

ಮಸ್ಕತ್: ಒಮಾನ್‌ನ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮುಳುಗಿದ್ದು, ಟ್ಯಾಂಕರ್‌ನಲ್ಲಿದ್ದ 13 ಭಾರತೀಯ ಸಿಬ್ಬಂದಿ ಸೇರಿದಂತೆ 16 ಮಂದಿ ನಾಪತ್ತೆಯಾಗಿದ್ದಾರೆ.
ಕೊಮೊರೊಸ್ ಧ್ವಜ ಹೊಂದಿದ್ದ ತೈಲ ಹಡಗು ಯೆಮೆನ್ ಬಂದರು ನಗರವಾದ ಏಡೆನ್‌ಗೆ ತೆರಳುತ್ತಿತ್ತು. ಈ ಹಡಗಿನಲ್ಲಿ 13 ಭಾರತೀಯ ಮತ್ತು ಶ್ರೀಲಂಕಾದ ಮೂವರು ಸಿಬ್ಬಂದಿಗಳಿದ್ದರು.
ಒಮನ್‌ನ ಡುಕ್ಮ್ ಬಂದರಿನಿಂದ 25 ನಾಟಿಕಲ್ ಮೈಲ್ ದೂರದಲ್ಲಿ ಹಡಗು ಮುಳುಗಿದೆ. ಪ್ರೆಸ್ಟೀಜ್ ಫಾಲ್ಕನ್ ಹೆಸರಿನ ಹಡಗನ್ನು 2007 ರಲ್ಲಿ ನಿರ್ಮಾಣ ಮಾಡಿದ್ದು 117 ಮೀಟರ್ ಉದ್ದವಿದೆ. ನಾಪತ್ತೆಯಾಗಿರುವ ಸಿಬ್ಬಂದಿ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.