JANANUDI.COM NETWORK

ಇಸ್ಲಾಮಾಬಾದ್, ಮಾ. 4: ಇಂದು ಬೆಳಿಗ್ಗೆ ಶುಕ್ರವಾರ ಮಸೀದಿಯೊಂದರಲ್ಲಿ ನಡೆದ ಮಾನವ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 30 ಮಂದಿ ಸಾವನ್ನಪ್ಪಿದ್ದು ,80 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಪೇಶಾವರ ನಗರದಲ್ಲಿ ನಡೆದಿದೆ.
ಇಸ್ಲಾಮಾಬಾದಿನ ಪಶ್ಚಿಮಕ್ಕೆ ಸುಮಾರು 190 ಕಿಲೋಮೀಟರ್ ದೂರದಲ್ಲಿರುವ ಪೇಶಾವರದ ಕೊಚಾ ರಿಸಾಲ್ದಾರ್ ಪ್ರದೇಶದಲ್ಲಿ ಶುಕ್ರವಾರದ ಪ್ರಾರ್ಥನೆಯ ಕೆಲವೇ ಕ್ಷಣಗಳ ಮೊದಲು ಅತ್ಮಾಹುತಿ ಬಾಂಬ್ ದಾಳಿ ನಡೆದಿದೆ.
ಶಿಯಾ ಪಂಗಡಕ್ಕೆ ಸೇರಿದ ಮಸೀದಿಗೆ ಇಬ್ಬರು ಶಸ್ತ್ರಾಸ್ತ್ರ ದಾರಿಗಳು ಪ್ರವೇಶಿಸಿ ಗುಂಡಿನ ದಾಳಿ ನಡೆಸಿ ಮಸೀದಿ ಪ್ರವೇಶ ಮಾಡಿದ್ದು ಬಳಿಕ ಸ್ವಯಂ ತಮ್ಮನ್ನು ಸ್ಪೋಟಿಸಿರುವ ಬಗ್ಗೆ ವರದಿಯಾಗಿದೆ.