ಕೋಲಾರ/ 02 ನರಸಾಪುರ ಭಾಗದ ಜನರ, ಕಾರ್ಮಿಕ, ಮಹಿಳಾ ಕಾರ್ಮಿಕರ ಬಹುದಿನಗಳ ಬೇಡಿಕೆಯಾದಂತಹ ನರಸಾಪುರ ಗ್ರಾಮದಲ್ಲಿ ಹೊಸ ಪೆÇಲೀಸ್ ಠಾಣೆಯನ್ನು ಮಂಜೂರು ಮಾಡುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ರವರಲ್ಲಿ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮನವಿ ನೀಡಿದರು.
ಕೋಲಾರಕ್ಕೆ ಬುಧವಾರ ಆಗಮಿಸಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ರವರಿಗೆ ಮನವಿ ನೀಡಿ ಮನವಿಯಲ್ಲಿ
. ಕೋಲಾರ ತಾಲ್ಲೂಕು. ನರಸಾಪುರ ಕೈಗಾರಿಕಾ ಪ್ರದೇಶದ ಭಾಗದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು. ಹೊರ ರಾಜ್ಯಗಳಿಂದಲೂ ಸಹ ಜನ ಬಂದು ಇಲ್ಲೆ ವಾಸವಿದ್ದು ಕೆಲಸ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಕೈಗಾರಿಕಾ ಪ್ರದೇಶದಲ್ಲಿ ಮಹಿಳೆಯರು ಕರ್ತವ್ಯಕ್ಕೆ ಮೂರು ಪಾಳಿಗಳಲ್ಲಿ ಹಾಜರಾಗುತ್ತಿದ್ದು, ಈ ವೇಮಗಲ್ ಕೈಗಾರಿಕಾ ಪ್ರದೇಶಕ್ಕೆ ಹಾಗೂ ನರಸಾಪುರ ಕೈಗಾರಿಕೆ ಪ್ರದೇಶಕ್ಕೆ ವೇಮಗಲ್ ಒಂದೇ ಪೆÇಲೀಸ್ ಠಾಣೆ ಇದ್ದು, ವೇಮಗಲ್ ಠಾಣೆಗೆ 107 ಹಳ್ಳಿಗಳು ಸೇರುತ್ತವೆ. ಸಾರ್ವಜನಿಕರು ಸಹ ಹಲವಾರು ಕೆಲಸ ಕಾರ್ಯಗಳಿಗೆ ಠಾಣೆಗೆ ಬರುತ್ತಿದ್ದಾರೆ. ಸಿಬ್ಬಂದಿಯು ಕೊರತೆ ಸಹ ವೇಮಗಲ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಾಗಿರುತ್ತದೆ. ವೇಮಗಲ್ ಠಾಣಾ ಅಧಿಕಾರಿಗಳಿಗೂ ಸಹ ಕೆಲಸ ಮಾಡುವ ಒತ್ತಡ ಹೆಚ್ಚಾಗಿರುತ್ತದೆ. ಮಟ್ಕ, ಗಾಂಜ, ಜೂಜು ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಬೆಂಗಳೂರಿಗೆ ಕೂಗಳತೆಯ ದೂರದಲ್ಲಿ ನರಸಾಪುರ ಕೈಗಾರಿಕಾ ಪ್ರದೇಶ ಸ್ಥಾಪನೆಯಾಗಿದೆ.
ಈ ಎಲ್ಲಾ ಘಟನೆಗಳಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೊಸದಾಗಿ ಪೆÇಲೀಸ್ ಠಾಣೆಯನ್ನು ಮಂಜೂರು ಮಾಡಿಕೊಟ್ಟು, ಈ ಭಾಗದ ಜನರಿಗೆ ಹಾಗೂ ಕೈಗಾರಿಕೆ ಪ್ರದೇಶದಲ್ಲಿ ಕಾರ್ಯನಿರ್ವಹಿಸು ಮಹಿಳಾ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಈ ಹಿಂದೆ ಇದ್ದಂತಹ ಸರ್ಕಾರದ ಅಂದಿನ ಗೃಹಮಂತ್ರಿಗಳಾದ ಆರ್.ಅಶೋಕ್ ರವರಿಗೆ ಮತ್ತು ಅರಗಜ್ಜಾನೇಂದ್ರ ರವರಿಗೆ ಮನವಿಗಳನ್ನು ಕೊಟ್ಟು ಕೇಳಿಕೊಂಡರೂ ಸಹ ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸಿರುವುದಿಲ್ಲ. ಈಗಲಾದರೂ ತಾವುಗಳು ಈ ಜನರ ಬೇಡಿಕೆಗಳನ್ನು ಈಡೇರಿಸುತ್ತೀರೆಂಬ ನಂಬಿಕೆಯಿಂದ ಈ ಮನವಿ ಪತ್ರವನ್ನು ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಯುವ ಘಟದ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಕೋಲಾರ ತಾಲ್ಲೂಕು ಅಧ್ಯಕ್ಷ ಜಗನ್ನಾಥರೆಡ್ಡಿ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಕಾಡಕಚ್ಚನಹಳ್ಳಿ ವಿಶ್ವನಾಥಗೌಡ, ಮಾಲೂರು ತಾಲ್ಲೂಕು ಅಧ್ಯಕ್ಷ ತಿಪ್ಪಸಂದ್ರ ಹರೀಶ್ಗೌಡ, ಮುಖಂಡರುಗಳಾದ ಪ್ರಭು, ಸುರೇಂದ್ರ, ತೇರಹಳ್ಳಿ ಚಂದ್ರಪ್ಪ, ಮುಂತಾದವರು ಹಾಜರಿದ್ದರು.