ಕುಂದಾಪುರ,ಡಿ.9: ಪ್ರತಿಷ್ಟಿತ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷೀಕೋತ್ಸವವು ಬಹಳ ವಿಜ್ರಂಭಣೆಯಿಂದ ಡಿ.8 ರಂದು ಶಾಲಾ ಮೈದಾನದಲ್ಲಿ ನಡೆಯಿತು. ಶಾಲಾ ವರದಿಯನ್ನು ಪವರ್ ಪಾಂಯ್ಟ್ ಮೂಲಕ ಪ್ರಸ್ತೂತ ಪಡಿಸಲಾಯಿತು.
ಈ ವಾರ್ಷೀಕೋತ್ಸವಕ್ಕೆ ಚಂದ್ರಯಾನ ಪ್ರೋಜೆಕ್ಟ್ 3 ರ ಮೆನೇಜರ್ ಕುಂದಾಪುರ ಮೂಲದ ಯುವ ವಿಜ್ಞಾನಿ ಆಕಾಶ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿ ಪವರ್ ಪಾಂಯ್ಟ್ ಮೂಲಕ ಚಂದ್ರಯಾನಗಳ 1, 2, 3 ರ ಯೋಜನೆಗಳ ಕಾರ್ಯರೂಪವನ್ನು ವಿವರಣೆ ನೀಡಿದರು. ಚಂದ್ರಯಾನ ಕ್ಷೇತ್ರದಲ್ಲಿ ನಾವು ಅನೇಕ ಸಾಧನೆಗಳನ್ನು ಮಾಡಿದ್ದೇವೆ, ಚಂದ್ರಯಾನದಲ್ಲಿ ಪ್ರಪಂಚದ ಇತರ ದೇಶಗಳಿಂದ ಮುಂದಿದ್ದೇವೆ. ಪ್ರಪಂಚದಲ್ಲಿ 5 ದೇಶಗಳು ಮಾತ್ರ ಬಾಹ್ಯ್ಯಾಕಾಶದಲ್ಲಿ ಅನ್ವೇಷಣೆ ಮಾಡುವ ಸಾಮ್ರಥ್ಯವನ್ನು ಹೊಂದಿವೆ, ಅದರಲ್ಲಿ ಭಾರತ ಒಂದು, ಮಂಗಳ ಗ್ರಹಕ್ಕೆ ಕಕ್ಷೆಗಾಮಿ ಕಳುಹಿಸಿದ 7 ದೇಶಗಳ ಪಯ್ಕಿ ಭಾರತ ಒಂದಾಗಿದೆ ಅಷ್ಟು ಮಾತ್ರವಲ್ಲ ನಾವು ಮಂಗಳ ಗ್ರಹಕ್ಕೆ ಕಕ್ಷೆಗಾಮಿಯನ್ನು ಕಳುಹಿಸಲು ಮೊದಲ ಪ್ರಯತ್ನದಲ್ಲೆ ಸಫಲವಾಗಿದ್ದೇವೆ, ಚಂದ್ರ ಗ್ರಹದ ಮೇಲೆ ಗಗನ ನೌಕೆಯನ್ನು ಇಳಿಸಿದ ನಾಲ್ಕು ರಾಷ್ಟ್ರಗಳಲ್ಲಿ ಭಾರತ ಒಂದಾಗಿದೆ. ಪ್ರಥಮವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಗಗನ ನೌಕೆ ಇಳಿಸಿದ ಕೀರ್ತಿ ಭಾರತದದ್ದಾಗಿದೆ, ಪ್ರಬಲವಾದ ಟೆಲಿಸ್ಕೋಪ್ ಇರುವ ಎಂಟು ದೇಶಗಳ ಪಯ್ಕಿ ಭಾರತ ದೇಶ ನಮ್ಮದಾಗಿದೆ, ಭಾರತವು ಗಗೋಲ ಯಾನಕ್ಕಾಗಿ ಕೋಟಿ ಕೋಟಿ ರೂಪಾಯಿಗಳನ್ನು ವ್ಯವಯಿಸುತ್ತದೆ, ಕಾರಣ ಇದರಿಂದ ನಾನಾ ತರಹದ ಅನ್ಚೇಷಣೆಗಳಿಂದ ಲೋಕಕ್ಕೆ ಉಪಕಾರವಾಗುತ್ತದೆ, ವಿದ್ಯಾರ್ಥಿಗಳು ಹೈಸ್ಕೂಲುಗಳಿಂದಲೇ ಭಾಹ್ಯಕಾಶ ಇಂಜಿನಿಯರಗಳಾಗಲು ಮನಸ್ಸು ಮಾಡಬೇಕು, ಒಂದು ಅನ್ವೇಷಣೆ ಸಫಲವಾಗಲು ಅನೇಕ ವರ್ಷಗಳು ತಗಲುತ್ತವೆ, ಭಾರತಕ್ಕೆ ಗಗೋಲ ಅನ್ವೇಷಣೆಗಾಗಿ ಬಹಳಷ್ಟು ವಿಜ್ಹಾನಿಗಳ ಅಗತ್ಯವಿದೆ” ಎಂದು ಭಾಹ್ಯಕಾಶ ವಿಜ್ಹಾನಿಗಳಾಗಲು ಹುರಿದುಂಬಿಸಿದರು.
(ಆಕಾಶ ಶೆಟ್ಟಿಯವರು ಮೂಲತಹ ಕುಂದಾಪುರದವರಾಗಿದ್ದು, ತಾಯಿ ಮನೆ ಗುಜ್ಜಾಡಿ ಮಂಕಿ, ತಂದೆ ಮನೆ ಕೆರಾಡಿ ಚಪ್ಪರಮಕ್ಕಿಯವರು, ಅವರು ಬೆಂಗಳೂರಿನಲ್ಲಿ ವಾಸವಿದ್ದು, ಮಾವಳ್ಳಿ, ಹೋಲಿ ರೋಜರಿ ಚರ್ಚಿನ ಶಿಕ್ಷಕರಾದ ರತ್ನಾಕರ ಶೆಟ್ಟಿಯವ ದೊಡ್ಡಪ್ಪನ ಮಗನಾಗಿದ್ದು, ಆಕಾಶ ಶೆಟ್ಟಿ, ಮುರ್ಡೇಶ್ವರದ ನಾಡವರಕೇರಿ ಮಾವಳ್ಳಿ ಮುರ್ಡೇಶ್ವರದ ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ)
ಇನ್ನೋರ್ವ ಅತಿಥಿ ಶಾಲಾ ಹಳೆ ವಿದ್ಯಾರ್ಥಿನಿ ಹೋಮಿಯೊ ಪತಿ ವೈದ್ಯಕೀಯದಲ್ಲಿ ರೇಂಕ್ ಪಡೆದ ಡಾ. ಅಸ್ಮಿತಾ ಕೋತ್ “ಈ ಶಾಲೆಯಲ್ಲಿ ತನಗೆ ದೊರಕಿದ ಮಾರ್ಗದರ್ಶನ ನನ್ನನ್ನು ನನ್ನ ಗುರಿ ಮುಟ್ಟಲು ಕಾರಣವಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಇಂತಹ ಶಾಲೆಯಲ್ಲಿ ವಿಧ್ಯೆ ಕಲಿಯಲು ಅವಕಾಶ ಸಿಕ್ಕಿದು ನಿಮ್ಮ ಭಾಗ್ಯ ಎಂದು ತಿಳಿಸುತ್ತಾ, ವಿದ್ಯಾರ್ಥಿಗಳು ಆಟ ಮತ್ತು ಪಾಠದಲ್ಲಿ ಸಮಾನ ರೀತಿಯಲ್ಲಿ ಪರಿಶ್ರಮ ಪಡೆಯಿರಿ” ಎಂದು ತಿಳಿಸಿದರು.
ವಡೇರಹೋಬಳಿ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಸುನೀತಾ ಬಾಂಜ್ ಮಾತನಾಡಿ “ವಿದ್ಯಾರ್ಥಿಗಳ ಜೀವನದಲ್ಲಿ ಮೊಬಾಯ್ಲ್ ಬಹಳ ಪಾತ್ರವಹಿಸುತ್ತದೆ. ಅದನ್ನು ಒಳ್ಳೆದಕ್ಕೆ ಮಾತ್ರ ಬಳಸಬೇಕು. ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪೂರಕವಾಗಿರಬೇಕು, ಅಂದ ಮಾತ್ರಕ್ಕೆ ವಿದ್ಯಾಥಿಗಳಿಗೆ ಬೇಕಾದದ್ದನೆಲ್ಲ ಪೂರಯಿಸುವುದಲ್ಲಾ, ಅಗತ್ಯಕ್ಕೆ ತಕ್ಕಂತೆ ಮಾತ್ರ ಇರಬೇಕು. ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಪೋಷಕರು ನಿಗಾ ವಹಿಸಬೇಕು, ಎನ್ನುತ್ತಾ ಮುಂದೆ ಈ ಶಾಲೆಯ ಕೀರ್ತಿ ಭಾನೆತ್ತರಕ್ಕೆ ಹಾರಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಶಾಲಾ ಜಂಟಿ ಕಾರ್ಯದರ್ಶಿ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ಬಹಳ ಕಡಿಮೆ ಅವಧಿಯಲ್ಲಿ ಬಹಳ ಹೆಚ್ಚು ಕೀರ್ತಿ ಪಡೆದ ಶಾಲೆ ಇದು. ಕಳೆದ 6 ವರ್ಷಗಳಿಂದ ಸತತವಾಗಿ ಶೇಕಡ 100 ಫಲಿತಾಂಶ ಪಡೆಯುತ್ತಾ ಬಂದಿದೆ. ಇದರಿಂದಾಗಿ ಹೆತ್ತವರಿಗೆ ಮತ್ತು ಶಾಲೆಗೂ ಸಂತೋಷ, ನಮ್ಮಲ್ಲಿ ವಿದ್ಯಾರ್ಥಿಗಳ ಅಭಿವ್ರದಿಗಾಗಿ ಸುಸಜ್ಜಿತ ಕಂಪ್ಯೂಟರ್ ಗಳಿವೆ, ಉತ್ತಮ ಗುಣಮಟ್ಟದ ವಿಜ್ಞಾನದ ಪ್ರಯೋಗಾಲಯವಿದೆ, ಉತ್ತಮ ಲೈಬ್ರೆರಿ ಇದೆ. ಪಾಠದ ಜೊತೆಗೆ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿ ಭಾರತದ ಉತ್ತಮ ನಾಗರಿಕರಾಗಲು ಸದಾ ಶ್ರಮ ಪಡುವ ಶಾಲೆ ಇದು” ಎನ್ನುತ್ತಾ ವಾರ್ಷಿಕೋತ್ಸವಕ್ಕೆ ಶುಭಾಶಯಗಳನ್ನು ಕೋರಿದರು.
ವಿಜ್ಞಾನಿ ಆಕಾಶ ಶೆಟ್ಟಿ, ಡಾ.ಅಸ್ಮಿತಾ ಕೋತ್ ಮತ್ತು ಸುಧೀರ್ಘ ಸೇವೆ ಸಲ್ಲಿಸಿ ನಿವøತ್ತಿಯ ಅಂಚಿನಲ್ಲಿರುವ ಸಂತಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಒಂದಾದ, ಸಂತ ಮೇರಿಸ್ ಹಿರಿಯ ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡೋರಾ ಸುವಾರಿಸ್ ಇವರನ್ನು ಸನ್ಮಾನಿಸಲಾಯಿತು.
ಆಟ ಪಾಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಅತಿಥಿಗಳು ವಿತರಿಸಿದರು. ಸಭಾ ಕಾರ್ಯಕ್ರಮವನ್ನು ಶಿಕ್ಷಕಿಯರಾದ ಭಗಿನಿ ಸುನೀತಾ, ನೀತಾ ಮೆಂಡೊನ್ಸಾ, ಶಿಕ್ಷಕಿಯರಾದ ನೀತಾ ಮೆಂಡೊನ್ಸಾ, ಪ್ರೀತಿ ಅಂದ್ರಾದೆ,ಮಮತಾ, ರಮ್ಯಾ ಖಾರ್ವಿ, ನಿಖಿತಾ, ರಂಜಿತಾ, ದೈಹಿಕ ಶಿಕ್ಷಕ ರತ್ನಾಕರ ಶೆಟ್ಟಿ ನಡೆಸಿಕೊಟ್ಟರು. ಹಲವಾರು ವಿಭಿನ್ನ ರೀತಿಯ ನಾಟ್ಯ, ಕುಣಿತ, ಯಕ್ಷಗಾನ, ಕಂಸಾಳೆ, ಗಾರಭ, ಮಣಿಪುರ ನ್ರತ್ಯಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು. ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಾದ ಮಹ್ಮದ್, ಬ್ರಜೇಶ್, ವಿಘ್ನೇಶ್, ಪರ್ಲ್ ಮತ್ತು ರೀಶಿಕಾ ನಿರೂಪಿಸಿದರು.
ವೇದಿಕೆಯಲ್ಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಶಾಲಾ ನಾಯಕಿ ರೀಶಿಕಾ ಜಾಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ತೆರೆಜಾ ಶಾಂತಿ ವಂದಿಸಿದರು.