JANANUDI.COM NETWORK

ಆನಂದ್, ಜೂ.16: ಗುಜರಾತ್ ರಾಜ್ಯದ ಆನಂದ್ ಜಿಲ್ಲೆಯ ಇಂದ್ರಾನಾಜ್ ಎಂಬ ಗ್ರಾಮದ ಬಳಿ ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ, ಕಾರಿನಲ್ಲಿದ್ದ 10 ಜನರು ಸ್ಥಳದಲ್ಲೇ ಮೃತಪಟ್ಟಿದ್ದ ದಾರುಣ ಘಟನೆ ನಡೆದಿದೆ
ತಾರಾಪುರ ಮತ್ತು ಅಹಮದಾಬಾದ್ ಜಿಲ್ಲೆಯ ವಟಮಾನ್ ’ಎಂಬ ಉರಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.ಲಾರಿಯು ಬಹಳ ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ.
ಕಾರಿನೊಳಗಿದ್ದ ಮೃತದೇಹಗಳು ನಜ್ಜುಗುಜ್ಜಾಗಿದ್ದು, ಕಾರಿನಿಂದ ಹೊರತೆಗೆಯುವ ಮತ್ತು ಮೃತರನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳಿಂದ ತಿಳಿದು ಬಂದಿದೆ.