

ಹಾಸನ, ನ.9: ಹಾಸನ ಬಿಇಒ ಕಚೇರಿ ಅಧೀಕ್ಷಕರೊಬ್ಬರು ‘ನಾನು ಭ್ರಷ್ಟನಲ್ಲ, ಲಂಚ ಸ್ವೀಕರಿಸುವುದಿಲ್ಲ’ ಎಂದು ತನ್ನ ಟೇಬಲ್ ಮೇಲೆ ಬೋರ್ಡ್ ಹಾಕಿರುವ ದೃಶ್ಯದ ಫೋಟೋ ಎಲ್ಲೆಡೆ ವೈರಲ್ ಆಗಿದೆ.
ಹಾಸನ ಬಿಇಒ ಕಚೇರಿಯ ಅಧೀಕ್ಷರಾಗಿರುವ ಡಿ.ಎಸ್.ಲೋಕೇಶ್ ತಮ್ಮ ಟೇಬಲ್ ಮೇಲೆ ‘ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ’ ಎನ್ನುವ ಬೋರ್ಡ್ ಹಾಕಿರುವುದು ಗಮನ ಸೆಳೆದಿದೆ.
ಲೋಕೇಶ್ ಅವರು ತಮ್ಮ ಪ್ರಾಮಾಣಿಕತೆ ಹಾಗೂ ದಕ್ಷತೆಯ ಕಾರಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಸನ ಸಂಸದರಾಗಿದ್ದ ಅವಧಿಯಲ್ಲಿ ಅವರ ಕಚೇರಿಯ ಆಪ್ತ ಕಾರ್ಯದರ್ಶಿಯಾಗಿದ್ದರು. ತಮ್ಮ ವಿರುದ್ಧ ಆರೋಪಗಳು ಕೇಳಿ ಬರುವ ಅವಕಾಶ ನೀಡದಂತೆ ಕಾರ್ಯನಿರ್ವಹಿಸುತ್ತ ಜನಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.
ಇತ್ತೀಚಿಗೆ ಬಿಇಒ ಕಚೇರಿ ಅಧೀಕ್ಷಕರಾಗಿ ಲೋಕೇಶ್ ಅವರು ಬಡ್ತಿ ಹೊಂದಿದ್ದಾರೆ. “ನಾನು ಪ್ರಾಮಾಣಿಕ” ಎಂದು ಎದೆ ತಟ್ಟಿ ಹೇಳಿಕೊಳ್ಳುವ ಧೈರ್ಯ ಮಾಡಿದ್ದಾರೆ.