ಶ್ರೀನಿವಾಸಪುರ : ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶದಿಂದ ೫೦೦೦ ಎಕರೆ ಭೂಮಿಯನ್ನು ಕೈಗಾರಿಕಾ ವಲಯ ಮಾಡಲು ಇಚ್ಚೆಸಿದ್ದೇನೆ. ೩೦೦೦ ಎಕರೆಗಳಷ್ಟು ಯಲ್ದೂರು ಗ್ರಾಮದ ಬಳಿ ಹಾಗೂ ಮೂರರಿಂದ ನಾಲ್ಕು ಸಾವಿರ ಎಕರೆಗಳಷ್ಟು ಮದನಪಲ್ಲಿ ರಸ್ತೆಯಲ್ಲಿ ಕೈಗಾರಿಕಾ ವಲಯವನ್ನು ಸ್ಥಾಪನೆ ಮಾಡಲಾಗುವುದು . ಈ ಯೋಜನೆಯು ಎರಡು ಮೂರು ವರ್ಷಗಳಲ್ಲಿ ಕಾರ್ಯಗತವಾಗಲಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಭರವಸೆ ನೀಡಿದರು.
ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಶುಕ್ರವಾರ ಜೆಡಿಎಸ್, ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿಪರ ಮತಯಾಚನಾ ಸಭೆಯನ್ನು ಉದ್ಗಾಟಿಸಿ ಮಾತನಾಡಿದರು.
ಹಾಗೂ ಮುಂದಿನ ದಿನಗಳಲ್ಲಿ ಗೌನಿಪಲ್ಲಿ ಪಟ್ಟಣ ಪಂಚಾಯಿತಿ ಮಾಡುವುದಾಗಿ ಗೌನಿಪಲ್ಲಿಯಲ್ಲಿ ನಡೆದ ಸಭೆಯಲ್ಲಿ ಭರವಸೆ ನೀಡಿದರು. ಕೇಂದ್ರ ಸರ್ಕಾರವು ಅಲ್ಪಸಂಖ್ಯಾತರ ಉದ್ದಾರಕ್ಕಾಗಿ ಅನೇಕ ಯೋಜನೆಗಳನ್ನು ತಂದಿದೆ ಆದ್ದರಿಂದ ಅಲ್ಪಸಂಖ್ಯಾತರು ಸಹ ಮೈತ್ರಿಗೆ ಅಭ್ಯರ್ಥಿಯಾಗಿರ್ತಕ್ಕಂತ ಮಲ್ಲೇಶ್ ಬಾಬುರವರಿಗೆ ಮತವನ್ನು ಹಾಕುವಂತೆ ಮನವಿ ಮಾಡಿದರು
ವಿದಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷದಲ್ಲಿ ಭಾರತವನ್ನು ಅತ್ಯುನ್ನುತ ಮಟ್ಟಕ್ಕೆ ಕರೆದ್ಯೂಲು ಕಾರಣರಾಗಿರುತ್ತಾರೆ. ಕಳೆದ ೭೦ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವು ದೇಶವನ್ನು ಯಾವುದೇ ಅಭಿವೃದ್ಧಿಯನ್ನು ಮಾಡಿರುವುದಿಲ್ಲ ಆದರೆ ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಯನ್ನ ಪ್ರಪಂಚವೆ ನೋಡುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಕಾರಣರಾಗಿದ್ದಾರೆ ಎಂದರು.
ಸಂಸದ ಮುನಿಸ್ವಾಮಿ ಮಾತನಾಡಿ ಇಂದು ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯು ಒಬ್ಬಂಟಿಗನಾಗಿ ಪರದಾಡುತ್ತಿದ್ದು ಇದಕ್ಕೆ ಕಾಂಗ್ರೆಸ್ ಪಕ್ಷದ ಒಳಜಗಳವೆ ಕಾರಣ ಎಂದು ಲೇವಡಿ ಮಾಡಿದರು.
ಇದೇ ಸಮಯದಲ್ಲಿ ಲೋಕಸಭಾ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬುರವರು ರಾಯಲ್ಪಾಡು, ಗೌನಿಪಲ್ಲಿ, ಲಕ್ಷಿö್ಮÃಪುರ, ಪುಂಗನೂರುಕ್ರಾಸ್ ನಲ್ಲಿ ಮತಯಾಚನೆ ಸಭೆಯನ್ನು ಮತಯಾಚನೆ ಮಾಡಿದರು .
ಕೆ ವಿ ಶಿವಾರೆಡ್ಡಿ, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ವೇಣುಗೋಪಾಲರೆಡ್ಡಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ , ಶಿವಪುರ.ಗಣೇಶ್,ಎಂ.ವಿ.ಶ್ರೀನಿವಾಸ್, ಜೆಡಿಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ, ತಾಲೂಕು ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ , ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ ಡಿ.ಎಸ್. ಶ್ರೀನಾಥ್ ರೆಡ್ಡಿ ಮುಖಂಡರಾದ. ಎಸ್ಎಲ್ಎನ್ ಮಂಜುನಾಥ್, ಲಕ್ಷ್ಮಿಪುರ ಜಗದೀಶ್, ಕೊಂಡ ಸಂದ್ರ ನಾಗರಾಜ್, ಉಪ್ಪರಪಲ್ಲಿ ನಾರಾಯಣಸ್ವಾಮಿ, ಟ್ರ್ಯಾಕ್ಟರ್ ರವಿ, ರಾಜಶೇಖರ್ ರೆಡ್ಡಿ , ಲಕ್ಷ್ಮಣ್ ಗೌಡ, ಗಣೇಶ್, ಇ.ಶಿವಣ್ಣ, ನಾಗರಾಜ್, ರಾಜಶೇಖರ್ ರೆಡ್ಡಿ, ಸಿಮೆಂಟ್.ನಾರಾಯಣಸ್ವಾಮಿ, ತೂಪಲ್ಲಿ ಮಧು, ಗೌನಿಪಲ್ಲಿ ರಾಮಮೋಹನ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.