ಶ್ರೀನಿವಾಸಪುರ : ಪಂಚಾಯಿತಿಯ ಸರ್ವತೋಮುಖ ಅಭಿವೃದ್ಧಿಗಾಗಿ ನಾನು ಶ್ರಮಿಸಿ, ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಹಂತ ಹಂತವಾಗಿ ಅಭಿವೃದ್ದಿಪಡಿಸಲಾಗುವುದು. ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಕಾನೂನು ಚೌಕಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲಮಾಡಲಾಗುವುದು ಎಂದು ಪಿಡಿಒ ಕೆ.ಪಿ.ಶ್ರೀನಿವಾಸರೆಡ್ಡಿ ಹೇಳಿದರು.
ತಾಲೂಕಿನ ಯಲ್ದೂರು ಗ್ರಾಮದ ಗ್ರಾಮಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಗ್ರಾಮಸಭೆಯಲ್ಲಿ ಮತನಾಡಿದರು.
ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಹಳ್ಳಿಗಳಲ್ಲಿ ಬೀದಿ ದೀಪಗಳಿಗೆ ಬಲ್ಬುಗಳು ಇಲ್ಲದೆ ಇರುವ ಕಂಬಗಳನ್ನು ಪರಿಶೀಲಿಸಿ ಬಲ್ಬುಗಳನ್ನು ಹಾಕಿಸಲಾಗುವುದು. ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಹಳ್ಳಿಗಳಲ್ಲಿ ನೀರಿನ ಪೈಪ್ ಲೈನ್ ಹೊಡೆದು ಹೋಗಿರುವ ಬಗ್ಗೆ ಮಾಹಿತಿ ಲಬಿಸಿದ್ದು, ಅವುಗಳನ್ನ ಸರಿಪಡಿಸಲಾಗುವುದು.
ಗ್ರಾಮಪಂಚಾಯಿತಿಗೆ ಈ ಸಾಲಿನಲ್ಲಿ ಸರ್ಕಾರದ ಮಟ್ಟದಲ್ಲಿ ಉತ್ತಮ ಗ್ರಾಮಪಂಚಾಯಿತಿ ಎಂಬ ಹಗ್ಗಳಿಕೆಯನ್ನು ಪಡೆದುಕೊಂಡಿದ್ದು, ಅದರಂತೆ ಸರ್ಕಾರದಿಂದ ಅನುದಾನವು ಬಿಡುಗಡೆಯಾಗಿದೆ ಅದರಂತೆ ಹಿಂದಿನ ಗ್ರಾಮಸಭೆಯಲ್ಲಿ ಪಂಚಾಯತಿ ಅಭಿವೃದ್ಧಿಯ ಬಗ್ಗೆ ಪಟ್ಟಿ ಮಾಡಲಾಗಿದೆ ಅದರಂತೆ ಆ ಯೋಜನೆಯ ಪ್ರಕಾರದಂತೆ ಅನುದಾನವನ್ನು ಸದ್ಭಳಕೆ ಮಾಡಿಕೊಳ್ಳಲಾಗುವುದು.
ಹಾಗು ಗಾಂಧಿ ಗ್ರಾಮೋದ್ಯೋಗ ಪುರಸ್ಕರದಂತೆ ಅನುದಾನ ಬಿಡುಗಡೆಯಾಗಿದ್ದು ಅದರ ಯೋಜನೆಯಂತೆ ಅನುದಾನವನ್ನು ಗ್ರಾಮಪಂಚಾಯಿತಿ ಅಧ್ಯಕ್ಷ , ಸದಸ್ಯರ , ಗ್ರಾಮಸ್ಥರ ಸಹಕಾರವನ್ನು ಪಡೆದು ಸದ್ಭಳಕೆ ಮಾಡಲಾಗುವುದು , 10 ನೇ ಹಣಕಾಸಿನ ಯೋಜನೆಯ ಬಗ್ಗೆಯೂ ಚರ್ಚೆ ಮಾಡಲಾಗಿದ್ದು ಅದರ ಅನುದಾನವನ್ನು ಬಳಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಒಟ್ಟಿನಲ್ಲಿ ಅಧ್ಯಕ್ಷ, ಸದಸ್ಯರ, ಗ್ರಾಮಸ್ಥರ ಸಹಕಾರವನ್ನು ಪಡೆದು ಪಂಚಾಯಿತಿಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಉಪಾಧ್ಯಕ್ಷ ಎಸ್.ಮೋಹನ್ಬಾಬು ಮಾತನಾಡಿದರು. ಗ್ರಾಮಸಭೆಗೆ 20 ಸದಸ್ಯರು ಹಾಜರಿದ್ದರು. ಗ್ರಾ.ಪಂ.ಅಧ್ಯಕ್ಷೆ ವಿ.ವಿಜಯಲಲಿತ, ಕರವಸೂಲಿಗಾರ ಅಮರನಾರಾಯಣಪ್ಪ, ಗಣಕಯಂತ್ರ ನಿರ್ವಾಹಕ ಎಂ.ವಸಂತ ಹಾಗು ಗ್ರಾ.ಪಂ.ಸದಸ್ಯರು ಹಾಗು ಸಿಬ್ಬಂದಿ ಇದ್ದರು.