

ಕುಂದಾಪುರ :ಜು.1: ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶಾಲಾ ರಕ್ಷಕ – ಶಿಕ್ಷಕ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರು ಹಾಗೂ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಆಗಿರುವ ಅತೀ ವಂದನೀಯ ಗುರು ಸ್ಟ್ಯಾನಿ ತಾವ್ರೊರವರು ವಹಿಸಿ ಶಾಲಾ ಗುಣಮಟ್ಟದ ಬಗ್ಗೆ ಪೋಷಕರಿಂದ ಮಾಹಿತಿಯನ್ನು ಕಲೆಹಾಕಿ ಹಣಕ್ಕಿಂತ ಮಿಗಿಲಾದ ಗುಣವಂತರಾದರೆ ಎಲ್ಲರೂ ನಮ್ಮವರೆ ಆಗುತ್ತಾರೆ. ಮಕ್ಕಳು ಹಣವಂತರಾಗುವುದಕ್ಕಿಂತ ಗುಣವಂತರಾಗಬೇಕು’ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಬಿಷಪ್ ಹೌಸಿನ ಕುಟುಂಬ ಆಯೋಗದ ನಿರ್ದೇಶಕರು ಆಗಿರುವ ಲೆಸ್ಲಿ ಆರೋಜಾ ’ಸಾಧನೆಯಲ್ಲಿ ಮಕ್ಕಳು, ಶಿಕ್ಷಕರು, ಪೋಷಕರ ಪಾತ್ರ ಬಹುಮುಖ್ಯ ಆಗಿರುತ್ತೆ. ಮಕ್ಕಳನ್ನು ಯಾರೊಂದಿಗೂ ಹೋಲಿಸದೆ ಅವರನ್ನು ಪ್ರೋತ್ಸಾಹಿಸಿ ಮಕ್ಕಳೊಂದಿಗೆ ಸ್ನೇಹಿತರಂತೆ ಇದ್ದು, ಅವರಿಗೆ ಮೌಲ್ಯಯುತ ವಿಚಾರಗಳು ಮನೆಯಲ್ಲಿಯೆ ಸಿಗಬೇಕು, ಮಕ್ಕಳಿಗೆ ಪೋಷಕರು ತಮ್ಮ ಸಮಯವನ್ನು ನೀಡಬೇಕು” ಎಂದು ಹೇಳಿ ಹೆಣ್ಣು ಮಕ್ಕಳ ಸಮಸ್ಯೆಯ ಸಮಯದಲ್ಲಿ ಮಕ್ಕಳೊಂದಿಗೆ ತಾಯಂದಿರು ಹೇಗೆ ಇರಬೇಕು ಎಂದು ತಿಳಿಸಿದರು.
ಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ತೆರೆಜ್ ಶಾಂತಿಯವರು ಶಾಲೆಯ ನೀತಿ ನಿಯಮಗಳ ಬಗ್ಗೆ ತಿಳಿಸಿದರು. ಶಾಲಾ ಹಿಂದಿನ ವರ್ಷದ ಸಭೆಯ ವರದಿಯನ್ನು ಶಿಕ್ಷಕಿ ಅಂಕಿತಾ, ಹಿಂದಿನ ವರ್ಷದ ಶೈಕ್ಷಣಿಕ ವರದಿಯನ್ನು ಶಿಕ್ಷಕಿ ಪ್ರತಿಮಾ ಶೆಟ್ಟಿಯವರು ವಾಚಿಸಿದರು. ಶ್ರೀಮತಿ ನಿಮಿಷಾರವರು ಅಯವ್ಯಯ ವಾಚಿಸಿದರು. ಶಿಕ್ಷಕ ಲೂವಿಸ್ ಪ್ರಶಾಂತ್ ರೆಬೆರೋ ಸ್ವಾಗತಿಸಿದರು. ಶಿಕ್ಷಕಿ ಮಮತಾ ವಂದಿಸಿದರು. ಶಿಕ್ಷಕಿ ರಂಜಿತಾ ಕಾರ್ಯಕ್ರಮ ನಿರೂಪಿಸಿದರು.

















