ಶ್ರೀನಿವಾಸಪುರ : ನಾನು ಪಟ್ಟಣ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಗಳನ್ನು ತರುತ್ತಿದ್ದೇನೆ ಆದರೆ ನೀವು ಧರಣಿ ನಡೆಸಿ ಕಾಲಹರಣ ಮಾಡುತ್ತಿದ್ದೀರಿ ಎಂದು ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್‌ರವರನ್ನು ಶಾಸಕ ಕೆ.ಆರ್ .ರಮೇಶ್‌ಕುಮಾರ್ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಪುರಸಭೆಯ ಮುಂದೆ ಕಳೆದ ಮೂರು ದಿನಗಳಿಂದ ಲಲಿತಾ ಶ್ರೀನಿವಾಸ್ ನೇತೃತ್ವದಲ್ಲಿ ಆದಿ ಜಾಂಬವ ಚಾರಿಟಬಲ್ ಟ್ರಸ್ಟ್ , ಆದಿ ಜಾಂಬವ ಸೇವಾ ಸಮಿತಿ , ಪ್ರಗತಿ ಪರ ದಲಿತ ಪರ ಸಂಘಟನೆಗಳ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಪುರಸಭೆ ಮುಖ್ಯಾಧಿಕಾರಿ ಮತ್ತು ಅಧಿಕಾರಿಗಳ ನಿರ್ಲಕ್ಷತೆ ವಿರೋಧಿಸಿ ನಡೆಸುತ್ತಿರುವ ಧರಣಿ ನಿರಂತರೊಂದಿಗೆ ಮಾತನಾಡಿದರು
ಪುರಸಭೆ ಅಧ್ಯಕ್ಷೆ ಲಲಿತ ಶ್ರೀನಿವಾಸ್‌ರವರು ಶಾಸಕರೊಂದಿಗೆ ಮಾತನಾಡಿ ಪುರಸಭೆ ಮುಖ್ಯಾಧಿಕಾರಿ ಪಟ್ಟಣದಲ್ಲಿ ನೀರು, ಸ್ವಚ್ಚತೆ ಇತರೆ ಮೂಲಭೂತ ಸೌಲಭ್ಯಗಳ ಬಗ್ಗೆ ಗಮನಹರಿಸುತ್ತಿಲ್ಲ , ಹಾಗೂ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಮುಖ್ಯಾಧಿಕಾರಿ ವಿರದ್ಧ ಆರೋಪ ಮಾಡಿದ ಹಿನ್ನೆಲೆಯಲ್ಲಿ . ಕಳೆದ ೨ ವರ್ಷಗಳಿಂದಲೂ ನಮ್ಮ ಮನವಿಯ ಬಗ್ಗೆ ಸ್ಪಂದನೆ ನೀಡುತ್ತಿಲ್ಲ ಅಮಾನತ್ತು ಆಗಲಿ, ವರ್ಗಾವಣೆ ಆಗಲಿ ಮಾಡಿಸಿ ಎಂದು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಶಾಸಕರು ಮಾತನಾಡಿ ’ಮುಖ್ಯ ಅಧಿಕಾರಿ ಮಾಡಿರುವ ಕೃತ್ಯಗಳ ಬಗ್ಗೆ ಸಾಕ್ಷಿ ಸಮೇತ ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಕಂಪ್ಲೆಟ್ ಕೊಡಿ, ಆ ಕಂಪ್ಲೆಟ್‌ನ್ನು ಪರಿಶೀಲಿಸಿ , ಮುಖ್ಯ ಅಧಿಕಾರಿಗೆ ನೋಟಿಸ್ ಕೊಟ್ಟು ನಂತರ ಅವರ ವಿರುದ್ಧ ಕ್ರಮಕೈಗೊಳ್ಳುತ್ತಾರೆ . ಮುಖ್ಯ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಪುರಸಭೆ ಮುಖ್ಯ ಅಧಿಕಾರಿಗಳ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ನಂತರ ಕ್ರಮಕೈಗೊಳ್ಳುತ್ತಾರೆ’ ಎಂದು ತಿಳಿಸಿದರು
ನಾನು ಹತ್ತಾರುಬಾರಿ ನಿಮ್ಮ ಕಚೇರಿಗೆ ಬಂದಿದ್ದೆ ಒಂದು ದಿನವು ಮುಖ್ಯಧಿಕಾರಿ ಬಗ್ಗೆ ನನಗೆ ಯಾಕೆ ಮಾಹಿತಿ ನೀಡಲಿಲ್ಲ ಎಂದು ಪ್ರಶ್ನಿಸಿ, ಶಾಸಕರು ಕೋಪದಿಂದ ಹೋರಡುತ್ತಿದ್ದರೆ ಕೆಲ ಮುಖಂಡರು ಸಮಾಧಾನಪಡಿಸಿ ಇದನ್ನು ಇತ್ಯರ್ಥ ಮಾಡುವಂತೆ ಮನವಿ ಮಾಡಿದರು.
ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ಮಾತನಾಡಿ ನಾನು ಕಚೇರಿ ಒಳಗೆ ಕುಳಿತುಕೊಂಡರೂ ಏನೋ ಪ್ರಯೋಜನವಿಲ್ಲ. ಆದ್ದರಿಂದ ನಾನು ಕಚೇರಿ ಮುಂಭಾಗದಲ್ಲಿಯೇ ಕುಳಿತುಕೊಳ್ಳುತ್ತೇನೆ ಎಂದು ಉದ್ರೇಕ ದಿಂದ ನುಡಿದ ಪ್ರಶ್ನೆಗೆ ಹಾಗು ನಮ್ಮ ಬಡವಾಣೆಯಲ್ಲಿ ನೀರು, ಸ್ವಚ್ಚತೆ ಮಾರೀಚಿಕೆಯಾಗಿದೆ ಎಂಬ ಪ್ರಶ್ನೆಗೆ ನಾನು ಬಂದು ಸ್ವಚ್ಚತೆ, ನೀರು ಸರಬಾರಜು ಮಾಡಲೇ ಎಂದು ಪ್ರಶ್ನಿಸಿದರು.
ನಾನು ಮುಖ್ಯಾಧಿಕಾರಿಗಳನ್ನು ಇಲ್ಲಿಗೆ ಹಾಕಸಿಕೊಂಡು ಬಂದವನಲ್ಲ, ನನಗೂ ಅವರಿಗೂ ಯಾವುದೇ ಸಂಬಧವಿಲ್ಲ. ಅಧಿಕಾರಿಯ ವಿರುದ್ಧ ತಕ್ಷಣ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಅವರ ಮಾಡಿರುವ ಅಕ್ರಮಗಳ ಬಗ್ಗೆ ತನಿಖೆ ನಂತರ ಕ್ರಮಕೈಗೊಳ್ಳಲು ಸಾಧ್ಯ ಎಂದರು. ನೆರಿದಿದ್ದ ಕೆಲವರನ್ನ ತರಾಟೆಗೆ ತೆಗೆದುಕೊಂಡ ಪ್ರಸಂಗವು ನಡೆಯಿತು. ನಮ್ಮ ಸರ್ಕಾರವಿದ್ದರೆ ಸರ್ಕಾರಕ್ಕೆ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಲು ಮನವಿ ಮಾಡುತ್ತಿದ್ದೆ ಎಂದರು.
ಅದ್ಯಕ್ಷೆ ಲಲಿತಾ ಶ್ರೀನಿವಾಸ್‌ರವರನ್ನ ಧರಣಿ ಹಿಂಪಡೆಯುವಂತೆ ಮನವೂಲಿಸಿ ಉಪವಿಭಾಗಾಧಿಕಾರಿ ವೆಂಕಟಲಕ್ಷಿಯವರಿಗೆ ಮನವಿ ಪತ್ರವನ್ನು ನೀಡುವಂತೆ ಶಾಸಕರು ಸೂಚನೆ ನೀಡಿದರು.
ತಹಶೀಲ್ದಾರ್ ಶರೀನ್‌ತಾಜ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಮುಖಂಡರಾದ ಸಂಜಯ್‌ರೆಡ್ಡಿ, ನಾರಾಯಣಸ್ವಾಮಿ, ಪೊಲೀಸ್ ನಿರೀಕ್ಷಕ ಜೆ.ಸಿ.ನಾರಾಯಣಸ್ವಾಮಿ ಹಾಗು ಪುರಸಭೆ ಸದಸ್ಯರಾದ ಅನೀಸ್ ಅಹಮ್ಮದ್, ಸರ್ಧಾರ್, ಎನ್‌ಎನ್‌ಆರ್, ನಾಗರಾಜ್, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮಂಜುನಾಥರೆಡ್ಡಿ, ಆರ್‌ಐ ಮುನಿರೆಡ್ಡಿ ಇದ್ದರು.