ಶ್ರೀನಿವಾಸಪುರ : ಬೇರೆ ದೇಶಗಳಲ್ಲಿ ಇಂತಹ ಕೃತ್ಯಗಳು ನಡೆದರೆ ನಮ್ಮ ದೇಶದ ಬುದ್ದಿಜೀವಗಳು ಮಾತನಾಡುತ್ತಾರೆ. ಆದರೆ ದೇಶದಲ್ಲಿನ ಬುದ್ದಿಜೀವಿಗಳು ಈ ಘಟನೆಯ ಬಗ್ಗೆ ಚಕಾರವೆತ್ತದಿರುವುದು ಖಂಡನೀಯ ಎಂದು ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ವೇಮಣ್ಣ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಇಂದಿರಾಭವನ ವೃತ್ತದಲ್ಲಿ ಸೋಮವಾರ ಹಿಂದು ಸಂಘ ಪರಿವಾರದಿಂದ ಬಾಂಗ್ಲದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಖಂಡಿಸಿ ಮಾನವ ಸರಪಳಿ ನಿರ್ಮಿಸಿ ಮಾತನಾಡಿದರು.
ಈ ವಿಚಾರವಾಗಿ ಹಿಂದು ಯುವ ಪೀಳಿಗೆ ಜಾಗೃತರಾಗಿ ಎಚ್ಚೆತ್ತಿಕೊಳ್ಳಬೇಕಾಗಿದೆ. ಸರ್ಕಾರವು ಈ ವಿಷಯದ ಬಗ್ಗೆ ಗಂಭೀರವಾಗಿ ತಮ್ಮ ನಡೆಯನ್ನ ಮುನ್ನನಡೆಸಬೇಕಾಗಿದೆ . ಇಂತಹ ಕೃತ್ಯಗಳನ್ನು ಮಾಡುವವರ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ. ಆದರೆ ನಮ್ಮ ದೇಶದಲ್ಲಿ ಮಾತ್ರ ಸಖ ಸುಮ್ಮನಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ಹಿಂದುಗಳ ಮೇಲೆ ಇಂತಹ ಕೃತ್ಯಗಳ ನಡೆಯದಂತೆ ಎಚ್ಚರವಹಿಸಬೇಕಾಗಿದೆ ಎಂದರು.
ವಿಶ್ವ ಹಿಂದು ಪರಿಷತ್ ತಾಲೂಕು ಕಾರ್ಯದರ್ಶಿ ದಿವಾಕರ್ ಮಾತನಾಡಿ ನಮ್ಮ ಹಿಂದುಗಳ ಎಚ್ಚೆತ್ತುಕೊಂಡರೆ ಛತ್ರಪತಿ ಶಿವಾಜಿ, ಅಂಬಾಭವಾನಿ, ಆಜಾದ್ ಚಂದ್ರಶೇಖರ್,ಭಗತ್ಸಿಂಗ್ ಅಂತಹ ಮಹಾನುಬಾವರನ್ನ ನಾವು ದಿನಾಲು ಎದ್ದು ಸ್ಮರಿಸಿಕೊಳ್ಳಬೇಕು.
ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ರೋಣೂರು ಚಂದ್ರಶೇಖರ್ ಮಾತನಾಡಿ ದೇಶಕ್ಕಾಗಿ ನಾವೆಲ್ಲರೂ ಒಗ್ಗೂಡಬೇಕು. ಇಂದು ಬಾಂಗ್ಲ ದೇಶ ನಾಳೆ ನಮ್ಮ ದೇಶದಲ್ಲೂ ಈ ಪರಿಸ್ಥಿತಿ ಬರಬಹುದು . ಆದ್ದರಿಂದ ನಾವೆಲ್ಲರೂ ಸಹ ಎಚ್ಚೆತ್ತುಕೊಳ್ಳಬೇಕು ಹೇಳಿದರು.
ಮುಖಂಡರಾದ ಆವಲಕುಪ್ಪ ನಾರಾಯಣಸ್ವಾಮಿ, ಜಯರಾಮರೆಡ್ಡಿ, ನಲ್ಲಪಲ್ಲಿ ರೆಡ್ಡಪ್ಪ, ಶೆಟ್ಟಿಹಳ್ಳಿ ನಾಗಭೂಷನ್, ರಘುನಾಥರೆಡ್ಡಿ, ನಿಶಾಂತರೆಡ್ಡಿ, ಅಕುಂಶಂ ನಾರಾಯಣಸ್ವಾಮಿ, ಗುಂಡಣ್ಣ, ನಂದೀಶ್, ಜೆಸಿಬಿ ಅಶೋಕ್ರೆಡ್ಡಿ, ಸಿ.ಎಂ.ರವಿಮಕುಮಾರ್, ಶೇಖ್ಷಫೀವುಲ್ಲಾ ಹಾಗು ಕಾರ್ಯಕರ್ತರು ಇದ್ದರು.