ಕುಂದಾಪುರ,ನ. 24; ಸ್ಥಳೀಯ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನ. 24 ರಂದು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಮತ್ತು ಹೋಲಿ ರೋಜರಿ ಶಾಲೆಯ ಜೊತೆ ಕಾರ್ಯದರ್ಶಿಯಾಗಿರುವ ಅತೀ ವಂದನೀಯ ಧರ್ಮಗುರು ಸ್ಟ್ಯಾನಿ ತಾವ್ರೊ “ಎಲ್ಲಾ ವಿದ್ಯಾರ್ಥಿಗಳು ವಿಜೇತರಾಗಲು ಮತ್ತು ಎಲ್ಲರಿಗೂ ಬಹುಮಾನ ಸಾಧ್ಯವಿಲ್ಲ ಆದರೆ ಕಠಿಣ ಪರಿಶ್ರಮ, ಸಮಯ ಪಾಲನೆ, ದೃಡ ಸಂಕಲ್ಪ, ಗುರಿ ಮತ್ತು ಉದ್ದೇಶಗಳನ್ನು ಹೊಂದಿದರೆ ವಿಜೇತರಾಗಲಿಕ್ಕೆ ಸಾಧ್ಯ’ ಎಂದು ತಿಳಿಸಿದರು.
ಪ್ರಶಸ್ತಿ ಪತ್ರವನ್ನು ವಿತರಿಸಿ ಡಾ. ಸೋನಿ ಡಿ’ಕೋಸ್ತಾರವರು ಸ್ವಾಮಿ ವಿವೇಕಾನಂದರು ಹೇಳಿರುವಂತೆ “ ಸಾವನ್ನು ಬಯಸಲು ಬಹಳ ದಾರಿಗಳಿದೆ ಆದರೆ ಗೆಲ್ಲಲು ಕಡಿಮೆ ದಾರಿಗಳಿವೆ, ಅವು ಪರಿಶ್ರಮ ಪ್ರಮಾಣಿಕ ಪ್ರಯತ್ನ ವಾಗಿದೆ, ಡಾ| ಎಪಿಜೆ ಅಬ್ದುಲ್ ಕಲಾಂರವರು ಹೇಳಿರುವಂತೆ ದೊಡ್ಡ ದೊಡ್ಡ ಕನಸನ್ನು ಕಾಣಬೇಕು ಕಂಡ ಕನಸನ್ನು ನನಸಾಗಿಸಲು ಹಗಲಿರುಳು ಶ್ರಮಿಸಬೇಕೆಂದು” ಎಂದು ಹೇಳಿದರು.
ಶಾಲೆಯ ಹಳೆ ವಿದ್ಯಾರ್ಥಿನಿ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುವ ಡಾ| ಕ್ಷಮಾರವರನ್ನು ಸನ್ಮಾನಿಸಲಯಿತು. ಸನ್ಮಾನಿತರಾದ ಡಾ| ಕ್ಷಮಾರವರು ವಿದ್ಯಾರ್ಥಿಗಳು “ಕೇವಲ ಒಂದೇ ವಿಷಯದಲ್ಲಿ ಸೀಮಿತರಾಗಿರದೆ ಎಲ್ಲಾ ವಿಷಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಸರ್ವತೋಮುಖ ಅಭಿವೃದ್ದಿ ಹೊಂದಬೇಕೆಂದು ಹಾಗೂ ತಾನು ಕೂಡ ಇದೇ ಶಾಲೆಯಲ್ಲಿ ಕಲಿತು ಶಾಲೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಗಳಿಸಿ ಉನ್ನತ ಸ್ಥಾನಕ್ಕೆರಲು ಸಾಧ್ಯವಾಯಿತು” ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಕಾರ್ಯಕ್ರದಲ್ಲಿ ಮುಖ್ಯೋಪಾಧ್ಯಾಯಿನಿ ಭಗಿನಿ ತೆರೆಜಾ ಶಾಂತಿ ಅತಿಥಿಗಳನ್ನು ಸತ್ಕರಿಸಿದರು. ವಿದ್ಯಾರ್ಥಿನಿ ಪ್ರತೀಕ್ಷಾ ಸ್ವಾಗತಿಸಿದರು. ಡೆನಿಸನ್ ಧನ್ಯವಾದ ಸಮರ್ಪಿಸಿದರು. ಡಿಲನ್, ತನ್ವಿ, ಚಿರಾಗ್ ಕಾರ್ಯಕ್ರಮ ನಿರೂಪಿಸಿದರು.