ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ : ಬಡ ಮಕ್ಕಳು , ಕಾಲೇಜು ವಿದ್ಯಾಥಿಗಳಿಗೆ ಉಚಿತ ವಿದ್ಯಾಭ್ಯಾಸ ಹಾಗು ವೃದ್ಧರಿಗೆ ಮಾಶಾಸನವನ್ನು ನಮ್ಮ ತಂದೆಯ ಜ್ಞಾಪಕಾರ್ತ ಮಹಮದ್ ಬಾಷಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಮಾಜಮುಖಿ ಕಾರ್ಯಕ್ರಮಗಳು ಮುಂದುವರಿಸುತ್ತಿದ್ದೇನೆ ಎಂದು ತಲುಗು ಮೇರು ಹಾಸ್ಯ ನಟ ಆಲಿ ರವರು ತಿಳಿಸಿದರು . ತಾಲ್ಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ಉಸಿರೇ ಉಸಿರೇ ಚಿತ್ರದ ಚಿತ್ರೀಕರಣ ವೇಳೆಯ ವಿರಾಮದ ಸಮಯದಲ್ಲಿ ವೈಕುಂಟ ಏಕಾದಶಿ ಪ್ರಯುಕ್ತ ಶ್ರೀ ಬೈರವೇಶ್ವರ ವಿದ್ಯಾ ಸಂಸ್ಥೆಯಲ್ಲಿನ ಶಾಲಾ ಮಕ್ಕಳಿಗೆ ಸಿಹಿ ಲಾಡುಗಳನ್ನು ಹಂಚಿ ಸಂಭ್ರಮಿಸಿ ಮಾತನಾಡಿದ ತೆಲುಗು ಮೇರು ಹಾಸ್ಯ ನಟ ಆಲಿ ರವರು ನನಗೆ ಮಕ್ಕಳು ಎಂದರೆ ತುಂಬಾ ಇಷ್ಟ ಈ ಶಾಲೆಯಲ್ಲಿ ಹಬ್ಬದ ಪ್ರಯುಕ್ತ ಮಕ್ಕಳಿಗೆ ಸಿಹಿ ಹಂಚಿರುವುದು ನನಗೆ ತುಂಬಾ ಸಂತೋಷವಾಗುತ್ತಿದೆ . ಇದೇ ರೀತಿ ನಮ್ಮ ಆಂದ್ರ ಪ್ರದೇಶದಲ್ಲಿ ನಮ್ಮ ತಂದೆಯ ಹೆಸರಿನಲ್ಲಿ ಮಹಮದ್ ಪಾಷ ಚಾರಿಟೇಬಲ್ ಟ್ರಸ್ಟ್ ಪಾರಂಬ ಮಾಡಿ ೧೩ ವರ್ಷಗಳಾಗಿದೆ ಅಂದಿನಿಂದ ಇದುವರೆಗೂ ನಾನು ಪ್ರತಿ ತಿಂಗಳೂ ಮಕ್ಕಳಿಗೆ , ಕಾಲೇಜು ವಿದ್ಯಾರ್ಥಿಗಳಿಗೆ ಪೀಜುಗಳನ್ನು ನಮ್ಮ ಟ್ರಸ್ಟ್ ವತಿಯಿಂದ ನೀಡುತ್ತಿದ್ದೇವೆ ಇದೇ ರೀತಿ ವೃದ್ಧರಿಗೂ ಸಹಾ ಪ್ರತೀ ತಿಂಗಳು ೭೫೦ ರೂ ಮಾಶಾಸನ ನೀಡುತ್ತಿದ್ದೇವೆ , ಈ ಶಾಲೆಯ ಕಾರ್ಯದರ್ಶಿ ಆಡಳಿತ ಕೇಳಿ ಅವರನ್ನು ನೋಡಿ ಅವರ ನ್ನು ಆದರ್ಶವಾಗಿ ತೆಗೆದುಕೊಳ್ಳ ಬೇಕೆಂದು ನಾನು ಇಲ್ಲಿಗೆ ಬಂದಿದ್ದೇನೆ ಎಂದರು .
ನಾನು ನನ್ನ ಜೀವನದಲ್ಲಿ ೯೫೦ ತೆಲುಗು ಚಿತ್ರಗಳಲ್ಲಿ ನಟಿಸಿದ್ದೇನೆ ಅನ್ಯ ಭಾಷೆಗಳಲ್ಲಿ ಸುಮಾರು ೨೫೦ ಚಿತ್ರಗಳಲ್ಲಿ ನಟಿಸಿದ್ದೇನೆ ಈಗ ಕನ್ನಡ ಭಾಷೆಯಲ್ಲಿ ಉಸಿರೇ ಉಸಿರೇ , ಚಿತ್ರದ ಚಿತ್ರೀಕರಣ ಪಕ್ಕದ ನಂಬಿಹಳ್ಳಿ ಗ್ರಾಮದಲ್ಲಿ ಮಾಡುತ್ತಿದ್ದು ಈ ಶಾಲೆಯ ವಿಚಾರ ತಿಳಿದುಕೊಂಡು ಇಲ್ಲಿಗೆ ಬಂದು ಈ ಶಾಲೆಯ ಕಾರ್ಯದರ್ಶಿ ಶ್ರೀರಾಮಿರೆಡ್ಡಿಯವರ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದರು . ನೆಲೆಸ ಅವರು ನಟಿಸಿರುವ ಕನ್ನಡ ಚಿತ್ರಗಳನ್ನು ಹಾಗು ಡಾ || ರಾಜ್ ಕುಮಾರ್ ರವರ ನೆನಪುಗಳನ್ನು ನೆನೆದು ಪುನಿತ್ ರಾಜ್ ಕುಮಾರ್ ರವರ ಸಾವನ್ನು ಕುರಿತು ಅವರು ಇನ್ನೂ ಬಹಳಷ್ಟು ಸೇವೆ ಮಾಡಬೇಕಿತ್ತು ಆದರೆ ದೇವರು ಅವರನ್ನು ಬೇಗ ಕರೆದುಕೊಂಡು ಹೋಗಿದ್ದಾರೆ ಎಂದು ಭಾವುಕರಾದರು .
ಈ ಸಮಯದಲ್ಲಿ ಚಿತ್ರ ನಿರ್ಮಾಪಕ ಪದೀಪ್ ಯಾದವ್ , ಜನಪರ ವೇದಿಕೆ ಅಧ್ಯಕ್ಷ ಸುಬ್ರಮಣಿ , ಗುತ್ತಿಗೆ ದಾರ ಶ್ರೀನಿವಾಸರೆಡ್ಡಿ , ಸಂತೋಷ್ , ಪಿಗ್ಗೂಡಿ ಇಂಜನೀಯರುಗಳಾದ ಎಲ್.ಎಂ , ನಾಗರಾಜ್ , ಟಿ ನಾಗರಾಜ್ , ವ್ಯವಸ್ಥಾಪಕ ಮುನಿರಾಜು , ಅಡವಿ ಚಂಬಕೂರು ಗೋಪಾಲ್ , ಶಾಲಾ ಆಡಳಿತ ಸಿಬ್ಬಂದಿ ಹಾಜರಿದ್ದರು .