ಕುಂದಾಪುರದ ಪ್ರತಿಷ್ಠಿತ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಇದೇ ತಿಂಗಳ 26 ಹಾಗೂ 27ನೇ ದಿನಾಂಕದಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

JANANUDI.COM NET WOEK

ಈ ಉದ್ಯೋಗ ಮೇಳದಲ್ಲಿ 20ಕ್ಕೂ ಅಧಿಕ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿದ್ದು, ಸುಮಾರು 750 ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶವನ್ನು ಕಲ್ಪಿಸಲಾಗುವುದು.
ಈ ಉದ್ಯೋಗ ಮೇಳಕ್ಕೆ ಬಿ.ಕಾಂ, ಬಿ.ಸಿ.ಎ, ಬಿ.ಎಸ್ಸಿ, ಬಿ.ಎ, ಎಮ್.ಸಿ.ಎ, ಬಿ.ಬಿ.ಎ, ಎಮ್.ಎಸ್ಸಿ, ಎಮ್.ಕಾಂ ಹಾಗೂ ಎಮ್.ಬಿ.ಎ, ವಿದ್ಯಾರ್ಥಿಗಳು ಅರ್ಹತೆಯನ್ನು ಹೊಂದಿರುತ್ತಾರೆ. ಈ ಉದ್ಯೋಗ ಮೇಳದಲ್ಲಿ 2020 ಮತ್ತು ಅದಕ್ಕಿಂತ ಮುಂಚೆ ಪದವಿ ಪಡೆದ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಮಾತ್ರ ಕ್ಯಾಂಪಸ್ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಆಸಕ್ತರು www.mitkundapura.com/jobfair ವೆಬ್ ಪೇಜ್ ನಲ್ಲಿ ಲಭ್ಯವಿರುವ ಲಿಂಕ್ ನ ಉಪಯೋಗಿಸಿ ನೋಂದಣಿ ಮಾಡಿಕೊಳ್ಳಬಹುದು. ಈ ಉದ್ಯೋಗ ಮೇಳಕ್ಕೆ ಯಾವುದೇ ರೀತಿಯ ನೋಂದಣಿ ಶುಲ್ಕ ಇರುವುದಿಲ್ಲ.


ಈ ಉದ್ಯೋಗ ಮೇಳಕ್ಕೆ ಆಗಮಿಸುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಯ ಜೆರಾಕ್ಸ್, ಆಧಾರಕಾರ್ಡ್, 5 ಪಾಸ್‍ಪೋರ್ಟ ಸೈಜ್ ಪೋಟೋಗಳು ಹಾಗೂ ಸ್ವವಿವರದ ಬಯೋಡೆಟಾ ಪ್ರತಿಗಳನ್ನು ತರಬೇಕೆಂದು ಸೂಚನೆ ನೀಡಲಾಗಿದೆ.
ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 22/03/2021 ಆಗಿರುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ 7348845851 ಗೆ ಕರೆ ಮಾಡಿ, ಕಾಲೇಜಿನ ಪ್ಲೇಸ್ಮಂಟ್ ಡೀನ್ ಪ್ರೊ. ಸತ್ಯನಾರಾಯಣ ಇವರಿಂದ ಪಡೆಯಬಹುದು
.

ಈ ಸಂದರ್ಭದಲ್ಲಿ ಚಂದ್ರರಾವ್ ಮದಾನೆ, ಪ್ರಾಂಶುಪಾಲರು, ಪ್ರೊ. ಮೆಲ್ವಿನ್ ಡಿ ಸೋಜಾ, ಉಪ ಪ್ರಾಂಶುಪಾಲರು, ಪ್ರೊ. ಸತ್ಯನಾರಾಯಣ, ಡೀನ್ ಪ್ಲೇಸ್ಮೆಂಟ್, ಶ್ರೀ. ಪ್ರದೀಪ್ ಕುಮಾರ್ ಶೆಟ್ಟಿ, ಆಡಳಿತಾಧಿಕಾರಿ ಉಪಸ್ಥಿತರಿದ್ದರು.