ಕುಂದಾಪುರ : ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಇಲ್ಲಿ ವಿವಿಧ ಕ್ಲಬ್‍ಗಳ ಉದ್ಘಾಟನೆಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಹಾಗೂ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾಗಿರುವ ಅತೀ ವಂದನೀಯ ಗುರು ಸ್ಟ್ಯಾನಿ ತಾವ್ರೊರವರು ವಿವಿಧ ಕ್ಲಬ್‍ಗಳು ಶಾಲಾ ಚಟುವಟಿಕೆಯಲ್ಲಿ ಭಾಗವಹಿಸುವ ಹಾಗೂ ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡಿರುವ ಕುರಿತು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸನ್‍ರೈಸ್ ರೋಟರಿ ಕ್ಲಬ್‍ನ ಅಧ್ಯಕ್ಷರಾಗಿರುವ ರೋಟೇರಿಯನ್ ಬಿ.ಎಂ ಚಂದ್ರಶೇಖರ್‍ರವರು ವಿವಿಧ ಕ್ಲಬ್‍ಗಳ ಮಹತ್ವವನ್ನು ತಿಳಿಸಿದರು ಹಾಗೂ ಇನ್ನೋರ್ವ ಮುಖ್ಯ ಅತಿಥಿಗಳಾಗಿರುವ ಕುಂದಾಪುರ ರೆಡ್‍ಕ್ರಾಸ್ ಸಂಸ್ಥೆಯ ಚೇರ್‍ಮೇನ್ ಜಯಕರ್ ಶೆಟ್ಟಿಯವರು ಎಲ್ಲಾ ಶಾಲೆಗಳಲ್ಲಿ ಪಠ್ಯ ವಿಷಯಕ್ಕೆ ಮಾತ್ರ ಒತ್ತನ್ನು ನೀಡಿದರೆ ಈ ಶಾಲೆಯವರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒತ್ತನ್ನು ನೀಡುತ್ತಿದ್ದಾರೆ ಎಂದು ಅಭಿನಂದಿಸಿದರು.
ರೆಡ್‍ಕ್ರಾಸ್‍ನ ವಿದ್ಯಾರ್ಥಿಗಳಿಗೆ ಎಸ್.ದಿನಕರ್ ಶೆಟ್ಟಿಯವರು ಪ್ರಮಾಣವನ್ನು ವಚನವನ್ನು ಭೋಧಿಸಿದರು. ಕಾರ್ಯಕ್ರಮದಲ್ಲಿ ಡಾ.ಸೋನಿ ಡಿ’ಕೋಸ್ಟಾ, ಶಿವರಾಮ್ ಶೆಟ್ಟಿ, ಸೀತಾರಾಮ್ ಶೆಟ್ಟಿ, ಗಣೇಶ್ ಆಚಾರ್ಯ, ದಿನಕರ್ ಪಟೇಲ್, ಹಾಜಿ ಅಬುಶೇಖ್ ಸಾಹೇಬ್, ಗೀತಾ ಮುಕುಂದನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದಶಮಿ ಎಲ್. ಶಿವಗಂಗೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ದೀಕ್ಷಿತಾ ಸ್ವಾಗತಿಸಿದರು. ವಿದ್ಯಾರ್ಥಿನಿ ದಿಯಾ ಧನ್ಯವಾದ ಸಮರ್ಪಿಸಿದರು.