಸಿಲ್ವಾ, ಆಶ್ವಿನ್ ಡಿ’ಕೊಸ್ಟಾ, ಕರ್ನಾಟಕ ಪ್ರಾಂತೀಯ ಐಸಿವೈಯಮ್ ಅಧ್ಯಕ್ಷ ನೇವಿನ್ ಆಂಟ್ಯನಿ, ವೈಸಿಎಸ್/ ವೈಎಸ್ಎಮ್ ರಾಷ್ಟೀಯ ಅಧ್ಯಕ್ಷ ಅ್ಯನ್ಸನ್ ನಜರೆತ್, ಸಂತೆಕಟ್ಟೆ ಮೌಂಟ್ ರೋಜರಿ ಚರ್ಚಿನ ಪಾಲನ ಮಂಡಳಿಯ ಕಾರ್ಯದರ್ಶಿ ಪ್ರೀಯಾ ಪುರ್ಟಾಡೊ, ಉಡುಪಿ ಧರ್ಮಕೇಂದ್ರದ ಐಸಿವೈಯಮ್ ನಿರ್ದೇಶರಾದ ವಂದನೀಯಗುರು ಸ್ಟೀವನ್ ಪೆರ್ನಾಂಡಿಸ್, ಉಡುಪಿ ಧರ್ಮಕೇಂದ್ರದ ಐಸಿವೈಯಮ್ ಅಧ್ಯಕ್ಷೆ ಅ್ಯಶ್ಲಿ ಡಿ’ಸೋಜಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಡುಪಿ ಧರ್ಮಕೇಂದ್ರದ ಐಸಿವೈಯಮ್ ಕಾರ್ಯದರ್ಶಿ ಶೈನಿ ಅಳ್ವಾ ಸ್ವಾಗತಿಸಿದರು. ಸಮಾರೋಪ ಕಾರ್ಯಕ್ರಮದಲ್ಲಿ ಉಡುಪಿ ಧರ್ಮಕೇಂದ್ರದ 5 ವಲಯಗಳ ಐಸಿವೈಯಮ್ ನಿರ್ದೇಶಕರನ್ನು ಅವರ ನಿಸ್ವಾರ್ಥ ಸೇವೆಗೆ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ದಾನ-ಸಹಾಯ ನಿಡಿದ ದಾನಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಒನ್ಲೈನ್ ಸ್ಪಧೆಗಳ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು.
ಮ್ಹಧ್ಯಾನ ನಡೆದ ಸಾಂಸ್ಕ್ರತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕವಿತೆ ಪ್ರಶಸ್ತಿ ವಿಜೇತರು:
ಪ್ರಥಮ: ರೀಶಲ್ ಲೋಬೊ, ಬೈದೂರು. ದ್ವಿತಿಯ: ಅನ್ಸಿಟಾಡಿಸೋಜಾ, ಮೂಡುಬೆಳ್ಳೆ, ತೃತಿಯ: ಮೆಲಿಸ್ಸಾ ಕುಟಿನ್ಹಾ. ರೀಲ್ಸ್ ಸ್ಪರ್ಧೆ: ಮಿಲಾಗ್ರಿಸ್ ಐ.ಸಿ.ವೈ.ಎಮ್ ಘಟಕ, ಮಿಯಾರ್ ಐ.ಸಿ.ವೈ.ಎಮ್ ಘಟಕ, ಕಾರ್ಕಳ ಟೌನ್ ಐ.ಸಿ.ವೈ.ಎಮ್ ಘಟಕ. ಸ್ಟಾಂಡ್ ಅಪ್ ಕಾಮಿಡಿ: ಪ್ರಥಮ, ದಿವ್ಯ ಪಿಂಟೊ, ಶಿರ್ವಾ.
ನೃತ್ಯ ಸ್ವರ್ಧೆ ವಿಜೇತರು :
1. ಕಲ್ಯಾಣ್ಪುರ ವಲಯ, 2. ಉಡುಪಿ ವಲಯ, 3. ಕಾರ್ಕಳ ವಲಯ.
ಪ್ಯಾಶನ್ ಶೊ ಸ್ಪರ್ಧೆ: 1
ಕಾರ್ಕಳ ವಲಯ 2. ಉಡುಪಿ ವಲಯ 3.ಕಲ್ಯಾಣ್ಪುರ ವಲಯ.
ಸಂಗೀತ ಸ್ವರ್ಧೆ;
1.ಕಲ್ಯಾಣ್ಪುರ ವಲಯ, 2.ಉಡುಪಿ ವಲಯ, 3.ಕಾರ್ಕಳ ವಲಯ.
ಚಾಂಪಿಯನ್ ಆಗಿ ಕಲ್ಯಾಣ್ಪುರ್ ವಲಯ ಹಾಗೂ ರನ್ನರ್ ಆಪ್ ಆಗಿ ಉಡುಪಿ ವಲಯ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿದಿಕೊಂಡರು.
ಕಾರ್ಯಕ್ರಮದ ಯಸಸ್ಸಿಗೆ ಕಾರಣಕರ್ಥರಾದ ಎಲ್ಲರನ್ನು ಉಡುಪಿ ಧರ್ಮಕೇಂದ್ರದ ಐಸಿವೈಯಮ್ ನಿರ್ದೇಶರಾದ ವಂದನೀಯ ಗುರು ಸ್ಟೀವನ್ ಪೆರ್ನಾಂಡಿಸ್ ವಂದಿಸಿದರು. ಗೋಡ್ವಿನ್ ಕಾರ್ಯ ನಿರೂಪಣೆ ಮಾಡಿದರು. ಸರಿಸುಮಾರು 450 ಯುವಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸಂಜೆ 6.00 ಕ್ಕೆ ಕಾರ್ಯಕ್ರಮ ಸಮಾರೋಪಗೊಂಡಿತು.