ಕುಂದಾಪುರ,ಫೆ 10; ರಾಜಸ್ಥಾನದ ಜೈಪುರದಲ್ಲಿ ಇತ್ತೀಚೆಗೆ ನಡೆದ 67ನೇ ರಾಷ್ಟ್ರಮಟ್ಟದ 14ರ ವಯೋಮಾನದ “ಬಾಲಕಿಯರ ಯೋಗಾಸನ” ಸ್ಪರ್ಧೆಯಲ್ಲಿ ಟಾಪ್ 10 ರಲ್ಲಿ 7ನೇ ಸ್ಥಾನ ಪಡೆದು ಶಾಲೆಗೆ ಮತ್ತೆ ನಾಡಿಗೆ ಕೀರ್ತಿ ತಂದಿರುವ ಕುಂದಾಪುರದ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಲಾಸ್ಯ ಮಧ್ಯಸ್ಥಳಿಗೆ ಹೋಲಿ ರೋಜರಿ ಶಾಲೆ ಮತ್ತು ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಅದ್ದೂರಿಯಲ್ಲಿ ಸನ್ಮಾನಿಸಲಾಯಿತು. ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳ ಎಲ್ಲಾ ಶಿಕ್ಷಕ ವ್ರಂದ, ರೋಜರಿ ಚರ್ಚ್ ವತಿಯಿಂದ, ಶಿಕ್ಷಣ ಇಲಾಖೆಯಿಂದ ಗೌರವಿಸಿದರು. ಹಾಗೆಯೆ ಲಾಸ್ಯ ಮತ್ತು ಇನ್ನಿತರ ಯೋಗಪಟುಗಳಿಂದ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಕರ್ನಾಟಕವು ಪ್ರಪ್ರಥಮ ಬಾರಿಗೆ 4 ಸ್ಥಾನ ಪಡೆಯಲು ಕಾರಣವಾಗಿದ್ದು ಇದು ಕರ್ನಾಟಕದವರಿಗೆ ಹೆಮ್ಮೆಯ ವಿಷಯವಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೋಲಿ ರೋಜರಿ ಆಂಗ್ಲಾ ಮಾದ್ಯಮಾ ಶಾಲೆಯ ಜಂಟಿ ಕಾರ್ಯದರ್ಶಿ ಅ|ವಂ|ಸ್ಟ್ಯಾನಿ ತಾವ್ರೊ ಲಾಸ್ಯಳನ್ನು ಅಥಿತಿಗಳ ಜೊತೆ ಸನ್ಮಾನಿಸಿ “ಲಾಸ್ಯ ನಮ್ಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ ನಮ್ಮ ಶಾಲೆ ಮತ್ತು ನಾಡಿಗೆ ಕೀರ್ತಿ ತಂದಿದ್ದಾಳೆ, ಅವಳ ಯೋಗ ಪಟುವಾಗಿ ನಿರಂತರ ಅಭ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಈ ಸಾಧನೆ ಮಾಡಿದ್ದಾಳೆ,ಅವಳು ಎಲ್ಲಾ ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗಲಿ’ ಅಭಿನಂದಿಸಿದರು.
ಸನ್ಮಾನ ಪತ್ರವನ್ನು ಸಹಶಿಕ್ಷಕಿ ಪ್ರತಿಮಾ ಶೆಟ್ಟಿ ವಾಚಿಸಿದರು. ನಂತರ ಲಾಸ್ಯಳನ್ನು ತೆರೆದ ವಾಹನದಲ್ಲಿ ಬ್ಯಾಂಡು ವಾದ್ಯಗಳ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷರೊಡನೆ ಕುಂದಾಪುರ ನಗರದ ಮುಖ್ಯ ರಸ್ತೆಗಳಲ್ಲಿ ಹೊಲಿ ರೋಜರಿ ಶಾಲೆಯ ಕುಮಾರಿ ಲಾಸ್ಯಳಿಗೆ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಟಾಪ್ 10 ರಲ್ಲಿ 7ನೇ ಸ್ಥಾನ – ಅದ್ದೂರಿಯ ಸನ್ಮಾನ-ಅಭಿನಂದನ ಮೆರವಣಿಗೆ ಮಾಡಲಾಯಿತು
ತಾಲೂಕು ದೈಹಿಕ ಪರಿವಿಕ್ಷಣಾಧಿಕಾರಿಯಾಗಿರುವ ರವೀಂದ್ರ ನಾಯಕ್ ಮಾತನಾಡಿ “ಲಾಸ್ಯಳು ಈ ಶಾಲೆಗೆ ಮತ್ತು ನಾಡಿಗೆ ಕೀರ್ತಿ ತಂದಿದ್ದಾಳೆ, ಅವಳಿಗೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ಅವಕಾಶವಿದೆ, ಅವಳಿ ಉತ್ತಮ ಭವಿಸ್ಯವನ್ನು ಹಾರೈಸುತ್ತೇನೆ’ ಎಂದರು. ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಯುತ ಸಂತೋಷ್ ಕುಮಾರ್ ಶೆಟ್ಟಿ, ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ಸೈಂಟ್ ಜೊಸೆಫ್ ಕೊನ್ವೆಂಟಿನ ಸಹಾಯಕ ಮುಖ್ಯಸ್ಥೆ ಸಿಸ್ಟರ್ ಆಶಾ, ಲಾಸ್ಯಳ ಹೆತ್ತವರಾದ ಅರುಣಾ ಮತ್ತು ಲತಾ ಮಧ್ಯಸ್ಥ ದಂಪತಿ, ಹೋಲಿ ರೋಜರಿ ಚರ್ಚಿನ ಆಯೋಗಗಳ ಸಂಚಾಲಕಿ ಪ್ರೆಮಾ ಡಿ’ಕುನ್ನಾ, ಸಂತಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳ ಎಲ್ಲಾ ಮುಖ್ಯಸ್ಥರು, ಲಾಸ್ಯಳ ತರಗತಿಯ ಅದ್ಯಾಪಕಿ ಅಂಕಿತ, ಶಾಲಾ ಸಮಿತಿಯ ಸದಸ್ಯರು, ಶಾಲೆಯ ವಿದ್ಯಾರ್ಥಿ ನಾಯಕಿ ಮತ್ತ ಉಪನಾಯಕಿ ಮತ್ತು ಪತ್ರಕರ್ತ ಬರ್ನಾಡ್ ಡಿಕೋಸ್ತಾ ಉಪಸ್ಥಿರಿದ್ದರು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಕ ರತ್ನಾಕರ ಶೆಟ್ಟಿ ಸಂಯೋಜಿಸಿದ್ದರು, ದೈಹಿಕ ಶಿಕ್ಷಕ ಚಂದ್ರಶೇಖರ ಬೀಜಾಡಿ ಮೆರವಣಿಯ ನೇತ್ರತ್ವವನ್ನು ವಹಿಸಿದ್ದರು
ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ. ಸ್ವಾಗತಿಸಿದರು. ಸಹ ಶಿಕ್ಷಕ ಒರನ್ ಡಿಸೋಜಾ ನಿರೂಪಿಸಿದರು, ಶಾಲೆಯ ಸಹ ಶಿಕ್ಷಕ ಲೂವಿಸ್ ಪ್ರಶಾಂತ್ ವವಂದಿಸಿದರು.