

ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಕಾಶ್ ಇನ್ಸ್ಟೂಶನ್ ರವರು ನಡೆಸಿದ ಆಕಾಶ್ ನ್ಯಾಷ್ನಲ್ ಟ್ಯಾಲೆಂಟ್ ಹಂಟ್ ಪರೀಕ್ಷೆûಗೆ ಶಾಲೆಯ 10ನೇ ತರಗತಿಯ 34 ವಿದ್ಯಾಥಿಗಳು ಪರೀಕ್ಷೆಗೆ ಹಾಜರಾಗಿದ್ದು ಆಕಾಶ್ ಈಶ್ವರ್ ಮೊಗವೀರ ಇವರು 80 ಪ್ರತಿಶತ ಅಂಕಗಳೊಂದಿಗೆ ಉಡುಪಿ ಜಿಲ್ಲೆಗೆ ತ್ರತೀಯ ರ್ಯಾಂಕ್ ಗಳಿಸಿರುತ್ತಾರೆ.
ತ್ರತೀಯ ರ್ಯಾಂಕ್ ಗಳಿಸಿರುವ ಹೆಮ್ಮೆಯ ವಿದ್ಯಾರ್ಥಿಗೆ ಸಂಚಾಲಕರು ಕುಂದಾಪುರ ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಪಾವ್ಲ್ ರೇಗೊ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜಾ ಶಾಂತಿ, ಆಡಳಿತ ಮಂಡಳಿ, ಭೋಧಕ/ ಭೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ