ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ; ಈ ಕ್ಷೇತ್ರದ ಜನರ ಸಹಕಾರ ಅವರ ಅಶೀರ್ವಾದ ಪ್ರೀತಿ ವಿಶ್ವಾಸವನ್ನು ಗಳಿಸಿ ಈ ಕ್ಷೇತ್ರದ ಅಭಿವೃದ್ದಿಯನ್ನು ಮಾಡುತ್ತೇನೆ ನನಗೆ ಸಹಕಾರ ನೀಡ ಬೇಕೆಂದು ಸಮಾಜ ಸೇವಕ ಗುಂಜೂರು ಆರ್.ಶ್ರೀನಿವಾಸರೆಡ್ಡಿ ತಿಳಿಸಿದರು.
ಪಟ್ಟಣದ ಬೀದಿ ವ್ಯಾಪಾರಸ್ಥರಿಗೆ, ಛೆತ್ರಿ ಸರ್ಕಾರಿ ಅಸ್ವತ್ರೆ, ಪೋಲೀಸ್ ಇಲಾಖೆಗೆ, ತಾಲ್ಲೂಕು ಕಛೇರಿಯ ಸಿಬ್ಬಂದಿಗೆ, ಮಾಸ್ಕ್, ಸ್ಯಾನಿಟೈಜರ್ ವಿತರಿಸಿ ಹಾಗೆಯೇ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಹೊಸಹಳ್ಳಿ ಗ್ರಾಮದ ರೈತ ಕೃಷ್ಣಾರೆಡ್ಡಿ ಮಗಳಾದ ಕೆ. ಪೂರ್ವಿ 625 ಅಂಕ ಗಳಿಸಿ ರಾಜ್ಯಕ್ಕೆ ಮೊದಲಾಗಿ ಒಳ್ಳೆಯ ಕೀರ್ತಿ ಬೆಳಗಿದ್ದಾಳೆ ಈ ವಿದ್ಯಾರ್ಥಿಗೆ 20 ಸಾವಿರ ಪ್ರೋತ್ಸಹವನ್ನು ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಶ್ರೀನಿವಾಸರೆಡ್ಡಿ ಈ ಕ್ಷೇತ್ರದ ಅಭಿವೃದ್ದಿಗೆ ಅಗಲಿರಳು ಶ್ರಮಿಸಲು ನನಗೆ ಸಹಕಾರ ನೀಡಬೇಕು ನಿಮ್ಮ ಮನೆಯ ಮಗನಂತೆ ಬಾವಿಸಿ ನನಗೆ ಅಶೀರ್ವಾದ ಮಾಡಿ ನಿಮ್ಮ ಸೇವೆ ಮಾಡಲು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸುತ್ತೇನೆ. ಸಾರ್ವಜನಿಕರು ಸಹಕಾರ ನೀಡಬೇಕು ಕಳೆದ 40 ವರ್ಷಗಳಿಂದ ಸ್ವಾಮಿ ರೆಡ್ಡಿಗೆ ಆಶೀರ್ವಾದ ಮಾಡಿದ್ದೀರಿ ಈ ಭಾರಿ ಮುಂದಿನ ವಿಧಾನ ಸಭೆಗೆ ಆಯ್ಕೆಯಾಗಲು ತಾಲ್ಲೂಕಿನ ಜನತೆ ಸಹಕಾರ ನೀಡಬೇಕು ನಿಮ್ಮ ಸೇವೆ ಮಾಡಲು ಸದಾ ಇರುತ್ತೇನೆ ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿಯೇ ಸ್ವಂತ ಮನೆಯನ್ನು ಮಾಡಿ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದರು.
ಕಳೆದ 2 ತಿಂಗಳಿಂದ ಅನೇಕ ಮುಖಂಡರನ್ನು ಬೇಟಿ ಮಾಡಿದ್ದೇನೆ ಅವರ ಆಶೀರ್ವಾದ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹಲವಾರು ಈ ಭಾಗದ ಹಿರಿಯರು ನಿಮಗೆ ಸಹಕರಿಸುತ್ತೇವೆ ಎಂದು ಅಶ್ವಾಸನೆಯನ್ನು ನೀಡಿದ್ದಾರೆ. ಈ ಕ್ಷೇತ್ರದ ಜನತೆ ನನಗೆ ಅವಕಾಶ ನೀಡಬೇಕೆಂದು ಕೋರಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜಶೇಖರೆಡ್ಡಿ ಮಾತನಾಡಿ ನಾನು ಈಗಾಗಲೇ ಜೆಡಿಎಸ್ ಪಕ್ಷದಿಂದ ಹೊರಬಂದಿದ್ದೇನೆ ನಮ್ಮ ಅತ್ಮೀಯ ಸ್ನೇಹಿತ ಸಮಾಜ ಸೇವಕರಾದ ಶ್ರೀನಿವಾಸರೆಡ್ಡಿ ಸಮಾಜ ಸೇವೆ ಮಾಡುವ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಅವರಿಗೆ ಬೆನ್ನೇಲುಬಾಗಿ ಕೆಲಸ ಮಾಡುತ್ತೇವೆ. ಈ ಕ್ಷೇತ್ರದಾಂತ್ಯ ಹೋರಾಡಿ ಅವರ ಕೈಬಲಪಡಿಸುವ ಕೆಲಸ ಮಾಡುತ್ತೇವೆ. ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ. ನಾವು ನೀವು ಎಲ್ಲರೂ ಸೇರಿ ವಿಧಾನಸೌಧಕ್ಕೆ ಶಾಸಕರಾಗಿ ಕಳುಹಿಸಿಕೊಡಬೇಕು ಅವರ ಗೆಲುವಿಗಾಗಿ ಅಗಲಿರಳು ಶ್ರಮಿಸೋಣ ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೀಳಿಸುವ ಕೆಲಸ ಮಾಡುತ್ತೇವೆ. ಈ ಚುನಾವಣೆಯಿಂದಲೇ ಸಂಕ್ರಿಯವಾಗಿ ತಾಲ್ಲೂಕಿನಾಂದ್ಯಂತ ಹೋರಾಡಿ ಇವರನ್ನು ಗೆಲ್ಲಿಸಿ ಕಳುಹಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಗೊಲ್ಲಪಲ್ಲಿ ಪ್ರಸನ್ನ, ಎಂ.ಟಿ.ಎಸ್. ಸುಬ್ರಮಣಿ, ವಕೀಲ ನರಸಿಂಹರಾಜು, ಸುನಿಲ್, ನಂಬಿಹಳ್ಳಿ ಮಹೇಶ್, ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.