ಕೋಲಾರ:-ಶಿಸ್ತು, ಸಂಯಮ ಮತ್ತು ನಿರಂತರ ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಯನ್ನು ನಡೆಸಿದರೆ ಯಶಸ್ವಿಯು ಕಟ್ಟಿಟ್ಟ ಬುತ್ತಿಯಾಗಲಿದೆಎಂದುವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಬಿ.ವಿ.ಚೇತನ್ಕುಮಾರ್ಅವರು ತಿಳಿಸಿದರು.
ನಗರದ ವಿವೇಕ್ಇನ್ಫೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಧಕರಿಗೆ ಸನ್ಮಾನ ಮತ್ತುಒಂದು ದಿನದಉಚಿತಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದುಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇಇದೆ. ಶಿಕ್ಷಣ ಕ್ಷೇತ್ರದಲ್ಲಿ ಈ ಸ್ಪರ್ಧಾತ್ಮಕತೆ ಶರವೇಗದಲ್ಲಿ ಸಾಗುತ್ತಿದೆ. ಶಿಕ್ಷಣ ಮುಗಿಸಿ ನಂತರ ಸರ್ಕಾರಿಉದ್ಯೋಗ ಪಡೆಯಲು ಇಚ್ಚಿಸುವ ಆಕಾಂಕ್ಷಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡುಅದರಲ್ಲಿ ಯಶಸ್ವಿಯಾಗುವುದು ಮುಖ್ಯವಾಗಿದೆಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸೂಕ್ತ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು. ನಿಮ್ಮಗುರಿಯನ್ನುತಲುಪಲು ಸಹಕಾರ ನೀಡುವಗುರುಗಳಿಗೆ ನೀವು ವಿಧೇಯರಾಗಿರಬೇಕು. ಇದರೊಂದಿಗೆ ನಿಮ್ಮತಂದೆ-ತಾಯಿ ಹಾಗೂ ಹಿರಿಯರಿಗೆಗೌರವ ನೀಡಬೇಕು. ವಿದ್ಯೆಗೆ ವಿನಯವೇ ಭೂಷಣಎಂಬುವುದನ್ನು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿವೇಕ್ಇನ್ಫೋಟೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ.ಪ್ರಮೋದ್ಕುಮಾರ್ ಮಾತನಾಡಿ, ಸರ್ಕಾರಿ ಹುದ್ದೆಗಳನ್ನು ಪಡೆಯಬೇಕೆಂಬ ಆಸಕ್ತಿ ಇರುವವರು ಸಮಯ ವ್ಯರ್ಥ ಮಾಡಿದೆ ಇಂದಿನಿಂದಲೇತಯಾರಿ ನಡೆಸಲು ಪ್ರಾರಂಭಿಸುವುದು ಸೂಕ್ತ.ಈ ತಯಾರಿಗೆಅವಶ್ಯಕವಾದತರಬೇತಿ, ಮಾದರಿ ಪರೀಕ್ಷೆಗಳನ್ನು ಸಂಸ್ಥೆಯಲ್ಲಿ ನೀಡಲಾಗುತ್ತಿದ್ದುಇದನ್ನುಎಲ್ಲಾ ಸ್ಪರ್ಧಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಿ.ಜಿ.ಮುರಳಿ ಮಾತನಾಡಿ, ಸ್ಪರ್ಧಾತ್ಮಕಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವವರು ನಿತ್ಯವೂ ದಿನಪತ್ರಿಕೆಓದುವ ಹವ್ಯಾಸವನ್ನು ಬೆಳಸಿಕೊಳ್ಳಬೇಕು. ಇದರೊಂದಿಗೆ ಮೊಬೈಲ್ ಬಳಕೆ ಕಡಿಮೆ ಮಾಡಿಓದುವಕಡೆಗೆ ಹೆಚ್ಚು ಸಮಯವನ್ನು ನೀಡಬೇಕುಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಎಸ್.ಆರ್.ರಾಖೇಶ್ಮಾತನಾಡಿ, ಸ್ಪರ್ಧಾರ್ಥಿಗಳು ಸಕಾರಾತ್ಮಕ ಮನೋಭಾವನೆಯೊಂದಿಗೆ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು. ನಕಾರಾತ್ಮಕ ವಿಷಯಗಳನ್ನು ತುಂಬುವವರಿಂದದೂರಇರಬೇಕು. ಇದನ್ನುಅರಿತುಕೊಂಡು ಸೂಕ್ತ ಮಾರ್ಗದರ್ಶನ ಪಡೆದು ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉನ್ನತ ಹುದ್ದೆಗಳನ್ನು ಪಡೆಯುವಂತಾಗಬೇಕುಎಂದು ತಿಳಿಸಿದರು.
ಸಂಸ್ಥೆಯಲ್ಲಿ ಈಗಾಗಲೇ ಸುಮಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ವಿವಿಧ ಇಲಾಖೆಗಳಿಗೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಸಂಸ್ಥೆಯಲ್ಲಿಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಕೆಲವರುಕೆ.ಎ.ಎಸ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ರೀತಿಯಾಗಿಉತ್ತಮ ಫಲಿತಾಂಶ ನೀಡುವ ಮೂಲಕ ವಿವೇಕ್ಇನ್ಫೋಟೆಕ್ಸಂಸ್ಥೆಯುರಾಜ್ಯದಅತ್ಯುತ್ತಮ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆಎಂದರು.
ಇದೇ ಸಂದರ್ಭದಲ್ಲಿಎಫ್.ಡಿ.ಎಹುದ್ದೆಗೆಆಯ್ಕೆಯಾದಎಸ್.ಕೆ.ಮುನಿರಾಜು ಹಾಗೂ ಅಗ್ನಿವೀರ್ಹುದ್ದೆಗೆಆಯ್ಕೆಯಾದಜಿ.ಬಿ.ಸಂತೋಷ್ಕುಮಾರ್ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿಸಂಪನ್ಮೂಲ ವ್ಯಕ್ತಿಗಳಾದಎನ್.ಕೆ.ನಾಗೇಶ್, ಅಂಬರೀಶ್,ಸ್ಫರ್ಧಾರ್ಥಿಗಳಾದ ಕೆ.ಆರ್.ವೇಣುಗೋಪಾಲ, ಪ್ರಜ್ವಲ್, ನಾಗೇಶ್, ನವೀನ್ಕುಮಾರ್, ಸಂದೇಶ್ಕುಮಾರ್, ಸತೀಶ್, ಮುರಳಿ ಮೋಹನ್, ನಾಗಾರ್ಜುನ, ಮುಕ್ತಾನಂದ, ಸುಧಾಕರ್, ಸುಮಿತ್, ಪ್ರಶಾಂತ್, ಭಾವನ, ಭಾನುಶ್ರೀ ಸೇರಿದಂತೆಇತರರುಉಪಸ್ಥಿತರಿದ್ದರು.