JANANUDI.COM NETWORK EDITOR : BERNARD D’COSTA
ಕುಂದಾಪುರ, ಜು.7: ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಇಲ್ಲಿ ಶಾಲಾ ರಕ್ಷಕ ಶಿಕ್ಷಕ ಸಭೆಯ 6 ರಂದು ನಡೆಯಿತು. ಇದರ ಅಧ್ಯಕ್ಷತೆಯನ್ನು ಶಾಲಾ ಜಂಟಿ ಕಾರ್ಯದರ್ಶಿ ಅ| ವಂ| ಧರ್ಮಗುರು ಸ್ಟ್ಯಾನಿ ತಾವ್ರೊ ವಹಿಸಿದ್ದು. “ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರು ಮತ್ತು ಶಿಕ್ಷಕರು ಸಮಾನ ಪಾತ್ರವನ್ನು ವಹಿಸಬೇಕಾಗುತ್ತದೆ. ಈ ಪಾತ್ರವನ್ನು ಚೆನ್ನಾಗಿ ಪೋಷಕರು ಮತ್ತು ಶಿಕ್ಷಕರು ನಿರ್ವಹಿಸಿದರೆ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಯಾಗುತ್ತೆ” ಎಂದು ತಿಳಿಸಿ ಪೋಷಕರಿಂದಲೂ ಮಾಹಿತಿಯನ್ನು ಪಡೆದುಕೊಂಡರು.
“ಪೋಷಕರು ತಮ್ಮ ಹದಿಹರೆಯದ ಮಕ್ಕಳನ್ನು ಸ್ನೇಹಿತರಂತೆ ನಡೆಸಿಕೊಳ್ಳಬೇಕು, ಅವರಿಗೆ ಈ ಪ್ರಾಯದಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಬೇಕು” ಎಂದು ಮಾತಾ ಆಸ್ಪತ್ರೆಯ ಮನೋರೋಗ ತಜ್ಞರು ಆಗಿರುವ ಡಾ| ಪ್ರಕಾಶ್ ತೋಳಾರ್ ಪೋಷಕರಿಗೆ ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಸಿ| ತೆರೇಜ್ ಶಾಂತಿಯವರು ಶಾಲೆಯ ನೀತಿ ನಿಯಮಗಳ ಬಗ್ಗೆ ಪೋಷಕರಿಗೆ ತಿಳಿಸಿದರು. ಶಾಲಾ ವರದಿಯನ್ನು ಪ್ರತಿಮಾ ಬಿ ಯವರು ವಾಚಿಸಿದರು. ಶಾಲಾ ಅಧ್ಯಾಪಕ ವೃಂದದವರು ತಮ್ಮ ತಮ್ಮ ವಿಷಯದ ಬಗ್ಗೆ ಮಹಿತಿ ನೀಡಿದರು. ಶಿಕ್ಷಕಿ ರಂಜಿತಾ ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿ, ಸ್ವಾಗತಿಸಿದರು. ಶಿಕ್ಷಕಿ ಕುಮಾರಿ ವಿದ್ಯಾ ನಿರೂಪಿಸಿದರು. ಶಿಕ್ಷಕ ಲುವಿಸ್ ಪ್ರಶಾಂತ್ ರೇಬೆರೊ ವಂದಿಸಿದರು.