ಲಿಬಿಯಾದಲ್ಲಿ ಮಾನವಹಕ್ಕುಗಳ ಉಲ್ಲಂಘನೆ: 12 ಸಾವಿರಕ್ಕೂ ಹೆಚ್ಚು ಮಂದಿಯ ಬಂಧನ; ವಿಶ್ವಸಂಸ್ಥೆ ಕಳವಳ

JANANUDI.COM NETWORK

ವಿಶ್ವಸಂಸ್ಥೆ: “ಲಿಬಿಯಾದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಅಲ್ಲಿನ 27 ಜೈಲುಗಳಲ್ಲಿ 12 ಸಾವಿರಕ್ಕೂ ಹೆಚ್ಚು ಬಂಧಿತರನ್ನು ಕೂಡಿಡಲಾಗಿದೆ. ಸಾವಿರಾರು ಮಂದಿಗೆ ಚಿತ್ರಹಿಂಸೆ ನೀಡಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ” ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮಾಹಿತಿ ತಿಳಿಸಿದ್ದಾರೆ ಎಂದು ಮಾದ್ಯಮದಲ್ಲಿ ಪ್ರಕಟವಾಗಿದೆ.
ಲಿಬಿಯಾ ದೇಶದ ಸಶಸ್ತ್ರ ಪಡೆಗಳು ನಿರಾಶ್ರಿತರು, ವಲಸಿಗರ ಮೇಲೆ ಸಾಕಷ್ಟು ನಿಬರ್ಂಧಗಳನ್ನು ವಿಧಿಸಿವೆ. ದೌರ್ಜನ್ಯ, ಚಿತ್ರಹಿಂಸೆ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗುತ್ತಿದ್ದು, ಈ ಕುರಿತಂತೆ ಯು.ಎನ್.ಎಸ್.ಎಂ.ಐ,ಎಲ್. ಎಂದು ಕರೆಯಲ್ಪಡುವ ಯು ಎನ್ ಮಿಷನ್ ಅನೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳುವುದನ್ನು ಮುಂದುವರಿಸಿದೆ ಎಂದು ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.
ಬಂಧಿತರು 12 ಸಾವಿರ ಮಂದಿ ಎಂಬುದು ಲಿಬಿಯಾದ ಅಧಿಕಾರಿಗಳು ನೀಡಿದ ಮಾಹಿತಿಯಾಗಿದೆ. ಅದಕ್ಕಿಂತ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಅನುಮಾನ. ಅಲ್ಲಿನ ವಲಸಿಗರು, ನಿರಾಶ್ರಿತರ ಮಾನವ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ವಿಚಾರದಲ್ಲಿ ನಾನು ಕಳವಳಕ್ಕೆ ಒಳಗಾಗಿದ್ದೇನೆ ಎಂದು ಆಂಟೋನಿಯೋ ಗುಟೆರಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ನೀಡಿದ ವರದಿಯಲ್ಲಿ ತಿಳಿಸಿದ್ದಾರೆ.
ಅಲ್ಲದೇ ಲಿಬಿಯಾದ ನಿರಾಶ್ರಿತ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ, ಲೈಂಗಿಕ ಕಿರುಕುಳ ನಡೆಯುತ್ತಿದೆ. ಲಿಬಿಯಾ ಗೃಹ ಸಚಿವಾಲಯದ ಅಡಿ ಬರುವ ಅಕ್ರಮ ವಲಸೆ ನಿಯಂತ್ರಣ ನಿರ್ದೇಶಾನಾಲಯದ ಅಧಿಕಾರಿಗಳೂ ಮಾನವ ಕಳ್ಳಸಾಗಣೆ, ಅತ್ಯಾಚಾರದಂತ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಕೂಡ ಗುಟೆರಸ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಲಿಬಿಯಾ ಮಿಷನ್ ಈ ಕುರಿತು ಅನೇಕ ಪ್ರಕರಣಗಳನ್ನು ದಾಖಲಿಸಿದೆ. ಮಿಟಿಗಾ ಜೈಲು ಮತ್ತು ಇತರ ಬಂಧನ ಕೇಂದ್ರಗಳಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿವೆ. ಲಿಬಿಯಾದ ರಾಜಧಾನಿ ಟ್ರಿಪೆÇೀಲಿಯಲ್ಲಿ ಮತ್ತು ಅಲ್ ಝವಿಯಾಹ್ ನಗರದಲ್ಲಿರುವ ಹಲವಾರು ಬಂಧನ ಕೇಂದ್ರಗಳಲ್ಲಿ ಸುಮಾರು 30 ನೈಜಿರಿಯಾದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಮತ್ತು ಕಳ್ಳಸಾಗಣೆ ಮಾಡಲಾಗಿದೆ ಎಂಬ ವಿಶ್ವಾಸಾರ್ಹ ಮಾಹಿತಿಯನ್ನು ವಿಶ್ವಸಂಸ್ಥೆಯ ಮಿಷನ್ ಪಡೆದುಕೊಂಡಿದೆ” ಎಂದು ಅವರು ತಿಳಿಸಿದ್ದಾರೆ.