ಶ್ರೀನಿವಾಸಪುರ 1 : ನಾನು ಶಾಸಕನಾಗಿದ್ದ ಸಮಯದಲ್ಲೇ ಆಗಲಿ, ನಂತರ ದಿನಗಳಲ್ಲಿಯೇ ಆಗಲಿ ಎಲ್ಲಾ ಸಮುದಾಯದವರಿಗೂ ಕಷ್ಟ , ಸುಖಗಳಿಗೆ ಸ್ಪಂದಿಸಿ ಜನರೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿದ್ದೇನೆ ಎಂದು ಜೆಡಿಎಸ್ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ರಾಯಲ್ಪಾಡು ಹೋಬಳಿಯ ಗುಡಿಪಲ್ಲಿ ಗ್ರಾಮದಲ್ಲಿ ಮಂಗಳವಾರ ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಕ್ಷವು ಪಂಚರತ್ನ ಯೋಜನೆ ಮುಖಾಂತರ ಧರ್ಮಾತೀತ, ಜ್ಯಾತ್ಯಾತೀತವಾಗಿ ಶಿಕ್ಷಣ, ಉದ್ಯೋಗ, ಕೃಷಿ ಆರೋಗ್ಯ , ವಸತಿ, ಸಂಬಂದಿಸಿದ ಯೋಜನೆಗಳು ಜನರ ಮನ್ನಣೆ ಗಳಿಸಿದೆ. ಹಾಗೂ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಯಂತಹ ಇನ್ನೂ ಅನೇಕ ಯೋಜನೆಗಳು ಜಾರಿಗೆ ತಂದು, ವಿಶೇಷವಾಗಿ ಜಿಲ್ಲೆಯನ್ನು ಅಭಿವೃದ್ಧಿ ಪಡಿಸುವ ಅನೇಕ ಯೋಜನೆಯನ್ನು ಎಚ್.ಡಿ.ಕುಮಾರಸ್ವಾಮಿ ಹಮ್ಮಿಕೊಂಡಿದ್ದು, ಅವರ ಕನಸು ನನಸು ಮಾಡುವ ದೃಷ್ಟಿಯಿಂದ ರಾಜ್ಯದಲ್ಲಿ ಎಚ್.ಡಿ.ಕುಮಾರ್ಸ್ವಾಮಿರವರ ನೇತೃತ್ವದ ಜೆಡಿಎಸ್ ಪಕ್ಷವು ಆಡಳಿತಕ್ಕೆ ಬರುಲು ನಿಮ್ಮೆಲ್ಲೆರ ಆರ್ಶೀವಾದ ಬೇಕಾಗಿದೆ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಸಿದ್ದಾಂತಗಳನ್ನು ಮೆಚ್ಚಿರುವ ಮತದಾರರು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಾರೆ. ಎಚ್.ಡಿ.ಕುಮಾರಸ್ವಾಮಿ ರವರನ್ನ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಭರವಸೆ ನೀಡಿದರು.
ಶಾಸಕ ಕೆ.ಆರ್.ರಮೇಶ್ಕುಮಾರ್ರವರು ಅರಣ್ಯ ಇಲಾಖೆ ಹಾಗೂ ಸಣ್ಣ ರೈತರ ಜಮೀನನ್ನು ಆಕ್ರಮಸಿಕೊಂಡು, ಕ್ಷೇತ್ರದ ಅಭಿವೃದ್ಧಿಗಿಂತ ಸ್ವಂತ ಜಮೀನನ್ನು ಅಭಿವೃದ್ಧಿ ಪಡಿಸಿದ್ದಾರೆ ವಿನಃ ಕ್ಷೇತ್ರ ಅಭಿವೃದ್ಧಿಪಡಿಸಿಲ್ಲ ಎಂದು ಆರೋಪಿಸಿದರು.
ಮುಂದಿನ ಚುನಾವಣೆಯಲ್ಲಿ ನನಗೆ ಮತವನ್ನು ಹಾಕಿ ಗೆಲುವು ತಂದುಕೊಡುವ ಮೂಲಕ ರಾಜ್ಯದಲ್ಲಿ ಎಚ್.ಡಿ.ಕುಮಾರ್ಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಸರ್ಕಾರವನ್ನು ಆಡಳಿತಕ್ಕೆ ತರೋಣ ಎಂದು ಮನವಿ ಮಾಡಿದರು.
ಗುಡಿಪಲ್ಲಿ ಶಿವಾರೆಡ್ಡಿ ನೇತೃತ್ವದಲ್ಲಿ 40 ಕುಟುಂಬಗಳು ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು. ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಕಸಬಾ ಹೋಬಳಿಯ ಜಿ.ಪಂ ಮಾಜಿ ಸದಸ್ಯ ಶ್ರೀನಿವಾಸ್, ಮುಖಂಡರಾದ ಬಿ.ವಿ.ಶಿವಾರೆಡ್ಡಿ, ಕೆ.ವಿ.ಶಿವಾರೆಡ್ಡಿ, ಸಿಮೆಂಟ್ನಾರಾಯಣಸ್ವಾಮಿ, ಕೊರ್ನಹಳ್ಳಿ ಆಂಜಿ, ಗೌನಿಪಲ್ಲಿ ರಾಮಮೋಹನ್, ಭೂಚಕ್ರರೆಡ್ಡಿ, ಮಹೇಶ್, ಅಶೋಕ್, ಸುಧಾಕರ, ಗುರುವಲ್ಲೋಲ್ಲಗಡ್ಡ ರಾಜ, ಶಿವಾರೆಡ್ಡಿ, ರಘುನಾಥಪುರ ಸುಬ್ರಮಣಿ, ಕೊತ್ತೂರುಶಿವ, ಅಮ್ಜದ್ ಇದ್ದರು.