JANANUDI.COM NETWORK
ಬೆಳಗಾವಿ:ಡಿ.20: ರಾಜ್ಯಾದ್ಯ0ತ ಭಾರೀ ಚರ್ಚೆಗೆ ಮತ್ತು ವಿವಾದಾಸ್ಪದಕ್ಕೆ ಒಳಗಾಗಿದ್ದ ಮತಾ0ತರ ನಿಷೇಧ ಮಸೂದೆ ಮಂಡನೆಗೆ ಇ0ದು ಸಚಿವ ಸ0ಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ನಾಳೆ ನಡೆಯುವ ಸಚಿವ ಸಂಪುಟದ ಕಲಾಪದಲ್ಲಿ ಈ ಮತಾ0ತರ ನಿಷೇಧ ಮಸೂದೆ ಮಂಡನೆಯಾಗುವ ಸಂಭವ ಇದೆ.
ಕರಡು ವಿಧೇಯಕದಲ್ಲಿನ ಕೆಲವು ಬದಲಾವಣೆಗಳೊಂದಿಗೆ ನಾಳ ಸದನದಲ್ಲಿ ಮಂಡನೆಯಾಗಲಿದೆ. ಇಂದಿನ ಸಂಪುಟ ಸಭೆ ಮುಕ್ತಾಯವಾಗಿದ್ದು. ಸದನದಲ್ಲಿ ಮತಾ0ತರ ನಿಷೇಧ ವಿಧೇಯಕ ಮ0ಡನೆಗೆ ಸ0ಪುಟ ಅನುಮೋದನೆ ನೀಡಿದೆ.
ರಾಜ್ಯ ಸರ್ಕಾರವು ಪುಸ್ತಾಪಿಸಿರುವ ಮತಾ0ತರ ನಿμÉೀಧ ಮಸೂದೆಯಲ್ಲಿ ಈ ಕೆಳಕ0ಡ ಪ್ರಮುಖ ವಿಷಯಗಳಿವೆ
1) ಬಲವ0ತದ ಮತಾ0ತರ ಶಿಕ್ಷಾರ್ಹ ಎ0ಬ ಪ್ರಕಾರವೇ ವಿಧೇಯಕದಲ್ಲಿ ಇದೆ.
2 ಯಾವುದೇ ವ್ಯಕ್ತಿ ಅಥವಾ ಸಮುದಾಯ ಬಲವಂತದ ಮತಾ0ತರ ಮಾಡುವಂತಿಲ್ಲ
3 ವ್ಯಕ್ತಿ ಮತಾ0ತರ ಹೊ0ದಬೇಕಾದರೆ ಸಕ್ಷಮ ಪ್ರಾಧಿಕಾರದ ಮುಂದೆ 2 ತಿ0ಗಳ ಮೊದಲು ಅರ್ಜಿ ಸಲ್ಲಿಸಬೇಕು
4 ಮತಾ0ತರ ಪ್ರಕ್ರಿಯೆ ನಡೆಸಬೇಕಾದರೂ ಸಕ್ಷಮ ಪ್ರಾಧಿಕಾರದ ಮುಂದೆ 2 ತಿ0ಗಳ ಮೊದಲು ಅರ್ಜಿ ಸಲ್ಲಿಸಬೇಕು
5 ಅರ್ಜಿ ಸಲ್ಲಿಸಿದ ವ್ಯಕ್ತಿ ತನ್ನ ಇಚ್ಚೆಗೆ ಅನುಗುಣವಾಗಿ ನೀಡಿರುವ ಅರ್ಜಿ ಹಿ0ಪಡೆಯಲು ಸ್ವತಂತ್ರನಾಗಿರುತ್ತಾನೆ
6 ಮತಾ0ತರ ಆಗಲು ಬಯಸುವ ವ್ಯಕ್ತಿಯ ಖಾಸಗಿತನ ಕಾಪಾಡಲು ಮತ್ತು ಧಾರ್ಮಿಕ ಹಕ್ಕನ್ನು ಕಾಪಾಡಲು ಮತಾ0ತರ ಪ್ರಕ್ರಿಯೆ ಗೌಪ್ಯವಾಗಿಡುವಂತಿಲ್ಲ
7) ಮತಾ0ತರ ಪ್ರಕ್ರಿಯೆಯೊಳಗೆ ಯಾವುದೇ ವ್ಯಕ್ತಿಯನ್ನು ಬಲವಂತವಾಗಿ ತೊಡಗುವಂತೆ ಮಾಡಲು ಅವಕಾಶವಿಲ್ಲ
8 ಬಲವ0ತದ ಮತಾ0ತರ ಮಾಡುವ ಅಥವಾ ಮತಾ0ತರಕ್ಕೆ ಪ್ರಚೋದನೆ ನೀಡುವ ವ್ಯಕ್ತಿಯನ್ನು ಬಂಧಿಸಲು ಅವಕಾಶ
9 ಬಂಧಿತನಾಗುವ ವ್ಯಕ್ತಿಗೆ ಜಾಮೀನು ಪಡೆಯಲು ಅವಕಾಶ ಇಲ್ಲದಂತೆ, ಜಾಮೀನು ರಹಿತ ಪ್ರಕರಣ ಎ0ದು ಪರಿಗಣಿಸುವುದು
10) ಮತಾ0ತರ ಪ್ರಕ್ರಿಯೆ ಯಾವುದೇ ಧಾರ್ಮಿಕ ಕಟ್ಟಡಗಳು, ಪ್ರಾರ್ಥನಾ ಕೇಂದ್ರಗಳಲ್ಲಿ ಮಾಡುವಂತಿಲ್ಲ
11) ಮತಾ0ತರ ಪ್ರಕ್ರಿಯೆ ಕಾನೂನುಬದ್ಧವಾಗಿ ನಡೆಯುತ್ತಿದ್ದಲ್ಲಿ ನಿಗದಿತ ಪ್ರಕ್ರಿಯೆಯನ್ನು ತಟಸ್ಥ ಪ್ರದೇಶದಲ್ಲಿ ಮಾಡುವುದು ಕಡ್ಡಾಯ