JANANUDI.COM NETWORK

ಕುಂದಾಪುರ,ಅ.10: ಸ್ಥಳೀಯ ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸತತ 4ನೇ ವರ್ಷ ಶೇ 100% ಫಲಿತಾಂಶ ದಾಖಲಿಸಿದ್ದು 14 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿನಿ ಪಿಂಕಿ ಐತಾಳ್ 608 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಪ್ರೀತೇಶ್ ಕರ್ವಾಲ್ಲೊ 580, ದ್ವಿತೀಯ ಮತ್ತು ರಚನಾ 544 ಅಂಕ ಗಳಿಸಿ ತ್ರತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾಥಿಗಳ ಸಾಧನೆಗೆ ಸಂಸ್ಥೆಯ ಸಂಚಾಲಕರೂ ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರದಾನ ಧರ್ಮ ಗುರು ಅತೀ ವಂದನೀಯ ಸ್ಟ್ಯಾನಿ ತಾವ್ರೊ ಹಾಗೂ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಡಿಸೋಜ ಎ ಸಿ. ಹಾಗೂ ಶಿಕ್ಷಕ ಹಾಗೂ ಶಿಕ್ಷಕೇತರ ಸಿ ಅಭಿನಂದಿಸಿದ್ದಾರೆ.