ಕೋಲಾರ : ಕೋಲಾರ ಜಿಲ್ಲೆಯ ಅದೃಷ್ಟವಾಗಿರುವ 75 ಕೆರೆಗಳ ಅಭಿವೃದ್ಧಿಗೆ ಹಣ ನೀಡಿದ್ದೇನೆ , ಪ್ರತಿ ಬಜೆಟ್‌ನಲ್ಲೂ ಈ ಜೀವ ಜಲ ಉಳಿಸುವ ಕಾರ್ಯಕ್ಕೆ ಅನುದಾನ ನಿಗಧಿ ಮಾಡುತ್ತೇನೆ , ‘ ನಮ್ಮ ಊರು ನಮ್ಮ ಕೆರೆ ‘ ಎಂಬ ಸಂಕಲ್ಪ ಮಾಡಿ ಅಭಿವೃದ್ಧಿಗೊಳಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಾಕೀತು ಮಾಡಿದರು . ಕೆಜಿಎಫ್ ತಾಲ್ಲೂಕಿನ ಪೆದ್ದಪಲ್ಲಿ ಗ್ರಾಮದಲ್ಲಿ ಘಟ್ಟಕಾಮಧೇನಹಳ್ಳಿ ಕೆರೆ ವೀಕ್ಷಣೆ ನಂತರ ಮಹಿಳೆಯರನ್ನುದ್ದೇಶಿಸಿ ತೆಲುಗಿನಲ್ಲಿ ಮಾತನಾಡಿದ ಅವರು , ದೇಶದಲ್ಲೇ ಅತಿ ಹೆಚ್ಚು ಕೆರೆಗಳಿರುವುದು ಈ ಜಿಲ್ಲೆಯ ಅದೃಷ್ಟ ಆದರೆ ಕೆರೆಗಳ ಅಭಿವೃದ್ಧಿಯಲ್ಲಿ ಹಿನ್ನಡೆ ಕುರಿತು ಬೇಸರವಿದೆ ಎಂದರು . ಈ ಕೆರೆಗಳನ್ನು ನಮ್ಮ ಪೂರ್ವಜರು ಅತ್ಯಂತ ದೂರದೃಷ್ಟಿಯಿಂದ ಕಟ್ಟಿದ್ದಾರೆ , ಒಂದು ಕರೆ ತುಂಬಿ ಮತ್ತೊಂದು ಕೆರೆಗೆ ನೀರು ಹರಿದು ಹೋಗುತ್ತದೆ , ಆ ನೀರು ಹರಿಯುವ ಮಾರ್ಗಕ್ಕೆ ರಸ್ತೆ ಮಾಡಬೇಕಾಗಿಲ್ಲ . ಪ್ರಕೃತಿ ಸಹಜವಾಗಿಯೇ ಇರುವ ರಾಜಕಾಲುವೆ ಸ್ವಚ್ಚವಾಗಿದ್ದರೆ ಸಾಕು ಎಂದರು . ರಾಜಕಾಲುವೆಗೆ ಪ್ಲಾಸ್ಟಿಕ್ ತ್ಯಾಜ್ಯ ತುಂಬಿದರೆ ನೀರು ಮನೆಗಳು , ಬೆಳೆಗಳಿಗೆ ನುಗ್ಗಿ ನಮ್ಮ ರೈತರಿಗೆ ಹಾನಿಯಾಗುತ್ತದೆ ಆದ್ದರಿಂದ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಇಚ್ಛೆಯಂತೆ ಕೆರೆಗಳನ್ನು ಉಳಿಸಿಬೇಕು ಆಗ ಮಾತ್ರ ಅಂತರ್ಜ ಲ ವೃದ್ಧಿಯಾಗಿ ನಿಮಗೆ ಕುಡಿಯಲು , ಕೃಷಿಗೆ ಶುದ್ದ ಜಲ ಸಿಗುತ್ತದೆ ಎಂದರು . ನಾನು ಈಗಾಗಲೇ ಕೋಲಾರ ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ ಹಣ ನೀಡಿದ್ದೇನೆ , ನಿಮ್ಮ ಸಂಸದರನ್ನು ಬಿಡಬೇಡಿ , ಮತ್ತಷ್ಟು ಹಣ ತನ್ನಿ ಎಂದು ಒತ್ತಡ ಹಾಕಿ , ಅವರು ನಮ್ಮ ಬಿಜೆಪಿಯವರೇ ಎಂದರು . ಕೆರೆಗಳು ತುಂಬಿದರೆ ಕೊಳವೆ ಬಾವಿ ಆಳಕ್ಕೆ ಹಾಕುವ ಅಗತ್ಯವಿಲ್ಲ , ನರೇಗಾದಡಿ ನಿಮಗೆ 309 ರೂ ಕೂಲಿ ನೀಡಲಾಗುತ್ತದೆ , ಜನರ ಸಹ ಭಾಗಿತ್ವದಲ್ಲೇ ಕೆರೆಗಳ ಅಭಿವೃದ್ಧಿ ಮಾಡ ಬೇಕು , ಮಹಿಳೆಯರು ಗುಂಪುಕಟ್ಟಿಕೊಂಡು ಕೆರೆ ಅಭಿವೃದ್ಧಿಗೆ ನೋಂದಣಿ ಮಾಡಿಸಿ ಡಿಸಿಯ ವರನ್ನು ಸಂಪರ್ಕಿಸಿ ಎಂದರು . ಕೆರೆಗಳು ಕೋಲಾರ ಜಿಲ್ಲೆಗೆ ಉತ್ತಮ ಕೊಡುಗೆ ಇದ್ದಂತೆ , ಕೆರೆಗಳು ಪ್ರಕೃತಿ ಸಹಜವಾಗಿ ಸಿಕ್ಕ ವರ ವಾಗಿದೆ , ಆ ಕೆರೆಗಳಿಗೆ ನೀರು ಹರಿಯುವ ಮಾರ್ಗ ಒತ್ತುವರಿ ಮಾಡಿಕೊಂಡು ದುರ್ಬಳಕೆ ಮಾಡಿಕೊಂಡರೆ ಮನೆಗಳು , ಬೆಳೆಗಳಿಗೆ ನೀರು ನುಗ್ಗಿ ಹಾನಿಯಾಗುತ್ತದೆ ಇದನ್ನು ಅರಿತು ನಿಮ್ಮ ಊರಿನ ಕೆರೆಯನ್ನು ನೀವೇ ಅಭಿ ವೃದ್ಧಿ ಮಾಡಿಕೊಳ್ಳಬೇಕು , ಸರ್ಕಾರ ಅನುದಾನ ನೀಡುತ್ತದೆ ಎಂದು ತಿಳಿಸಿದರು . ನರೇಗಾ ಕೂಲಿ ದಿನಗಳ ಹೆಚ್ಚಳ ಮಾಡಿದರೆ ಕೃಷಿಕೆಲಸಕ್ಕೆ ಜನ ಸಿಗೊಲ್ಲ . ಆಹಾರಧಾನ್ಯ ಬೆಳೆಯುವುದು ಅಷ್ಟೇ ಮುಖ್ಯವಲ್ಲವೇ ಎಂದು ಪ್ರಶ್ನಿಸಿ , ಮಹಿಳೆಯರೊಂದಿಗೆ ತೆಲುಗಿನಲ್ಲಿ , ಕೆಲವು ಮಾತುಗಳನ್ನು ತಮಿಳಿನಲ್ಲೂ ಮಾತನಾಡಿ ಗಮನ ಸೆಳೆದರು . ಗ್ರಾ.ಪಂ ಅಧ್ಯಕ್ಷರನ್ನು ಕರೆದು ನೀವು ಅಧಿಕಾರಿಗಳನ್ನು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಿ , ನೀವು ಸುಮ್ಮನಿದ್ದರೆ ಕಾಮಗಾರಿ ಚೆನ್ನಾಗಿ ನಡೆ ಯೋದಿಲ್ಲ . ನೀವು ಜನರಿಂದ ಆಯ್ಕೆ ಯಾಗಿದ್ದೀರಿ , ಪ್ರಶ್ನಿಸಿ ಎಂದು ಸಲಹೆ ನೀಡಿದರು . ಈ ಸಂದರ್ಭದಲ್ಲಿ ಸಂಸದ ಎಸ್.ಮುನಿ ಸ್ವಾಮಿ , ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ , ಮಾಜಿ ಸಚಿವ ವರ್ತೂರು ಪ್ರಕಾಶ್ , ಜಿಲ್ಲಾಧಿಕಾರಿ ವೆಂಕಟ್‌ರಾಜಾ , ಜಿಪಂ ಸಿಇಒ ಯುಕೇಶ್ ಕುಮಾರ್.ಮಾಜಿ ಶಾಸಕರಾದ ಎಂ . ನಾರಾ ಯಣ ಸ್ವಾಮಿ , ಬಿ.ಪಿ.ವೆಂಕಟ ಮುನಿ ಯಪ್ಪ.ವೈ.ಸಂಪಂಗಿ , ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಮತ್ತಿತರರಿದ್ದರು .