JANANUDI.COM NETWORK
ಹೈದರಾಬಾದ್:,ಮೇ. 4: ಮನುಷ್ಯರಿಗೇ ಕೊರೊನಾ ಬಂದಿದ್ದರಿಂದ ಜಗತ್ತಿನಲ್ಲಿ ಬಹಳ ಆತಂಕಕಾರಿ ವಿಷವಾಗಿದ್ದು, ಇದೀಗ ಮತ್ತೊಂದು ಆತಂಕಕಾರಿ ಬೆಳವಣಿಗೆಯಲ್ಲಿ, ಭಾರತದಲ್ಲಿ ಕಂಡು ಬಂದಿದೆ.
ಇದೇ ಮೊದಲ ಬಾರಿ ಎಂಬತ್ತೆ ಭಾರತದ ಹೈದರಾಬಾದ್ ಮೃಗಾಲಯದ ಎಂಟು ಏಷ್ಯಾಟಿಕ್ ಸಿಂಹಗಳ ಪರೀಕ್ಷೆ ನಡೆದು ಇದೀಗ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು,ಪ್ರಾಣಿಗಳಿಗೂ ಕೊರೊನಾ ಹಬ್ಬಿ ಕೊರೊನಾ ಸಮಸ್ಯೆ ಇನ್ನಷ್ಟು ಜಟೀಲವಾಗುವ ಸಂಭವ ಉಂಟಾಗಿದೆ.
ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯೂಲರ್ ಬಯಾಲಜಿ(ಸಿಸಿಎಂಬಿ) ನಡೆಸಿದ ಪರೀಕ್ಷೆಯಲ್ಲಿ ಎಂಟು ಸಿಂಹಗಳಲ್ಲಿ, ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಸಿಂಹಳಿಗೆ ಹಳೆ ಮಾದರಿಯ ಕೋವಿಡ್ -19 ಸೋಂಕು ತಗುಲಿದ ವಿಷಯ ಧ್ರಡ ಪಟ್ಟಿದೆ. ಭಾರತದಲ್ಲಿ ಸಿಂಹಗಳಿಗೆ ಕೊರೋನಾ ಪಾಸಿಟಿವ್ ಬಂದ ಮೊದಲ ಪ್ರಕರಣ ಇದಾಗಿದೆ.
ಎಂಟು ಸಿಂಹಗಳಲ್ಲಿ ಮನುಷ್ಯರಂತೆ ಒಣ ಕೆಮ್ಮು, ಮೂಗು ಸೋರುವಿಕೆ ಮತ್ತು ಹಸಿವಿನ ಕೊರತೆ ಸೇರಿದಂತೆ ಸೌಮ್ಯ ರೋಗಲಕ್ಷಣಗಳನ್ನು ಮೃಗಾಲಯದ ಪಶುವೈದ್ಯರು ಗಮನಿಸಿದ ನಂತರ ಸಿಂಹಗಳ ಒರೊಫಾರ್ಂಜಿಯಲ್ ಸ್ವ್ಯಾಬ್ ಮಾದರಿ ಸಂಗ್ರಹಿಸಿ ಸಿಸಿಎಂಬಿಗೆ ಕಳುಹಿಸಲಾಗಿತ್ತು.
ಮನುಷ್ಯರಿಂದ ಬಂದಿದೆಯೆ ಎಂದು ಕಂಡುಹಿಡಿಯಲು ನಾವು ಜೀನೋಮ್ ಸೀಕ್ವೆನ್ಸಿಂಗ್ ಮಾಡಿದ್ದೇವೆ. ವೈರಸ್ ಮೊದಲು ಪ್ರಾಣಿಗಳ ಪಾಲನೆದಾರರಿಗೆ ತಗುಲಿರಬಹುದು ಮತ್ತು ನಂತರ ಅದು ಸಿಂಹಗಳಿಗೆ ಹರಡಬಹುದು ಎಂಬಂತೆ ವರದಿ ಇದೆ.
ಸಿಸಿಎಂಬಿಯ ನಿರ್ದೇಶಕ ರಾಕೇಶ್ ಮಿಶ್ರಾ ಪ್ರಾಣಿಗಳನ್ನು ಹೇಗೆ ನೋಡಿಕೊಳ್ಳಬೇಕು ಮತ್ತು ಇತರ ಪ್ರಾಣಿಗಳು ವೈರಸ್ ತಗುಲದಂತೆ ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಮೃಗಾಲಯದ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ,ಎಂದು ತಿಳಿದು ಬಂದಿದೆ.