

ಬೆಂಗಳೂರು: ತುಮಕೂರಿನಲ್ಲಿ ನ.24ರಂದು ನಡೆಯಲಿರುವ ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾ ಕೂಟದ ಅಂಗವಾಗಿ ಜಿಲ್ಲೆಯಾದ್ಯಂತ ಸಂಚರಿಸಲಿರುವ ಕ್ರೀಡಾ ಜ್ಯೋತಿ ರಥವನ್ನು ಸ್ವತಃ ಗೃಹಸಚಿವ ಜಿ.ಪರಮೇಶ್ವರ ಅವರೇ ಚಾಲನೆ ಮಾಡುವ ಮೂಲಕ ಕ್ರೀಡಾ ಕೂಟಕ್ಕೆ ಶುಭ ಹಾರೈಸಿದರು.
ಕ್ರೀಡಾ ಜ್ಯೋತಿ ರಥದ ವಾಹನವನ್ನು ಗೃಹ ಸಚಿವವರು ಚಾಲಾಯಿಸಿದರೆ, ಅದಕ್ಕೆ ಅವರ ಪತ್ನಿ ಕನ್ನಿಕಾ ಪರಮೇಶ್ವರ ಅವರು ಹಸಿರು ನಿಶಾನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಜಿ.ಪರಮೇಶ್ವರ ಅವರು, ಪತ್ರಕರ್ತರು ಸದಾ ಒತ್ತಡದ ನಡುವೆ ಕೆಲಸ ಮಾಡುತ್ತಿರುತ್ತಾರೆ. ಮಾನಸಿಕ ಒತ್ತಡ ನಿಭಾಯಿಸಲು ದೈಹಿಕ ವ್ಯಯಾಮ ಚಟುವಟಿಕೆಗಳು ಬಹಳ ಮುಖ್ಯವಾಗಿದೆ. ನಾನೂ ಒಬ್ಬ ಕ್ರೀಡಾಪಟುವಾಗಿ ಈ ಕ್ರೀಡಾಕೂಟ ಆಯೋಜನೆಯಿಂದ ಹಿಡಿದು ಅದರ ಭಾಗವಹಿಸಲು ಹೆಮ್ಮೆಯಾಗುತ್ತದೆ ಎಂದರು.
ಕ್ರೀಡೆ ಎಂದರೆ ಎಲ್ಲರನ್ನೂ ಸೌಹಾರ್ಧಯುತವಾಗಿ ಬೆಸೆಯುವಂತಾದ್ದು. ಈ ರಥಯಾತ್ರೆ ಮೂಲಕ ಸೌಹಾದರ್ಶ ಸಂದೇಶವನ್ನು ಎಲ್ಲೆಡೆ ಸಾರಲಿ ಎಂದರು.
ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಈ ಬಾರಿ ತುಮಕೂರಿನಲ್ಲಿ ರಾಜ್ಯ ಮಟ್ಟದ ಕ್ರೀಡಾ ಕೂಟ ಏರ್ಪಡಿಸಲು ಅವಕಾಶ ನೀಡಿರುವುದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ತುಮಕೂರಿನ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ಜಿಲ್ಲಾಡಳಿತದ ಪೂರ್ಣ ಸಹಕಾರ ನೀಡಲಾಗುವುದು. ನಮ್ಮ ಅತಿಥಿಗಳಾಗಿ ರಾಜ್ಯದ ಎಲ್ಲಾ ಕಡೆಯಿಂದ ಬರುವ ಪತ್ರಕರ್ತರಿಗೆ ಕಲ್ಪತರ ನಾಡಿನ ಆತಿಥ್ಯ ನೀಡಲಾಗುವುದು ಎಂದರು.
ಜಿಲ್ಲಾಧ್ಯಕ್ಷ ಚಿ.ನೀ.ಪುರುಷೋತ್ತಮ ಮಾತನಾಡಿ, ಈ ಕ್ರೋಡಾ ಜ್ಯೋತಿಯನ್ನೊತ್ತ ರಥಯಾತ್ರೆಯು ಎಲ್ಲಾ ತಾಲೂಕುಗಲ್ಲಿ ಮೂರು ದಿನ ಸಂಚರಿಸಲಿದೆ ಎಂದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು, ಎಸ್ಪಿ ಕೆ.ವಿ.ಅಶೋಕ್, ಶಾಸಕ ಜ್ಯೋತಿ ಗಣೇಶ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಎಡಿಸಿ ತಿಪ್ಪೇಸ್ವಾಮಿ, ಹಿರಿಯ ಪತ್ರಕರ್ತರಾದ ನಾಗಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದು ಶುಭ ಹಾರೈಸಿದರು.
ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ರಘುರಾಮ, ಜಿಲ್ಲಾ ಪದಾಧಿಕಾರಿಗಳಾದ ಶಾಂತರಾಜು, ಮಧುಕರ್, ಡಿ.ಎಂ.ಸತೀಶ್, ಕ್ರೀಡಾ ಸಂಚಾಲಕ ಸತೀಶ್ ಹಾರೋಗೆರೆ, ಪ್ರಚಾರ ಸಮಿತಿ ಅಧ್ಯಕ್ಷ ರಂಗರಾಜು, ಯಶಸ್, ಹರೀಶ್ ಆಚಾರ್ಯ ಮತ್ತಿತರರು ಇದ್ದರು.
ತುಮಕೂರಿನಿಂದ ಹೊರಟ ಕ್ರೀಡಾ ಜ್ಯೋತಿಯ ರಥಕ್ಕೆ ಕುಣಿಗಲ್ನಲ್ಲಿ ಸಾಲುಗಟ್ಟ ನಿಂತು ಮೆರವಣಿಗೆ ನಡೆಸುವ ಮೂಲಕ ಭರ್ಜರಿ ಸ್ವಾಗತ ನೀಡಲಾಯಿತು.

