ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕು

ವರದಿ ; ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕು . ಇದರಿಂದ ಬಡವರಿಗೆ , ಹಿಂದುಳಿದವರಿಗೆ ಸೇವೆ ನೀಡಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಡಾ | ಆರ್.ಸೆಲ್ವಮಣಿ ಅವರು ತಿಳಿಸಿದರು . ಇಂದು ತಮ್ಮ ಕಛೇರಿ ನ್ಯಾಯಾಂಗ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ , ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ ಯೋಜನೆಯ ಜಿಲ್ಲಾ ಮಟ್ಟದ ಕುಂದು ಕೊರತೆಯ ಪರಿಹಾರ ಉಚಿತ ಎಂದು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಸಮಿತಿ ಸಭೆಗೆ ಎರಡು ಪ್ರಕರಣಗಳು ಇತ್ಯರ್ಥಕ್ಕೆ ಬಂದಿದ್ದವು . ಮೊದಲನೇಯದು ಕರೋನಾ ಚಿಕಿತ್ಸೆಗಾಗಿ ಕೆ.ಹೆಚ್.ಸಜ್ಜಾದ್ ದೌಲಾ ಎಂಬುವವರು ಆಗಸ್ಟ್ 07 ರಂದು ಜಾಲಪ್ಪ ಆಸ್ಪತ್ರೆಗೆ ದಾಖಲಾಗಿ 22 ದಿನಗಳ ಕಾಲ ಚಿಕಿತ್ಸೆ ಪಡೆದರು . ಚಿಕಿತ್ಸೆ ವೆಚ್ಚ 36 ಸಾವಿರ ರೂ.ಗಳು ಪಾವತಿಸಿದ್ದು , ನಾನು ಬಡವನಾಗಿದ್ದು ಚಿಕಿತ್ಸೆ ವೆಚ್ಚವನ್ನು ವಾಪಸ್ಸು ಕೊಡಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದರು . ಇದಕ್ಕೆ ಸ್ಪಂಧಿಸಿದ ಜಿಲ್ಲಾಧಿಕಾರಿಗಳು ಆಗಸ್ಟ್ 21 ರ ನಂತರ ಸರ್ಕಾರವು ಕರೋನಾ ಚಿಕಿತ್ಸೆ ಪಡೆಯುವರಿಗೆ ಆದೇಶಿಸಿತು . ಆದರೆ ತಾವು ಅದಕ್ಕಿಂತ ಮುಚ್ಚೆಯೇ ಚಿಕಿತ್ಸೆ ಪಡೆದಿರುವುದರಿಂದ ಹಣವನ್ನು ಭರಿಸಲು ಅವಕಾಶವಿಲ್ಲ . ಆದರೂ ಮಾನವೀಯತೆ ದೃಷ್ಟಿಯಿಂದ ಆಸ್ಪತ್ರೆಯವರು ಚಿಕಿತ್ಸಾ ವೆಚ್ಚದ ಶೇ . 50 ರಷ್ಟುನ್ನು ವಾಪಸ್ಸು ನೀಡುವಂತೆ ಆದೇಶಿಸಿದರು . ಇದಕ್ಕೆ ಜಾಲಪ್ಪ ಆಸ್ಪತ್ರೆಯ ಅಧಿಕಾರಿಗಳು ಸಮ್ಮತಿ ನೀಡಿದರು . ಎರಡನೇ ಪ್ರಕರಣದಲ್ಲಿ ಪೂರ್ಣಿಮಾ ಎಂಬುವರು ಆಗಸ್ಟ್ 20 ರಂದು ನಾರಾಯಣ ಹೃದಯಾಲಯಕ್ಕೆ ಚಿಕಿತ್ಸೆಗೆ ದಾಖಲಾಗುತ್ತಾರೆ . ಆದರೆ ಮೊದಲ ದಿನ ಎಪಿಎಲ್ ಕಾರ್ಡ್ , ಎಬಿಆರ್‌ಕೆ ಕಾರ್ಡ್ , ಆಧಾರ್ ಕಾರ್ಡ್ ಹಾಗೂ ಇತರೆ ದಾಖಲೆಗಳನ್ನು ಸಲ್ಲಿಸುವುದಿಲ್ಲ . ಆದರೆ ಎರಡನೇ ದಿನ ಈ ದಾಖಲೆಗಳನ್ನು ಸಲ್ಲಿಸಲು ಹೋದಾಗ ಆಸ್ಪತ್ರೆಯವರು ಅನುಮತಿಸಿರುವುದಿಲ್ಲ . ಇದರಿಂದ ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ ಯೋಜನೆಯಡಿ ಶೇ . 30 ರಷ್ಟು ಚಿಕಿತ್ಸಾ ವೆಚ್ಚವನ್ನು ವಾಪಸ್ಸು ಪಡೆಯಲು ಅವಕಾಶವಾಗಿರುವುದಿಲ್ಲ ಚಿಕಿತ್ಸಾ ವೆಚ್ಚ 1.20 ರೂ.ಗಳನ್ನು ಪಾವತಿಸಲಾಗಿದೆ ಎಂದು ದೂರು ಸಲ್ಲಿಸಿರುತ್ತಾರೆ . ಈ ಪ್ರಕರಣವನ್ನು ಆಲಿಸಿದ ಜಿಲ್ಲಾಧಿಕಾರಿಗಳು ಚಿಕಿತ್ಸಾ ವೆಚ್ಚದಲ್ಲಿ ಎಪಿಎಲ್ ಕಾರ್ಡ್‌ದಾರರಿಗೆ ಶೇ . 30 ರಷ್ಟು ವೆಚ್ಚವನ್ನು ಸರ್ಕಾರ ಭರಿಸುತ್ತದೆ . ಚಿಕಿತ್ಸಾ ವೆಚ್ಚ 1.30 ಲಕ್ಷಗಳಾಗಿದ್ದು , ಇದರಲ್ಲಿ ಆಸ್ಪತ್ರೆಯವರು ಈಗಾಗಲೇ 10 ಸಾವಿರ ರಿಯಾಯಿತಿ ನೀಡಿರುತ್ತಾರೆ. ಆದ್ದರಿಂದ ಚಿಕಿತ್ಸಾ ವೆಚ್ಚದ ಶೇ 30 ರಷ್ಟು ಎಂದರೆ 39 ಸಾವಿರ ರೂ.ಗಳನ್ನು ಆಸ್ಪತ್ರೆಯವರು ವಾಪಸ್ಸು ನೀಡಬೇಕು . ಆದರೆ ಈಗಾಗಲೇ 10 ಸಾವಿರ ರೂ.ಗಳನ್ನು ರಿಯಾಯಾತಿ ನೀಡಿರುವುದರಿಂದ ಉಳಿದ 29 ಸಾವಿರ ರೂ.ಗಳನ್ನು ದೂರುದಾರರಿಗೆ ಆಸ್ಪತ್ರೆಯವರು ವಾಪಸ್ಸು ನೀಡುವಂತೆ ಆದೇಶಿಸಿದರು . ಇದಕ್ಕೆ ಆಸ್ಪತ್ರೆ ಆಡಳಿತ ಮಂಡಳಿಯವರು ಸಮ್ಮತಿಸಿದರು . ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ವಿಜಯ್ ಕುಮಾರ್ , ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಅನುಷ್ಠಾನಾಧಿಕಾರಿಗಳಾದ ಡಾ | ನಾರಾಯಣಸ್ವಾಮಿ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.